ಶಿಡ್ಲಘಟ್ಟ : 2024 ರ ಲೋಕಸಭಾ ಚುನಾವಣೆ ಹಿನ್ನೆಲೆ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಗರ ಸೇರಿದಂತೆ ತಾಲ್ಲೂಕಿನಾದ್ಯಂತಹ ನಾಗರೀಕರಿಗೆ ವ್ಯಾಪಕವಾಗಿ ಚುನಾವಣಾ ಜಾಗೃತಿ ಅಭಿಯಾನ ನಡೆಸುತ್ತಿದ್ದು, ಇಂದು ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಜಿ. ಮುನಿರಾಜು ಅವರು ತಾಲ್ಲೂಕಿನ ಪತ್ರಕರ್ತರೊಂದಿಗೆ ವಿಷಯ ವಿನಿಯಮ ಮಾಡುವ ಸಲುವಾಗಿ ಮಾಹಿತಿ ನೀಡಿ ಕರೆಯಲಾಗಿತ್ತು. ತಾಲ್ಲೂಕಿನ ಪತ್ರಕರ್ತರು ಚುನಾವಣಾ ಕಾರ್ಯನಿಮಿತ್ತ ಶಿಡ್ಲಘಟ್ಟದಿಂದ ಸುದ್ದಿ ಸಂಗ್ರಹಿಸುವ ನಿಟ್ಟಿನಲ್ಲಿ ಕೋಲಾರಕ್ಕೆ ತೆರಳಿದ್ದರಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಕರಗಪ್ಪ ಭಾಗವಹಿಸಿದ್ದರು. ಹಾಗೂ ಪತ್ರಕರ್ತರಾದ ಸಿವಿ ಲಕ್ಷಣರಾಜು, ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ, ಮಂಜುನಾಥ್ ಕೆ. ಎಂ. ಗುರುಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾಲ್ಲೂಕು ಪಂಚಾಯಿತಿ ಇ.ಓ ಮುನಿರಾಜು ಅವರು ಪತ್ರಕರ್ತರೊಂದಿಗೆ ಸಂವಾದ ನಡೆಸಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಗ್ರಾಮ ಪಂಚಾಯಿತಿವಾರು ಚುನಾವಣಾ ಜಾಗೃತಿ ಅಭಿಯಾನ ನಡೆಸಲಾಗಿದೆ. ತಾಲ್ಲೂಕಿನ ಎಲ್ಲಾ ಪತ್ರಕರ್ತರು ಒಳಗೊಂಡಂತೆ ನಗರದಲ್ಲಿ ಜಾಗೃತಿ ಜಾಥಾ ಮೆರಣಿಗೆ ನಡೆಸಲಾಗುವುದು ಪ್ರಜಾಪ್ರಭುತ್ವದ ವ್ಯವಸ್ಥೆ ಚುನಾವಣೆ ಮಹತ್ವ, ಮತದಾನ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೊಂದಿಗೆ ದೂರವಾಣಿ ಮೂಲಕ ಮುನಿರಾಜು ಅವರು ಕರೆ ಮಾಡಿ ಸೂಕ್ತ ದಿನಾಂಕವನ್ನು ನಿಗಧಿಮಾಡುವಂತೆ ಕೋರಿದರು. ಬಳಿಕ ಪತ್ರಕರ್ತರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಚುನಾವಣೆಯ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಪತ್ರಕರ್ತರು ಚುನಾವಣಾ ಸಂದರ್ಭದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲದೆ ಸುದ್ದಿ ಸಂಗ್ರಹ ತಮ್ಮ ಕಾರ್ಯನಿರ್ವಹಿಸಲು ತಾಲ್ಲೂಕಿನ ಎಲ್ಲಾ ಪತ್ರಕರ್ತರಿಗೆ ಚುನಾವಣಾಧಿಕಾರಿಗಳು ಗುರುತಿನ ಚೀಟಿ ನೀಡಬೇಕೆಂದು ಕಛೇರಿಯಲ್ಲಿ ಲಿಖಿತ ಮನವಿಯನ್ನ ಸಲ್ಲಿಸಲಾಯಿತು.