ಗೌರಿಬಿದನೂರು: ಕಳೆದೊಂದು ತಿಂಗಳಿನಿಂದ ಇಲ್ಲಿನ ರೈಲ್ವೆ ಮೇಲ್ಸೇತುವೆಯ ರಸ್ತೆ ಬದಿ ಕಂಬಗಳಿಗೆ ಅಳವಡಿಸಿದ್ದ ಸುಮಾರು 10 ಎಲ್ ಇಡಿ ದೀಪಗಳು ಉರಿಯದೆ ಇಡೀ ವ್ಯಾಪ್ತಿ ಕಗ್ಗತ್ತಲಾಗಿ ಜನಾಕ್ರೋಷಕ್ಕೆ ತುತ್ತಾಗಿತ್ತು.
ಈ ಬಗ್ಗೆ ನಗರಸಭಾ ಮಾಜಿ ಅಧ್ಯಕ್ಷೆ ರೂಪಾಅನಂತರಾಜು ಹಲವು ಭಾರಿ ರೈಲ್ವೆ ಅಧಿಕಾರಿಗಳ ಗಮನಸೆಳೆದಿದ್ದರು, ನಂತರ ಸೋಮವಾರ ರೈಲ್ವೆ ಇಂಜಿನಿಯರ್ ರನ್ನು ಸಂಪರ್ಕಿಸಿ ಮೇಲ್ಸೇತುವೆ ಮೇಲಿನ ವಿದ್ಯುತ್ ಬೀದಿ ದೀಪಗಳು ಉರಿಯದಿದ್ದರೆ ಮುಂದಾಗುವ ಗಂಭೀರ ಅವಘಡಗಳನ್ನು ವಿವರಿಸಿದ ನಂತರ ಮಂಗಳವಾರ ಬೀದಿ ದೀಪಗಳ ಸರಬರಾಜು ಸಂಸ್ಥೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಇಡೀ ದಿನ ಪ್ರಯಾಸಪಟ್ಟು ಕೆಟ್ಟುಹೋಗಿದ್ದ ಬೀದಿದೀಪಗಳಿಗೆ ಬಿಡಿ ಭಾಗಗಳನ್ನು ಅಳವಡಿಸಿದ ನಂತರ ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನಗಳಿಂದ ಕೆಲ ಕಡೆ ಕಗ್ಗತ್ತಲಾಗಿದ್ದ ರೈಲ್ವೆ ಮೇಲ್ಸೇತುವೆ ರಸ್ತೆ ಇದೀಗ ಬೆಳಕಿನಿಂದ ಪ್ರಜ್ವಲಿಸುವಂತಾಗಿದೆ.
ಈ ಸಂದರ್ಭದಲ್ಲಿ ನಗರಸಭಾ ಮಾಜಿ ಸದಸ್ಯರಾದ ಅನಂತು ಮತ್ತು ಡಿ.ಜೆ ಚಂದ್ರಮೋಹನ್ ಸೇರಿ ಇತರರಿದ್ದರು.