Monday, December 23, 2024
Homeಜಿಲ್ಲೆನಲ್ಲಿಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಡೇರಿ ಕಟ್ಟಡವನ್ನು ಉದ್ಘಾಟನೆ.

ನಲ್ಲಿಮರದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಡೇರಿ ಕಟ್ಟಡವನ್ನು ಉದ್ಘಾಟನೆ.

ಶಿಡ್ಲಘಟ್ಟ:  ನಗರದ ಹೊರವಲಯದ ನಲ್ಲಿಮರದಹಳ್ಳಿಯ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು  ಶಾಸಕ ಬಿ.ಎನ್ ರವಿಕುಮಾರ್ ಅವರು ಉದ್ಘಾಟಿಸಿದರು.  ಈ ವೇಳೆ ಮಾತನಾಡಿದ ಅವರು ಹಾಲು ಉತ್ಪಾದಕರು ಗುಣಮಟ್ಟದ ಹಾಲನ್ನು ಡೇರಿಗೆ ಪೂರೈಕೆ ಮಾಡಿದ್ದಲ್ಲಿ  ಉತ್ತಮ ಬೆಲೆ ಸಿಗುತ್ತದೆ.  ರೈತರು ಹೈನುಗಾರಿಕೆಯಲ್ಲಿ ಯಶಸ್ಸು ಕಾಣವಂತಾಗಬೇಕು ಎಂದು ಹೇಳಿದರು.

ಡೇರಿಗೆ ಗುಣಮಟ್ಟದ ಹಾಲು ಪೂರೈಕೆ ಮಾಡಿ ಉತ್ತಮ ದರ ಪಡೆಯಬೇಕು. ನಮ್ಮ ತಾಲೂಕಿನಲ್ಲಿ ರೇಷ್ಮೆ ಮತ್ತು ಹೈನುಗಾರಿಕೆಯ ಮೇಲೆ ಸಾಕಷ್ಟು ಕುಟುಂಬಗಳು ಅವಲಂಬಿಸಿದ್ದು, ಇಲ್ಲಿನ ರೈತರಿಗೆ ಹೈನುಗಾರಿಕೆಯೇ ಪ್ರಮುಖ ಕಸುಬಾಗಿದೆ. ರೈತರು ನೆಮ್ಮದಿಯಾಗಿ ಜೀವನ ಸಾಗಿಸಲು ಡೈರಿಗಳು ಪ್ರಮುಖಪಾತ್ರ ವಹಿಸುತ್ತಿವೆ. ಹಾಲು ಉತ್ಪಾದಕರು ನಗರದ ಹಾಲಿನ ಉತ್ಪಾದನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಡೇರಿಗಳಿಗೆ ಹಾಲು ಹಾಕಿ ಸದೃಢರಾಗಬೇಕು ಎಂದರು.

ಕೆಎಂ.ಎಫ್. ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಮಾತನಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಉತ್ತಮವಾಗಿ ನಡೆಯುತ್ತಿವೆ. ಆಡಳಿತ ಮಂಡಳಿ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಆ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಕೊಚಿಮುಲ್ ಮಾಜಿ ನಿರ್ದೇಶಕರಾದ ಕೆ.ಗುಡಿಯಪ್ಪರವರು ಅವರ ಅಧಿಕಾರ ಅವಧಿಯಲ್ಲಿ ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಘಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿ ಹಾಲು ಉತ್ಪಾದಕರ ಕನಸು ನನಸುಮಾಡಿದ್ದಾರೆ. ಅವರನ್ನು ನಮ್ಮ ತಾಲೂಕಿನ ಹಾಲಿನ ಪಿತಾಮಹ ಎಂದರೆ ತಪ್ಪಾಗಲಾರದು. ಅಮುಲ್ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಇರುವ ಹಾಲು ಮಾರಾಟ ಮಾಡುವ ಖಾಸಗಿ ಸಂಸ್ಥೆಗಳು 52 ರೂ ಇರುವ ಹಾಲನ್ನು 54 ರೂಗೆ ಮಾರಾಟ ಮಾಡುತ್ತಾರೆ ಆದರೆ ನಾವು 42 ರೂ ಗೆ ಮಾರಾಟ ಮಾಡುತ್ತಿದ್ದೇವೆ ಎಂದರು. ಇನ್ನೂ ಬೇರ್ಪಟ್ಟಿದ್ದ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಈಗ ಒಂದಾಗಿದೆ.  ಈಗ ಮತ್ತೊಮ್ಮೆ ಪ್ರತ್ಯೇಕ ಒಕ್ಕೂಟ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕವಾದಲ್ಲಿ ಅದಕ್ಕೆ ಒಳ್ಳೆಯ ಭವಿಷ್ಯವಿದೆ. ಮಾರುಕಟ್ಟೆ ಪ್ರದೇಶಗಳು ಇರುವುದರಿಂದ ಹಾಲು ಉತ್ಪಾದನೆ ಹೆಚ್ಚು ಅವಶ್ಯಕತೆ ಇರುತ್ತದೆ ಚಿಕ್ಕಬಳ್ಳಾಪುರ ಜಿಲ್ಲೆಯ ಹಾಲು ಉತ್ಪಾದನೆಯಲ್ಲಿ ಇಳಿಮುಖ ಕಂಡಿದ್ದು, ಒಕ್ಕೂಟಕ್ಕೆ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಕಡಿಮೆಯಾಗಿದೆ. ಉತ್ಪಾದಕರು ಡೇರಿಗಳಿಗೆ ಹಾಲನ್ನು ಹಾಕಿ ಹಾಲಿನ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಸದೃಢವಾಗಿ ಬೆಳೆಯಲು ಸಹಕರಿಸಬೇಕು ಹಾಗೆಯೇ ಒಕ್ಕೂಟದಿಂದ ನೀಡುವ ಸೌಲಭ್ಯಗಳನ್ನು ಪಡೆಯಬೇಕು ಎಂದರು.

ಡೇರಿ ನೂತನ ಕಟ್ಟಡ ಉದ್ಘಾಟನೆಯ ವೇದಿಕೆ ಕಾರ್ಯಕ್ರಮವನ್ನು ಚಲನಚಿತ್ರ ನಟ ಕಲಾವಿದ ಸಿಎನ್ ಮುನಿರಾಜು ನಿರೂಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗಣ್ಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೋಚಿಮೂಲ್ ಮಾಜಿ ನಿರ್ದೇಶಕ ಗುಡಿಯಪ್ಪ,  ಕೋಚಿಮುಲ್ ಉಪ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್ ರವಿಕಿರಣ್, ಡಾಲ್ಟಿನ್ ನಾಗರಾಜ್ , ನಲ್ಲಿಮರದಹಳ್ಳಿ  ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ನರಸಿಂಹಮೂರ್ತಿ, ರೈತ ಸಂಘದ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಕಲಾವಿದ ಸಿ.ಎನ್ ಮುನಿರಾಜು, ನಗರಸಭೆ ಅಧ್ಯಕ್ಷ ಎಂ.ವಿ ವೆಂಕಟಸ್ವಾಮಿ, ಸದಸ್ಯರಾದ ಲಕ್ಷ್ಮಯ್ಯ, ಕೃಷ್ಣಮೂರ್ತಿ, ಸೇರಿದಂತೆ ನಲ್ಲಿಮರದಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎನ್ ಮುನಿನಾಗಪ್ಪ, ಕಾರ್ಯದರ್ಶಿ ರಾಮು, ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!