Monday, December 23, 2024
Homeಜಿಲ್ಲೆಶಿಡ್ಲಘಟ್ಟದ ಉಲ್ಲೂರುಪೇಟೆಯ ನೂತನ ಹಾಲಿನ ಡೈರಿ ಪ್ರಾರಂಭೋತ್ಸವ.

ಶಿಡ್ಲಘಟ್ಟದ ಉಲ್ಲೂರುಪೇಟೆಯ ನೂತನ ಹಾಲಿನ ಡೈರಿ ಪ್ರಾರಂಭೋತ್ಸವ.

ಶಿಡ್ಲಘಟ್ಟ : ನಗರದ ಉಲ್ಲೂರು ಪೇಟೆಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಡೈರಿ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸೋಮವಾರದಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಬಿಜೆಪಿ- ಕಾಂಗ್ರೇಸ್ ಮುಖಂಡರು ಭಾಗವಹಿಸಿ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಭಾಗವಹಿಸಿದ್ಸರು ಈ ವೇಳೆ ಮಾತನಾಡಿದ ಅವರು ಶಿಡ್ಲಘಟ್ಟ ನಗರದ 13 ನೇ ವಾರ್ಡ್ ಉಲ್ಲೂರು ಪೇಟೆಯಲ್ಲಿ ಹಾಲಿನ ಡೇರಿ ಸ್ಥಾಪನೆಯಾಗಿರುವುದರಿಂದ ಇಲ್ಲಿನ ಮತ್ತು ಸುತ್ತಮುತ್ತಲಿನ ಹಾಲು ಉತ್ಪಾದಕರಿಗೆ ಅನುಕೂಲವಾಗಿದೆ. ರೇಷ್ಮೆ ನಗರದಲ್ಲಿ ಹಾಲಿನ ಡೇರಿ ಪ್ರಾರಂಭವಾಗಿರುವುದು ಸಂತಸದ ವಿಷಯವಾಗಿದೆ, ಡೈರಿ ಇದ್ದರೆ ರೈತರಿಗೆ ಎಲ್ಲಾ ರೀತಿಯ ಅನುಕೂಲ ಸಿಗುವ ಮೂಲಕ, ರೈತರು ನೆಮ್ಮದಿಯಾಗಿ ಜೀವನ ಸಾಗಿಸಲು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾಂಗ್ರೇಸ್ ಮುಖಂಡ ಪುಟ್ಟು ಆಂಜಿನಪ್ಪ ಮಾತನಾಡಿ, ನಗರದ ಉಲ್ಲೂರುಪೇಟೆ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಮಾಡುವ ರೈತರು ಇದ್ದಾರೆ. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ. ಇಲ್ಲಿನ ರೈತ ಕುಟುಂಬಗಳಿಗೆ ಹಾಲಿನ ಡೇರಿ ತುಂಬಾ ಅವಶ್ಯಕತೆ ಇದೆಯೆಂದು ಮನಗಂಡು ಹಲವಾರು ಮುಖಂಡರ ಪ್ರಯತ್ನ ಮತ್ತು ಶ್ರಮದಿಂದ ನೂತನ ಹಾಲಿನ ಡೇರಿ ಪ್ರಾರಂಭ ಮಾಡಲಾಗಿದೆ. ಕಳೆದ ಹಲವು ದಿನಗಳ ಹಿಂದೆ ಡೇರಿಗೆ ಚುನಾವಣೆ ಸಹ ನಡೆದು ಅಧ್ಯಕ್ಷರು ಆಯ್ಕೆಯಾಗಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ನಿರ್ದೇಶಕರು ಒಟ್ಟಾಗಿ ಕೆಲಸ ಮಾಡಿ ಈ ಸಂಘವನ್ನು ಮುಂದಿನ ಅಭಿವೃದ್ದಿ ಪಥದತ್ತ ಕೊಂಡೊಯ್ಯವ ಮೂಲಕ ಹಾಲು ಉತ್ಪಾದಕ ರೈತರ ಹಿತವನ್ನು ಕಾಪಾಡವಂತಹ ಕೆಲಸ ಆಗಬೇಕು ಎಂದರು.

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪುರುಷೋತ್ತಮ್, ಮಾಜಿ ಶಾಸಕ
ರಾಜಣ್ಣ, ಬಿಜೆಪಿ ಮುಖಂಡ ಆನಂದ್ ಗೌಡ, ಕಾರ್ಯದರ್ಶಿ ಶ್ರೀನಿವಾಸ್, ಉಪಾಧ್ಯಕ್ಷ ತೇಜಸ್, ನಿರ್ದೇಶಕರುಗಳಾದ ಕಿರಣ್ ಕುಮಾರ್, ನಾರಾಯಣಸ್ವಾಮಿ.ಕೆ, ಮುನಿರೆಡ್ಡಿ, ಬಿ. ನಾರಾಯಣಸ್ವಾಮಿ, ವೇಣುಗೋಪಾಲ್, ಕೆ.ಟಿ ನಟರಾಜ್, ರಮೇಶ್, ಅಶ್ವಥಮ್ಮ, ನಳಿನಿ, ನಾಗರಾಜ್ , ಡಿಎಂ ಕಿರಣ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!