28- ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಮತ್ತು ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಗಳ ಹಣೆ ಬರಹಕ್ಕೆ ಮತದಾರ ಪ್ರಭು ಮುದ್ರೆ.
ಶಿಡ್ಲಘಟ್ಟ : ಪ್ರಜಾಪ್ರಭುತ್ವದ ಹಬ್ಬದ ದಿನ ಚುನಾವಣೆ ಏಪ್ರಿಲ್ 26 ರಂದು ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 28- ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೇಸ್, ಮತ್ತು ಜೆಡಿಎಸ್ – ಬಿಜೆಪಿ ಮೈತ್ರಿ ಹಾಗೂ ಇತರೆ ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರ ನಿರ್ಧಾರ ಮಾಡಿ ಮತ ಪೆಟ್ಟಿಗೆಯಲ್ಲಿ ಮುದ್ರೆ ಹಾಕಿದ್ದಾನೆ. ಅಭ್ಯರ್ಥಿಗಳ ಹಣೆ ಬರಹ ಮತಪೆಟ್ಟಿಗೆಯಲ್ಲಿ ಭದ್ರವಾಗಿ ಅಡಗಿದೆ. ಜೂನ್ 04 ರಂದು ಫಲಿತಾಂಶ ಗೊತ್ತಾಗಲಿದೆ. ಕೋಲಾರ ಲೋಕಸಭಾ ಕ್ಷೆತ್ರದ ವ್ಯಾಪ್ತಿಗೆ ಒಳಪಟ್ಟಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ತಾಲ್ಲೂಕಿನ 244 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,05789 ಮತದಾರರಿದ್ದು, ಪುರುಷರು 1,02327, ಮಹಿಳೆಯರು 1,03453, ಇತರೆ 09 ಮತದಾರರಿದ್ದು, ತಾಲ್ಲೂಕಿನ ಎಲ್ಲಾ 244 ಮತಗಟ್ಟೆಗಳಲ್ಲಿ ಬೆಳಗ್ಗೆ 7:00 ರಿಂದ ಮತದಾನ ಆರಂಭವಾಗಿ ಶಾಂತಿಯುತವಾಗಿ ಮತದಾನ ನಡೆಯಿತು.
ಸಂಜೆ 7:00 ಗಂಟೆಯವರೆಗೂ ಶೇಕಡಾ 81.04% ರಷ್ಟು ಮತದಾನವಾಗಿತ್ತು. ಪುರುಷರು – 84744 ಮಹಿಳೆಯರು – 82031 ಇತರೆ -1 ಒಟ್ಟು – 166776 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು,
ಇನ್ನೂ ಸಂಜೆ 6:00 ಗಂಟೆಯ ನಂತರೂ ಕೆಲವು ಮತಗಟ್ಟೆಗಳಲ್ಲಿ ಟೋಕನ್ ವಿತರಿಸಿ ಮತದಾನ ನಡೆದಿದ್ದು, ಅಂತಿಮವಾಗಿ ಶೇಕಡಾ 82% ರಷ್ಟು ಮತದಾನವಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತಾಲ್ಲೂಕಿನ ವಿವಿಧ ಮತಗಟ್ಟೆಗಳಲ್ಲಿ ವಯೋವೃದ್ಧರು ಮತ್ತು ವಿಶೇಷ ಚೇತನರು ವೀಲ್ ಚೇರುಗಳಲ್ಲಿ ಬಂದು ಮತ ಚಲಾಯಿಸಿದರು.
ಈ ಬಾರಿ ಅತಿಹೆಚ್ಚು ಮತದಾನವಾಗಿದೆ. ಅಂತೂ ಅಭ್ಯರ್ಥಿಗಳ ಹಣೆ ಬರಹ ಮತದಾರ ಪ್ರಭುಗಳು ನಿರ್ಧಾರ ಮಾಡಿದ್ದಾರೆ. ಜೂನ್ 04 ರಂದು ಫಲಿತಾಂಶ ಹೊರಬರಲಿದೆ. ಅಭ್ಯರ್ಥಿಗಳು ಸೋಲು ಗೆಲುವಿನ ಲೆಕ್ಕಾಚಾರದಲ್ಲಿದ್ದು, ಕ್ಷೇತ್ರದ ಜನತೆ ಚುನಾವಣಾ ಫಲಿತಾಂಶಕ್ಕಾಗಿ ಎದರುನೋಡುವಂತಾಗಿದೆ.