ಶ್ರೀ ಧರ್ಮಸ್ಥಳ ಸಂಘದಿಂದ ಕೆರೆ ಹಸ್ತಾಂತರ ಹಾಗೂ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ.
ಶಿಡ್ಲಘಟ್ಟ : ಎಲ್ಲಿ ಭಗವಂತನ ಪೂಜೆ ಮಾಡುತ್ತಾರೋ ಅವರ ಮನೆ ಮಂದಿಗೆಲ್ಲಾ ಸುಖ ಶಾಂತಿ ತೃಪ್ತಿ ಎಲ್ಲವೂ ಸಿಗುತ್ತದೆ, ಲಕ್ಷ್ಮಿ ಪೂಜೆ ಜೊತೆಗೆ ಸರಸ್ವತಿ ಪೂಜೆ ಸಹ ಅಷ್ಠೆ ಮುಖ್ಯ ನಾವು ಗಳಿಸಿದ ಸಂಪತ್ತುನ್ನು ಉಳಿಸಿಕೊಳಲು ಸರಸ್ವತಿ ಜ್ಞಾನ ನೀಡಬೇಕು, ಲಕ್ಷ್ಮಿ ಸರಸ್ವತಿ ಪೂಜೆ ಮಾಡುವುದರಿಂದ ನಾವು ಗಳಿಸಿದ ಸಂಪತ್ತು ಉತ್ತಮ ರೀತಿಯಲ್ಲಿ ಬಳಸಲು ಸಾದ್ಯವಾಗುತ್ತದೆ. ಲಕ್ಷ್ಮಿ ಪೂಜೆಯಷ್ಠೆ ಪ್ರಾಮುಖ್ಯತೆಯನ್ನು ಸರಸ್ವತಿ ಪೂಜೆಗೂ ಕೊಡಬೇಕು ಎಂದು ಮಳ್ಳೂರು ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಶ್ರೀ ಪೂರ್ಣಾನಂದ ಸ್ವಾಮೀಜಿ ಪ್ರವಚನ ನೀಡಿದರು.
ತಾಲ್ಲೂಕಿನ ಬೆಳ್ಳೂಟಿ ಗೇಟ್ ಗುಟ್ಟಾಂಜನೇಯಸ್ವಾಮಿ ಕಲ್ಯಾಣಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಮ್ಮೂರು-ನಮ್ಮ ಕೆರೆ ಅಭಿವೃದ್ದಿ ವ್ಯವಸ್ಥಾಪನಾ ಸಮಿತಿ ಬೆಳ್ಳೂಟಿ-ಹಿತ್ತಲಹಳ್ಳಿ, ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ವ್ಯವಸ್ಥಾಪನಾ ಸಮಿತಿ ಬೆಳ್ಳೂಟಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಬೆಳ್ಳೂಟಿ ವಲಯ ಇವರ ಆಶ್ರಯದಲ್ಲಿ ಪರಮಪೂಜ್ಯ ಪದ್ಮಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ.ಹೇಮಾವತಿ ವಿ.ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಕೆರೆ ಹಸ್ತಾಂತರ ಮತ್ತು ಸಾಮೂಹಿಕ ಶ್ರೀ ಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮನೆಗಳಲ್ಲಿ ದೇವರ ನಾಮ ಸ್ಮರಣೆ, ನಿಯಮ ನಿಷ್ಠೆಗಳು ಅನ್ನಧಾನ ಮಾಡಬೇಕು, ಎಲ್ಲಿ ಅನ್ನದಾನ ನಡೆಯುತ್ತದೆ. ಅಲ್ಲಿ ಶಿವನ ವಾಸಸ್ಥಾನವಾಗುತ್ತದೆ ಎಂದು ಶಾಸ್ರದಲ್ಲಿ ಹೇಳುತ್ತದೆ, ಪ್ರತಿನಿತ್ಯ ಭಗಂತನ ನಾಮಸ್ಮರಣೆ ಮಾಡಿದಾಗ ಆಮನೆಯಲ್ಲಿ ಸುಖ ಸಂತೋಷದಿಂದ ಇರುತ್ತಾರೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ಜಿಲ್ಲಾ ಯೋಜನಾಧಿಕಾರಿ ಪ್ರಶಾಂತ್ ಸಿ.ಎಸ್, ಮಾತನಾಡಿ ಧರ್ಮಸ್ಥಳ ಪೂಜ್ಯರು ಸಂಘದಿಂದ ಬರುವ ಹಣವನ್ನು ಸಮಾಜದ ಸೇವಾ ಕಾರ್ಯಗಳಿಗೆ ಬಳಸುತ್ತಿದ್ದಾರೆ, ಸಂಸ್ಥೆಗೆ ಬರುವ ಸೇವಾ ಶುಲ್ಕ ಒಂದೊಂದು ರೂಪಾಯಿಯೂ ಸಮಾಜ ಮುಖಿ ಕಾರ್ಯಗಳಾದ ಕೆರೆ ಹೂಳು ಎತ್ತುವ ಕೆಲಸಗಳಿಗೆ ಬಳುಸುತ್ತಾರೆ. ತಾಲ್ಲೂಕಿನಲ್ಲಿ 20 ಕೆರೆಗಳ ಹೂಳು ತೆರೆಯವ ಕೆಲಸ ಮಾಡಿದೆ, ರಾಜ್ಯದಲ್ಲಿ 790 ಕೆರೆಗಳ ಹೂಳು ಎತ್ತುವ ಕೆಲಸಮಾಡಲು ಕೋಟ್ಯಾಂತರ ಹಣ ವ್ಯಯ ಮಾಡಿದ್ದಾರೆ, ಧರ್ಮಸ್ಥಳ ಹಣ ಮತ್ತು ನಮ್ಮ ಸಂಸ್ಥೆಯಲ್ಲಿ ಸೇವಾ ಶುಲ್ಕದ ಲಾಭವನ್ನು ಬಳಸಲಾಗುತ್ತಿದೆ ಎಂದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ) ವತಿಯಿಂದ ಬೆಳ್ಳೂಟಿ ಕೆರೆ ಹೂಳು ತೆಗೆದು ಅಭಿವೃದ್ದಿ ಪಡಿಸಿದ ಕೆರೆಯನ್ನು ತಾಲ್ಲೂಕು ದಂಡಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಬೆಳ್ಳೂಟಿ ಸಾಮೂಹಿಕ ಶ್ರೀ ಲಕ್ಷ್ಮಿ ಪೂಜಾ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಿತ್ತಲಹಳ್ಳಿ ಹೆಚ್.ಕೆ.ಸುರೇಶ್,ತಾಲ್ಲೂಕು ದಂಡಾಧಿಕಾರಿ ಬಿ.ಎನ್.ಸ್ವಾಮಿ, ಮಾಜಿ ಗ್ರಾ.ಪಂ.ಸದಸ್ಯೆ ವರಲಕ್ಷ್ಮಿ ಸಂತೋಷ್, ಗ್ರಾಪಂ ಅಧ್ಯಕ್ಷ ಹೆಚ್.ಆರ್.ವೆಂಕಟೇಶ್, ಚಿಕ್ಕಬಳ್ಳಾಪುರ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವೆಂಕಟಸ್ವಾಮಿರೆಡ್ಡಿ, ಎ.ಪಿ.ಎಂ.ಸಿ. ಮಾಜಿ ಉಪಾದ್ಯಕ್ಷ ಎಸ್.ವೆಂಕಟೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಯೋಜನಾಧಿಕಾರಿ ಸುರೇಶ್ ಗೌಡ ಎಸ್, ರೈತ ಸಂಘ ಜಿಲ್ಲಾಧ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಶ್ರೀ.ಕ್ಷೇ.ಧ.ಗ್ರಾ.ಯೋ ಬಿಸಿ ಟ್ರಸ್ಟ್ ಬೆಳ್ಳೂಟಿ ವಲಯ ಮೇಲ್ವಿಚಾರಕಿ ಮೇಘನಾ ಹಾಗೂ ಸೇವಾ ಪ್ರತಿನಿಧಿಗಳು ಹಾಜರಿದ್ದರು.