ಶಿಡ್ಲಘಟ್ಟ : ಜಮೀನಿನ ಭೂ ಪರಿವರ್ತನೆ ಲೇಔಟ್ ನ ಪ್ಲಾನ್ ಅನುಮೋದನೆಗಾಗಿ ನಂಜೇಗೌಡ ಎಂಬ ವ್ಯಕ್ತಿಯಿಂದ 2 ಲಕ್ಷ ಬೇಡಿಕೆ ಇಟ್ಟು 1.5 ಲಕ್ಷ ಹಣ ಪಡೆಯುವ ವೇಳೆಯಲ್ಲಿ ತಾಲ್ಲೂಕು ಪಂಚಾಯಿತಿ ಇ.ಓ ಮುನಿರಾಜು ಅವರು ನಿನ್ನೆಯಷ್ಟೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಸುದ್ದಿ ಇಂದು ಪತ್ರಿಕೆಯಲ್ಲಿ ವಿಸ್ತ್ರುತ ಸುದ್ದಿ ಪ್ರಕಟವಾಗಿತ್ತು.
ಪತ್ರಿಕೆಯ ಸುದ್ದಿಯನ್ನ ಗಮನಿಸಿದ ಹೊಸಪೇಟೆ ಗ್ರಾ.ಪಂ. ಪಂಚಾಯಿತಿ ಪಿಡಿಓ ಯಮುನಾ ರಾಣಿ ಅವರು ದೂರವಾಣಿ ಮುಖಾಂತರ ಮಾತನಾಡಿ ಲೋಕಾಯುಕ್ತ ದಾಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನ ಪಾತ್ರ ಏನೂ ಇಲ್ಲವೆಂದು ನಾನು ನಮ್ಮ ಮೇಲಾಧಿಕಾರಿಗೆ ಈ ರೀತಿಯಾಗಿ ಆಗಿದೆ ಎಂದು ತುಂಬಾ ನೋವುಂಟಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರದಲ್ಲಿ ಪಂಚಾಯತಿ ಪಿಡಿಓ ಪಾತ್ರ ಏನು ಇಲ್ಲವೆಂದು ತಿಳಿಸಿದರು. ಪ್ರಕರಣದ ಸತ್ಯಾ ಸತ್ಯತೆ ತನಿಖೆಯಿಂದ ಹೊರಬರಬೇಕಾಗಿದೆ.