Monday, December 23, 2024
Homeಜಿಲ್ಲೆಶಿಡ್ಲಘಟ್ಟಕ್ಕೆ ಹೈಕೋರ್ಟ್ ಜಡ್ಜ್ ಆರ್ ರವಿ ವೆಂಕಟಪ್ಪ ಹೊಸಮನಿ ಬೇಟಿ ವೀಕ್ಷಣೆ.

ಶಿಡ್ಲಘಟ್ಟಕ್ಕೆ ಹೈಕೋರ್ಟ್ ಜಡ್ಜ್ ಆರ್ ರವಿ ವೆಂಕಟಪ್ಪ ಹೊಸಮನಿ ಬೇಟಿ ವೀಕ್ಷಣೆ.

ಶಿಡ್ಲಘಟ್ಟ : ಕರ್ನಾಟಕ ಹೈ ಕೋರ್ಟ್ ನ್ಯಾಯಧೀಶರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಆರ್.ರವಿ ವೆಂಕಟಪ್ಪ ಹೊಸಮನಿ ಅವರು ತಾಲ್ಲೂಕು ನ್ಯಾಯಾಲಯ ಸಂಕೀರ್ಣಕ್ಕೆ ಬೇಟಿ ನೀಡಿ ವೀಕ್ಷಣೆ ಮಾಡಿದರು.

ಹೈಕೋರ್ಟ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ  ಆಡಳಿತಾತ್ಮಕ ನ್ಯಾಯಮೂರ್ತಿಗಳು  ಆಡಳಿತಾತ್ಮಕ ಹಿತದಷ್ಟಿಯಿಂದ ಶನಿವಾರದಂದು ನಗರದ ತಾಲ್ಲೂಕು ನ್ಯಾಯಾಲಯದಲ್ಲಿನ ಮೂಲಭೂತ ಸೌಲಭ್ಯಗಳು ಸೇರಿದಂತೆ ಆಡಳಿತ ವ್ಯವಸ್ಥೆಯನ್ನ ವೀಕ್ಷಿಸಿದರು.

ಶಿಡ್ಲಘಟ್ಟ ತಾಲ್ಲೂಕು‌ ನ್ಯಾಯಾಲಯದ ವ್ಯಾಪ್ತಿಯಲ್ಲಿನ ಅಪರಾಧ ಪ್ರಕರಣಗಳು ಸೇರಿದಂತೆ ಅಫೀಲು ಪ್ರಕರಣಗಳು ಹೆಚ್ಚು ಬಾಕಿ ಇರುವ ಹಿನ್ನೆಲೆಯಲ್ಲಿ ಶಿಡ್ಲಘಟ್ಟಕ್ಕೆ  ಹೆಚ್ಚುವರಿ ಜಿಲ್ಲಾ  ನ್ಯಾಯಾಲಯದ ಬೇಡಿಕೆಯಿದ್ದು ಜೊತೆಗೆ  ಕ್ಯಾಂಟೀನ್ ಬಳಕೆಗೆ ವ್ಯವಸ್ಥೆ ಸೇರಿದಂತೆ ಆಡಳಿತ ವ್ಯವಸ್ಥೆಯ ಕುರಿತು‌ ಮಾಹಿತಿಯನ್ನ ಪಡೆಯಲಾಯಿತು.

ತಾಲ್ಲೂಕಿನ ನ್ಯಾಯಾಲಯದಲ್ಲಿ ಹಿರಿಯ ಶ್ರೇಣಿ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಲಯಗಳಿದ್ದು, ಶಿಡ್ಲಘಟ್ಟದಲ್ಲಿ ನ್ಯಾಯಾಲಯ ಸ್ಥಾಪನೆಯಾಗಿ ಸುಮಾರು 42 ವರ್ಷಗಳಾಗಿದೆ. ತಾಲ್ಲೂಕಿನಲ್ಲಿ ಸುಮಾರು 90 ವಕೀಲರು ಸೇವೆ ಮಾಡುತ್ತಿದ್ದಾರೆ. ಪ್ರತಿ ನಿತ್ಯ ಹೊರ ಜಿಲ್ಲೆಯ ವಕೀಲರು ಹಾಗೂ ಕಕ್ಷಿದಾರರು ಸೇರಿದಂತೆ ವಯೋವೃದ್ದ ಕಕ್ಷಿದಾರರು ಹಾಗೂ ಸಾರ್ವಜನಿಕರು ನ್ಯಾಯಾಲಯಗಳಿಗೆ ಬರುತ್ತಾರೆ. ನ್ಯಾಯಾಲಯದ ಕಟ್ಟಡದಲ್ಲಿ ಲಿಪ್ಟ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಹಿರಿಯ ವಕೀಲರು ಹಾಗೂ ವಯೋ ವೃದ್ದ ಕಕ್ಷಿದಾರರು, ಸಾರ್ವಜನಿಕರು ಎರಡು‌ ಮತ್ತು ಮೂರನೇ ಮಹಡಿಗೆ ಮೆಟ್ಟಿಲುಗಳು ಹತ್ತಿ – ಇಳಿಯುವುದಕ್ಕೆ ತುಂಬಾ ಅನಾನೂಕುಲ ಹಾಗೂ ಕಷ್ಟಕರವಾಗಿರುತ್ತದೆ. ಹಾಗಾಗಿ ಮೊದಲ ಮತ್ತು ಎರಡನೇ ಮಹಡಿಗೆ ಲಿಪ್ಟ್ ವ್ಯವಸ್ಥೆ ಮತ್ತು ಪ್ರತ್ಯೇಕ ವಕೀಲರ ಭವನಕ್ಕೆ ಅನುಮತಿ ಹಾಗೂ ಅನುಧಾನ ಮಂಜೂರು ಮಾಡಿಕೊಡಬೇಕೆಂದು ತಾಲ್ಲೂಕು ವಕೀಲರ ಸಂಘದಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಧೀಶರಾದ  ನೇರಳೆ ವೀರಭದ್ರಯ್ಯ ಭವಾನಿ, ತಾಲ್ಲೂಕು ಪ್ರಧಾನ ಸಿವಿಲ್ ನ್ಯಾಯಧೀಶರಾದ ಪೂಜಾ. ಜೆ,   ತಾಲ್ಲೂಕು ವಕೀಲರು ಸಂಘದ ಅಧ್ಯಕ್ಷರಾದ ನಾರಾಯಣಸ್ವಾಮಿ, ಹಿರಿಯ ವಕೀಲರಾದ ಎಂ.  ಪಾಪಿರೆಡ್ಡಿ, ಅಶ್ವಥನಾರಾಯಣ, ಎನ್.ಆರ್ ರವಿಕುಮಾರ್, ಹೆಚ್.ಎಂ ರಾಮಕೃಷ್ಣ,  ವಕೀಲರ ಸಂಘದ ಕಾರ್ಯದರ್ಶಿ  ಭಾಸ್ಕರ್, ವಕೀಲರಾದ  ಶಾಂತಕುಮಾರ್, ಕೃಷ್ಣಮೂರ್ತಿ, ನಾಗರಾಜ್, ಶಿವಕುಮಾರ್, ವೆಂಕಟೇಶ್,  ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!