Monday, December 23, 2024
Homeಜಿಲ್ಲೆಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗೆಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಶಿಬಿರ.  

ಧರ್ಮಸ್ಥಳ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗೆಡೆಯವರ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಕಣ್ಣಿನ ತಪಾಸಣೆ ಶಿಬಿರ.  

ಶಿಡ್ಲಘಟ್ಟ :  ಧ ರ್ಮಸ್ಥಳ ಧರ್ಮಾಧಿಕಾರಿ  ಪರಮಪೂಜ್ಯ  ಡಾ ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ  ಚಿಕ್ಕಬಳ್ಳಾಪುರದ ಜೈನ್ ಮಿಷನ್  ಆಸ್ಪತ್ರೆ ,  ಹಾಗೂ ಶ್ರೀ ಶೃಂಗೇರಿ ಶಂಕರ ಮಠ ಅಭಿವೃದ್ದಿ ಮತ್ತು ಸೇವಾ ಟ್ರಸ್ಟ್  ಶಿಡ್ಲಘಟ್ಟ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆಯ ಆಯುಕ್ತ ಮಂಜುನಾಥ್ ಮಾತನಾಡಿ  ಪೂಜ್ಯರು  ರಾಜ್ಯಾದ್ಯಂತ ಅನೇಕ ಸರ್ವತೋಮುಖ ಅಭಿವೃದ್ಧಿಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಸಮಾಜದ ಎಲ್ಲಾ ಕ್ಷೇತ್ರಗಳ ಹಾಗೂ ಎಲ್ಲಾ ವರ್ಗಗಳ ಜನರ ಅಭಿವೃದ್ದಿ, ಗ್ರಾಮ ಕಲ್ಯಾಣ, ಮಹಿಳಾ ಸಬಲೀಕರಣ ,ಆರ್ಥಿಕ ಸಬಲೀಕರಣ, ಶೈಕ್ಷಣಿಕ ಅಭಿವೃದ್ದಿ, ಆರೋಗ್ಯ ಕಾರ್ಯಗಳು, ಕೃಷಿ ಅಭಿವೃದ್ದಿ, ಕ್ಷೀರ ಕ್ರಾಂತಿ ಸೇರಿದಂತೆ ಹತ್ತು ಹಲವು ವಿಭಿನ್ನ  ಕಾರ್ಯಕ್ರಮಗಳ ಮೂಲಕ ಸಾಮಾಜಿಕ ಚಿಂತನೆಯನ್ನು ಒಳಗೊಂಡಿರುವ  ಪೂಜ್ಯರ ಜನ್ಮದಿನವನ್ನು ಉಚಿತ ಕಣ್ಣಿನ ತಪಾಸಣಾ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ.  ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಶ್ರೀ ಶೃಂಗೇರಿ ಶಂಕರ ಮಠ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ವಿ.ಕೃಷ್ಣರವರು ಮಾತನಾಡಿ ನಾಡಿನಾದ್ಯಂತ ಪೂಜ್ಯರು  ಸಾಮಾಜಿಕ ಅಭಿವೃದ್ದಿ ಕಾರ್ಯಕ್ರಮಗಳು ಶ್ಲಾಘನೀಯ, ದೇವಾಲಯಗಳ ಅಭಿವೃದ್ದಿ, ಸಮುದಾಯ ಭವನಗಳ ಅಭಿವೃದ್ದಿ,ಹಾಲಿನ ಡೈರಿಗಳ ಕಟ್ಟಡ ರಚನೆಗೆ ಅನುದಾನ, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಇಂತಹ ಹತ್ತು ಹಲವು ಕಾರ್ಯಕ್ರಮಗಳನ್ನು ಪೂಜ್ಯ ಹೆಗ್ಗಡೆಯವರು ನಡೆಸುತ್ತಾ ಬಂದಿದ್ದಾರೆ. ಇಂದು ಅವರ ಜನ್ಮ ದಿನಾಚರಣೆ ಒಂದು ಅರ್ಥಪೂರ್ಣ ದಿನವಾಗಿದೆ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಚಿಕ್ಕಬಳ್ಳಾಪುರ ಜಿಲ್ಲಾ ನಿರ್ದೇಶಕರಾದ ಪ್ರಶಾಂತ್ ಸಿ.ಎಸ್ ಅವರು ಮಾತನಾಡಿ ಪೂಜ್ಯರು ಸಮಾಜದ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಾ ಸಮಾಜದ ಒಳಿತಿಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯಪ್ರವೃತ್ತರಾಗಿದ್ದಾರೆ. ಅಂತಹ ಪೂಜ್ಯರ ಜನ್ಮದಿನವನ್ನು ಸಾಮಾಜಿಕ ಒಳಿತಿನ ಕಾರ್ಯಕ್ರಮದೊಂದಿಗೆ ಆಚರಿಸಲು ಸಹಕರಿಸಿದ ಎಲ್ಲರಿಗೂ ಎಲ್ಲಾ ಸಂಘ ಸಂಸ್ಥೆಗಳಿಗೂ ಧನ್ಯವಾದ ತಿಳಿಸುತ್ತೇನೆ.  ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಸಮಾಜ ಮುಖಿ ಕಾರ್ಯಗಳು, ಸಮಾಜ ಸೇವೆ ನಿರಂತರವಾದದ್ದು ಎಂದರು.

ಪೂಜ್ಯರ ಜನ್ಮ ದಿನದ ಪ್ರಯುಕ್ತ ತಾಲ್ಲೂಕಿನಾದ್ಯಂತ ಸುಮಾರು  80 ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಚತಾ ಕಾರ್ಯ ನಡೆಯಿತು.  ಕಾರ್ಯಕ್ರಮದಲ್ಲಿ  ತಾಲೂಕಿನ ಪ್ರಗತಿಪರ ರೈತರಾದ ಮೇಲೂರು ಸಚಿನ್,   ಬಿ.ಜೆ.ಪಿ ಗ್ರಾಮಾಂತರ ಮಂಡಲ ಅಧ್ಯಕ್ಷ  ಸೀಕಲ್ ಅನಂದ ಗೌಡ, ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಗೌಡ.  ಎಸ್, ಜೈನ್ ಮಿಷನ್ ಆಸ್ಪತ್ರೆಯ ವೈದ್ಯರಾದ  ಡಾ.ರಕ್ಷಿತ್, ಮೇಲ್ವಿಚಾರಕ ಮಂಜುನಾಥ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ  ಅರುಣಾ, ಸೇರಿದಂತೆ ಸಹಾಯ ಸಂಘಗಳ ಸದಸ್ಯರು ಉಪಸ್ಥಿತಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!