Tuesday, December 24, 2024
Homeಜಿಲ್ಲೆಲೋಕಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಪತನವಾಗುತ್ತದೆ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ  

ಲೋಕಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಪತನವಾಗುತ್ತದೆ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ  

ಜೆಡಿಎಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶ ಕಾರ್ಯಕ್ರಮ. 

ಶಿಡ್ಲಘಟ್ಟ:  ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26 ಮತ್ತು ಮೇ  7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರವಾಸ ಮಾಡಲು ನಿರ್ಧರಿಸಿದ್ದೇನೆ. ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರು ಭವಿಷ್ಯ ನುಡಿದರು.

   ತಾಲ್ಲೂಕಿನ ವೈ ಹುಣಸೇನಹಳ್ಳಿ ಸ್ಟೇಷನ್ ಬಳಿ ಶುಕ್ರವಾರದಂದು ಆಯೋಜಿಸಿದ್ದ  ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ  ಮಾತನಾಡಿದರು. ರಾಷ್ಟ್ರದ  ಆಡಳಿತವನ್ನು ನಡಿಸಿದಂತಹ ಕಾಂಗ್ರೇಸ್ ಪಕ್ಷ  ಇವತ್ತು ಏನಾಗಿದೆ. ರಾಹುಲ್ ಗಾಂಧಿ ಕೋಲಾರಕ್ಕೆ ಬಂದಿದ್ದರು. ಅವರು ಹಾಸನಕ್ಕೆ ಬಂದು ದೆವೇಗೌಡರ ವಿರುದ್ದ ಪ್ರಚಾರ ಮಾಡಿದ್ದಾರೆ.   ಈ ರಾಷ್ಟ್ರದಲ್ಲಿ ಸ್ವಾತಂತ್ರ್ಯ ಬಂದ ಮೇಲೆ ಅಂಬೇಡ್ಕರ್ ಅವರು ಸಂವಿಧಾನ ರಾಜ್ಯಾಂಗವನ್ನು ಈ ದೇಶಕ್ಕೆ ಬರೆದುಕೊಟ್ಟಿದ್ದಾರೆ. ದೇಶದ ಆಡಳಿತವನ್ನು  ನಡೆಸಬೇಕೆಂದು ಮಾರ್ಗದರ್ಶನ ನೀಡಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಲೋಕಸಭೆಗೆ ಆಯ್ಕೆಯಾಗಿ  ಬರುವುದನ್ನು ತಡೆದು ಸೋಲಿಸಿದ ಸಾಧನೆ  ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ರಾಜ್ಯದಲ್ಲಿ 18 ತಿಂಗಳು ನಾನು ಮುಖ್ಯಮಂತ್ರಿ ಆಗಿದ್ದೆ. ಕೇಂದ್ರದಲ್ಲಿ 13 ಪಕ್ಷಗಳು ಸೇರಿಕೊಂಡು ಎಲ್ಲರ ಒಮ್ಮತದಿಂದ ಆ ಸಮಯದಲ್ಲಿ ಪ್ರಧಾನಮಂತ್ರಿ ಆಗಬೇಕೆಂದು  ಎಲ್ಲಾ ಪಕ್ಷಗಳ ಮುಖಂಡರು ಆಗ್ರಹ ಪಡಿಸಿದರು. ದೇಶ ವಿದೇಶಗಳ ಮಾಧ್ಯಮಗಳ ಪ್ರತಿನಿಧಿಗಳು ದೇಶದ ಪ್ರಧಾನಿಯಾಗುವ ಆರ್ಹತೆ ಇರುವ ವ್ಯಕ್ತಿ ಪ್ರತಿಪಕ್ಷಗಳಲ್ಲಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಅಂತಹ ಸಮಯದಲ್ಲಿ ನಾನು ಪ್ರಧಾನಮಂತ್ರಿಯಾಗಿ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿದ್ದೇನೆ. ಮಹಿಳಾ ಮೀಸಲಾತಿ ಸೇರಿದಂತೆ ರೈತರ ಹಿತ ಕಾಪಾಡುವ ಹಲವು ಯೋಜನೆಗಳನ್ನು ಹಾಗೂ ಮಸೂದೆಗಳನ್ನು ಜಾರಿಗೆ ತಂದಿದ್ದೇನೆಂಬ ಹೆಮ್ಮೆ ನನಗಿದೆ ಎಂದರು. ದೇಶಕ್ಕೆ ಮೋದಿ ಅವಶ್ಯಕತೆ ತುಂಬಾ ಇದೆ ಕೋಲಾರ ಲೋಕಸಭಾ ಕ್ಷೇತ್ರದ  ಜೆ.ಡಿ.ಎಸ್ ಮತ್ತು ಬಿಜೆಪಿಯ ಮೈತ್ರಿ ಅಭ್ಯರ್ಥಿ ಎಂ. ಮಲ್ಲೇಶ್ ಬಾಬು ಅವರಿಗೆ ಮತ ನೀಡಿ ಸಂಸತ್ ಗೆ ಕಳುಹಿಸಕೊಡಬೇಕು ಎಂದು ಅಭ್ಯರ್ಥಿ ಪರವಾಗಿ ಮತಯಾಚನೆ ಮಾಡಿದರು.  ಸುಡುವ ಬಿಸಲನ್ನೇ  ಲೆಕ್ಕಿಸದೆ ಸಹಸ್ರಾರು ಸಂಖ್ಯೆಯಲ್ಲಿ  ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದ ಗೌಡ  ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ, ಅರವಿಂದ ಲಿಂಬಾವಳಿ , ಸಂಸದರಾದ ಎಸ್. ಮುನಿಸ್ವಾಮಿ , ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್, ಚಿಂತಾಮಣಿಯ ಮಾಜಿ ಶಾಸಕರಾದ ಜೆ ಕೆ ಕೃಷ್ಣಾರೆಡ್ಡಿ, ಮಾಜಿ ಶಾಸಕ ಎಂ. ರಾಜಣ್ಣ , ತೂಪಲ್ಲಿ ಚೌಡರೆಡ್ಡಿ  ಶಾಸಕರಾದ ಸಮೃದ್ದಿ ಮಂಜುನಾಥ್, ಇಂಚರ ಗೋವಿಂದರಾಜ  ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ , ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಸೀಕಲ್ ಆನಂದ್ ಗೌಡ,   ಜಿ ಎ.ನ್ ವೇಣುಗೋಪಾಲ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!