ಆರ್ಥಿಕ ತಜ್ಞ, ರಾಷ್ಟ್ರದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ.
ದೆಹಲಿ : ರಾಷ್ಟ್ರದ ಮಾಜಿ ಪ್ರಧಾನ ಮಂತ್ರಿ ಡಾ ಮನಮೋಹನ್ ಸಿಂಗ್ (92) ಅವರು ನಿಧನರಾಗಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಅವರು ಕೊನೆಯುಸಿರು ಎಳೆದಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರು 26 ಸೆಪ್ಟೆಂಬರ್ 1932 ರಂದು ಪಂಜಾಬ್ ನಲ್ಲಿ ಜನನವಾಗಿದ್ದು, ಅವರು 2004 ರಿಂದ 2014 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅರ್ಥಶಾಸ್ತಜ್ಣರು, ಶಿಕ್ಷಣ ತಜ್ಣರಾಗಿದ್ದರು ಇನ್ನೂ ಡಾ ಮನಮೋಹನ್ ಸಿಂಗ್ ಅವರು ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.
ದೆಹಲಿಯ ಏಮ್ಸ್ ಆಸ್ಪತ್ರೆಗೆ ಕಾಂಗ್ರೇಸ್ ನಾಯಕಿ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೇರಿದಂತೆ ರಾಜಕೀಯ ನಾಯಕರು, ಗಣ್ಯರು ಆಗಮಿಸಿ ಅಂತಿಮ ನಮನ ಸಲ್ಲಿಸಲಿದ್ದಾರೆ.