Monday, December 23, 2024
Homeಜಿಲ್ಲೆಕೆಐಎಡಿಬಿ ಭೂ ಸ್ವಾಧೀನ, ಪರಿಹಾರಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿದ ರೈತ ಹೋರಾಟ ಸಮಿತಿ.

ಕೆಐಎಡಿಬಿ ಭೂ ಸ್ವಾಧೀನ, ಪರಿಹಾರಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿದ ರೈತ ಹೋರಾಟ ಸಮಿತಿ.

ರಕ್ತ ಕೊಡ್ತೇವೆ, ಭೂಮಿ ಕೊಡುವುದಿಲ್ಲ ಎಂದಿದ್ದ ರೈತ ಸಂಘ.!

ಶಿಡ್ಲಘಟ್ಟ : ತಾಲ್ಲೂಕಿನ ಜಂಗಮಕೋಟೆ ಹೋಬಳಿ 13 ಹಳ್ಳಿಗಳ‌ ವ್ಯಾಪ್ತಿಯ ರೈತರ ಭೂ ಸ್ವಾಧೀನಕ್ಕೆ ಪರಿಹಾರ ನೀಡಲು ಕೆಐಎಡಿಬಿ ಮುಂದಾಗಿದೆ. ಇದಕ್ಕೆ ಆರಂಭದಲ್ಲೆ ತಾಲ್ಲೂಕಿನ ವಿವಿಧ ರೈತ ಸಂಘದ ಬಣಗಳು ಬೃಹತ್ ಪ್ರತಿಭಟನೆಗಳು ನಡೆಸಿದ್ದು ಅಲ್ಲದೆ ಟ್ರ್ಯಾಕ್ಟರ್ ಗಳ ಮೂಲಕ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸಿದವು.

ಮತ್ತೊಂದು ಬಣದ ರೈತ ಸಂಘ ತಾಲ್ಲೂಕು ದಂಡಾಧಿಕಾರಿಗಳ ಕಛೇರಿ ಮುಂದೆ ಸರ್ಕಾರ ರೈತರ ಕೃಷಿ ಭೂಮಿಯನ್ನ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ನಾವು ರಕ್ತ ಕೊಡ್ತೇವೆ, ಭೂಮಿ‌ ಕೊಡುವುದಿಲ್ಲವೆಂದ ಅಬ್ಬರಿಸಿ ಬೊಬ್ಬರಿಸಿದ್ದರು. ಭೂಮಿ‌ ಕೊಡುವುದಿಲ್ಲವೆಂದಿದ್ದ ರೈತ ಸಂಘ ವರಸೆ ಬದಲಾಯಿಕೊಂಡಂತಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಅಸ್ಪದವಾಗಿದೆ.

KIADB ಭೂ ಸ್ವಾಧೀನಕ್ಕೆ ಸಂಬಂದಪಟ್ಟ ರೈತರ ಹೋರಾಟ ಸಮಿತಿಯ ವತಿಯಿಂದ ಕ್ಷೇತ್ರದ ಶಾಸಕ ಬಿ.ಎನ್ ರವಿಕುಮಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ರೈತರ ಹಕ್ಕೊತ್ತಾಯಗಳು ಈಡೇರಿಸುವಂತೆ ಮನವಿ ಸಲ್ಲಿಸಿದ್ದಾರೆ.

ರೈತ ಸಂಘದ ನಿಲುವು ಬದಲಾಯಿತೇ:? ರಕ್ತವನ್ನು ಕೊಡ್ತೇವೆ ಭೂಮಿ ಕೊಡುವುದಿಲ್ಲವೆಂದಿದ್ದ ರೈತ ಸಂಘ ತನ್ನ ನಿಲುವು‌ ಬದಲಾಯಿಸಿಕೊಂಡಂತಿದೆ. ತಾಲ್ಲೂಕಿನ ಜಂಗಮಕೋಟೆ ಹೋಬಳಿ 13 ಹಳ್ಳಿಗಳ ರೈತರ ಭೂಮಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ಫಲವತ್ತಾದ ಭೂಮಿಯನ್ನ ಕೈ ಬಿಡಬೇಕು, ಭೂಮಿ‌ಕೊಡುವ ರೈತರ ಕುಟುಂಬಕ್ಕೆ ಒಂದು ಉದ್ಯೋಗ ಕೊಡಬೇಕು. ಪಿಎಸಿಎಲ್ ಕಂಪನಿಯ ಹೆಸರಿನಲ್ಲಿ ಮೋಸ ಮಾಡಿರುವ ಮೂಲ ಖಾತೆದಾರರಿಗೆ ಪರಿಹಾರ ಕೊಡಿಸಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.

ರೈತರ ಮನವಿಯನ್ನ ಸ್ವೀಕರಿಸಿದ ಶಾಸಕ ಬಿ.ಎನ್ ರವಿಕುಮಾರ್ ಅವರು ರೈತರ ನೀರಾವರಿ ಪ್ರದೇಶವನ್ನು ಉಳಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪರಿಹಾರದ ಮೊತ್ತ ಕೂಡ ಹೆಚ್ಚಿಗೆ ಮಾಡಿಕೊಡಲಾಗುವುದು, ಸದಾ ರೈತರ ಪರವಾಗಿ ನಾನು ಇರುತ್ತೇನೆಂದು ಕ್ಷೆತ್ರದ ರೈತರು ನೆಮ್ಮದಿಯಿಂದ ಇರಬೇಕು ಎಂದು ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಉಪಾದ್ಯಕ್ಷ ಬೆಳ್ಣೂಟಿ ಮುನಿಕೆಂಪಣ್ಣ, ಜಿಲ್ಲಾಪ್ರದಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಜಿಲ್ಲಾ ಕಾರ್ಯದ್ಯಕ್ಷ ಎಚ್,ಎನ್,ಕದೀರೇಗೌಡ, ತಾಲೂಕು ಅದ್ಯಕ್ಷ ಮುನೇಗೌಡ, ಯುವ ಘಟಕದ ಅದ್ಯಕ್ಷ ಅರಿಕೆರೆ ಸಂತೋಷ್, ಬಸವಪಟ್ಟಣ ಆಂಜಿನಪ್ಪ, ರಾಮದಾಸ್, ತಾದೂರು ವಿ,ಮುನಿರಾಜು
ಯಣ್ಣಂಗೂರು ನರಸಿಂಹಮೂರ್ತಿ, ನಡುಪಿನಾಯಕನಹಳ್ಳಿ ಸುಭ್ರಮಣಿ, ಅರಿಕರೆ ಚಿನ್ನಪ್ಪ, ವೆಂಕಟೇಶ್, ದೇವರಾಜ್ , ಚಂದ್ರ ಮುನಿರಾಜು, ದ್ಯಾವಪ್ಪ,ಹಾಗೂ ಇತರರು ಉಪಸ್ದಿತರಿದ್ದರು

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!