ಶಿಡ್ಲಘಟ್ಟ : ಪ್ರತಿ ಸೋಮವಾರದಂದು ನಗರದಲ್ಲಿ ಸಂತೆ ನಡೆಯುತ್ತದೆ ರೈತರು ಬೆಳೆದ ತರಕಾರಿ, ದವಸ ದಾನ್ಯಗಳು ಸೇರಿದಂತೆ ಕುರಿ, ಕೋಳಿ, ಮೇಕೆ ಸಂತೆಗೆ ತೆಗೆದುಕೊಂಡು ಬಂದು ಮಾರಾಟ ಮಾಡುತ್ತಾರೆ ಸಂತೆಯಲ್ಲಿ ವಿವಿಧ ಬಗೆಯ ದಿನಸಿ ಸಾಮಾಗ್ರಿಗಳು ಸೇರಿದಂತೆ ಆಹಾರ ಪದಾರ್ಥಗಳು ಇತರೆ ಅಂಗಡಿಗಳು ಇಟ್ಟುಕೊಂಡಿರುವ ಮಾಲೀಕರು ರೈತರ ಬಳಿ ಕಡಿಮೆ ಬೆಲೆ ಖರೀದಿಸಿ ಅದೇ ಸರಕು ಲಾಭಕ್ಕೆ ಮಾರಾಟ ಮಾಡಿ ಲಾಭ ಗಳಿಸುತ್ತಾರೆ. ಪ್ರತಿನಿತ್ಯ ಲಕ್ಷಾಂತರ ರೂಪಾಯಿಗಳು ವಹಿವಾಟು ನಡೆಯುತ್ತದೆ.
ಸೋಮವಾರದಂದು ನಡೆದ ಸಂತೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶೆಟ್ಟಹಳ್ಳಿ ರವಿಪ್ರಕಾಶ್ ಅವರು ಸಂತೆಗೆ ಹೋಗಿದ್ದ ಸಂದರ್ಭದಲ್ಲಿ ಒಂದು ಕೆಜಿ ಎಣ್ಣೆ ಖರೀದಿ ಮಾಡಿದ್ದು, ಅಂಗಡಿಯವ ಅರ್ದ ಕೆಜಿಯ ಎರಡು ಪ್ಯಾಕೇಟ್ ಗಳು ನೀಡಿದ್ದು ಅನುಮಾನ ಬಂದು ತೂಕ ಮಾಡಿದಾಗ ಒಂದು ಕೆಜಿಯ ಎಣ್ಣೆ ಪ್ಯಾಕೇಟ್ ಗಳು ಕೇವಲ 800 ಗ್ರಾಂ ತೂಕ ಬಂದಿರುತ್ತದೆ ಜೊತೆಗೆ ಬೆಲ್ಲ, ಸಕ್ಕರೆ ಮೇಲೆ ರಾಶಿ ರಾಶಿ ಸೊಣಗಳು ತುಂಬಿಕೊಂಡಿರುವುದನ್ನು ಗಮನಿಸಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್ ಅವರು ಅಂಗಡಿ ಮಾಲೀಕನನ್ನು ತರಾಟೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಹೇ ನ್ಯಾಯವಾದ ರೀತಿಯಲ್ಲಿ ವ್ಯಾಪಾರ ಮಾಡು ಯಾವನು ನಿನಗೆ ಇಲ್ಲಿ ಅಂಗಡಿ ಇಟ್ಟುಕೊಳ್ಳುವುದಕ್ಕೆ ಅನುಮತಿ ಕೊಟ್ಟಿರೋದು, ನಿನ್ನ ಅಂಗಡಿ ಖಾಲಿ ಮಾಡಿಸುತ್ತೇನೆಂದು ಎಚ್ಚರಿಕೆ ನೀಡಿದ್ದಾರೆ.
ಸಂತೆಯಲ್ಲಿ ಸ್ವಚ್ಚತೆಯಿಲ್ಲ ಬಾರಿ ಅವ್ಯವಸ್ಥೆಯ ನಡುವೆಯು ಅಗತ್ಯ ದಿನಸಿ ಸಾಮಾಗ್ರಿಗಳು ಸೇರಿದಂತೆ ಬೆಳೆ- ಕಾಳುಗಳು ಕಳಪೆ ಸಾಮಾಗ್ರಿಗಳು ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆ ಆಹಾರ ನಿರೀಕ್ಷಕ ಪ್ರಕಾಶ್ ಅವರಿಗೆ ವಿಷಯ ತಿಳಿಸಿ ಕರೆಯಿಸಿಕೊಂಡಿದ್ದು, ಆಹಾರ ನಿರೀಕ್ಷಕ ಪ್ರಕಾಶ್ ಪರಿಶೀಲಿಸಿ ಈ ರೀತಿ ಮಾಡಿದರೆ ನಗರಸಭೆಯ ಆಯುಕ್ತರ ಗಮನಕ್ಕೆ ವಿಷಯ ತಂದು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಶಿಡ್ಲಘಟ್ಟ ತಾಲೂಕಿಗೆ ಯಾವುದೇ ಒಬ್ಬ ಅಧಿಕಾರಿ ಬಂದ ತಕ್ಷಣ ಕೆಲವು ಸಂಘ ಸಂಸ್ಥೆಗಳು ಅಧಿಕಾರಿಗಳಿಗೆ ಹಾರ,ಪೇಟ, ಶಾಲು ಹಾಕಿ ಸನ್ಮಾನ ಮಾಡುತ್ತಾರೆ. ಈ ಪದ್ಧತಿ ತಾಲೂಕಿನ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಪತ್ರಿಕೆಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಶೆಟ್ಟಹಳ್ಳಿ ಮಂಜುನಾಥ್, ದ್ಯಾವಕೃಷ್ಣಪ್ಪ, ಸಾರ್ವಜನಿಕರು ಹಾಜರಿದ್ದರು