ಗೌರಿಬಿದನೂರು : ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಸುರಿದ ಮಳೆಯಿಂದ ಬಾಳೆ ಬೆಳೆ ನಾಶವಾಗಿದ್ದು, ಅಪಾರ ನಷ್ಟ ಸಂಭವಿಸಿದೆ. ತಾಲ್ಲೂಕಿನ ಕಸಬಾ ಹೋಬಳಿಯ ರಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ , ರಮಾಪುರ, ಭೀಮನಹಳ್ಳಿ ಗ್ರಾಮದ ಸುತ್ತ ಮುತ್ತಲಿನ ತೋಟಗಳಲ್ಲಿ ಗೊನೆ ಕಟ್ಟಿದ್ದ ಬಾಳೆಗಿಡಗಳು ಮುರಿದುಬಿದ್ದಿವೆ.
‘ಫಸಲು ಕಟಾವು ಸಮಯದಲ್ಲಿ ಮಳೆ ಸುನಾಮಿಯಂತೆ ಎರಗಿದೆ. ಇದರಿಂದ ಸುಮಾರು ಎಕರೆಯಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದೆ. ಈ ಕುರಿತು ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಮಾಡಿ ಅಳಲು ತೋಡಿಕೊಂಡರು.
ಭೀಮನಹಳ್ಳಿ ರೈತರಾದ ಅಶೋಕ್ ಕುಮಾರ್ ಮಾತನಾಡಿ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಯಿಂದ ಫಸಲಿಗೆ ಬಂದು ಕಟ್ಟುವಿಕೆ ಬಂದಿದ್ದ 3000 ಸಾವಿರ ಬಾಳೆ ಗಿಡಗಳಲ್ಲಿ 2500 ಗಿಡಗಳು ನಾಶವಾಗಿದೆ ಇದರಿಂದ 5 ಲಕ್ಷ ರೂಪಾಯಿಗಳು ವೆಚ್ಚ ಮಾಡಿದ್ದು ಸುಮಾರು 15 ಲಕ್ಷ ಬರುವ ನಿರೀಕ್ಷೆ ಇತ್ತು ಅನ್ನೊ ಅಷ್ಟರಲ್ಲಿ ಈ ರೀತಿ ಬೆಳೆ ನಾಶವಾಗಿದೆ ಸೂಕ್ತ ಪರಿಹಾರ ನೀಡುವಂತೆ ಕೈ ಮುಗಿದು ಮನವಿ ಮಾಡಿಕೊಂಡಿರು.
ಮತ್ತೋರ್ವ ರೈತ ವಿಜಯ ಕುಮಾರ್ ರವರು ಮಾತನಾಡಿ ನಾವು ಕೂಡ ಮೊದಲನೇ ಬಾರಿಗೆ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಸುಮಾರು 2 ಎಕರೆ ಜಾಗದಲ್ಲಿ 1500 ಬಾಳೆಗಿಡ ಹಾಕಿದ್ದು ಇನ್ನೇನು ಫಲ ಕೈಗೆ ಸಿಗುವಷ್ಟರಲ್ಲಿ ಬಿರುಗಾಳಿ ಮಳೆಯಿಂದ ಬೆಳೆ ಎಲ್ಲಾ ನಾಶವಾಗಿದೆ ಸುಮಾರು 2 ಲಕ್ಷ ವೆಚ್ಚ ಮಾಡಿದ್ದು ಈಗ ಬಾಳೆಹಣ್ಣುಗೆ ಉತ್ತಮವಾದ ಬೆಲೆ ಇರುವುದರಿಂದ ನನಗೆ 5 ಲಕ್ಷ ರೂಪಾಯಿಗಳು ಲಾಭ ಬರುವ ನಿರೀಕ್ಷೆ ಇತ್ತು ಅದರೆ ಪ್ರಕೃತಿ ವಿಕೋಪದಿಂದ ಬೆಳೆ ನಾಶವಾಗಿದೆ ಎಂದು ಅಳಲು ವ್ಯಕ್ತಪಡಿಸಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಾಮೂಹಿಕ ನಾಯಕತ್ವದ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ ರವರು ಮಾತನಾಡಿ ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಬಾಳೆ ಬೆಳೆ ನಾಶವಾಗಿದ್ದು ಕೂಡಲೇ ಸರ್ಕಾರ ಪರಿಹಾರ ನೀಡಬೇಕು ಹಾಗೆ ಈ ಭಾಗದ ಸುತ್ತ ಮುತ್ತಲು ಕೂಡ ಬಾಳೆ , ಮುಸುಕಿನ ಜೋಳ, ಮುಂತಾದ ಬೆಳೆಗಳು ಕೂಡ ನಾಶವಾಗಿದ್ದು ಹಾಗೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಕೂಡ ಬೆಳೆ ನಾಶವಾಗಿದ್ದು ಕೂಡಲೇ ಸರ್ಕಾರಕ್ಕೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಅಧಿಕಾರಿಗಳು ಬೆಳೆ ನಷ್ಟದ ವರದಿಯನ್ನು ನೀಡಿ ಕೂಡಲೇ ತ್ವರಿತವಾಗಿ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ರೈತರಾದ ಹರಿಪ್ರಕಾಶ್, ಹನುಮಂತರಾಯಪ್ಪ, ಸುರೇಶ್, ನಾರಾಯಣಪ್ಪ, ವೆಂಕಟೇಶ್, ವೆಂಕಟರೆಡ್ಡಿ, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.