ಶ್ವಾಸಕೋಶ ಕ್ಯಾನ್ಸರ್ ಕಾಯಿಲೆಯಿಂದ ವಿಧಿವಶ.
ಬೆಂಗಳೂರು : ಸರ್ಕಾರಿ ಕಾರ್ಯಕ್ರಮವಾಗಲೀ, ಅಥವಾ ಸಿನಿಮಾ ಬಿಡುಗಡೆ ಕಾರ್ಯಕ್ರಮ, ಟಿವಿ ರಿಯಾಲಿಟಿ ಶೋ ಸೇರಿದಂತೆ ರಾಜಕೀಯ ಕಾರ್ಯಕ್ರಮಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ತಮ್ಮ ಸ್ವಚ್ಚವಾದ ನಿರೂಪಣೆಯಿಂದ ಖ್ಯಾತಿ ಗಳಿಸಿದ್ದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಅವರು ಇನ್ನು ನೆನಪು ಮಾತ್ರ. ಹೌದು ಕನ್ನಡ ಚಿತ್ರರಂಗದ ಕಣ್ಮಣಿ ಅಪರ್ಣಾ ಅವರು ಗುರುವಾರ ರಾತ್ರಿ ಸಮಯ ಸುಮಾರು 9:45 ಕ್ಕೆ ಕೊನೆಯುಸಿರೆಳೆದಿದ್ದಾರೆ.
ಖ್ಯಾತ ನಿರೂಪಕಿ ಅಪರ್ಣಾ ಅವರು ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದಿದ್ದಾರೆ. ಮಸಣದ ಹೂ ಸಿನಿಮಾದಲ್ಲೂ ಅಪರ್ಣಾ ನಟಿಸಿದ್ದರು. 1984 ರಲ್ಲಿ ಮಸಣದ ಹೂ ಸಿನಿಮಾ ತೆರೆಕಂಡಿತ್ತು. ಇವರ ನಿರೂಪಣೆ ಶೈಲಿಯೇ ಎಲ್ಲರಿಗೂ ಇಷ್ಟವಾಗಿತ್ತು. ಚಿತ್ರರಂಗದ ಕಾರ್ಯಕ್ರಮವಾಗಲಿ ಅಥವಾ ರಾಜಕೀಯ ಕಾರ್ಯಕ್ರಮವಾಗಲಿ ಅಲ್ಲಿ ನಿರೂಪಕಿಯಾಗಿ ಅಪರ್ಣಾ ಅವರು ಮೈಕ್ ಹಿಡಿದು ನಿಂತು ನಿರೂಪಣೆ ಮಾಡುತ್ತಿದ್ದರು. ನಿರೂಪಕಿಯಾಗಿ ಉತ್ತಮ ಹೆಸರು ಮಾಡಿದ್ದರು ಅಪರ್ಣಾ ಅವರು ಸ್ವಚ್ಚವಾಗಿ, ಸ್ಪಷ್ಟವಾಗಿ, ಒಂದೇ ಒಂದು ಇಂಗ್ಲಿಷ್ ಪದವೂ ಬಳಸದೇ ಕನ್ನಡದಲ್ಲಿಯೇ ಸತತವಾಗಿ 08 ಗಂಟೆಗಳ ಕಾಲ ಯಾವುದೇ ಕಾರ್ಯಕ್ರಮವನ್ನು ಲೀಲಾಜಾಲಾವಾಗಿ ನಾಜೂಕಾಗಿ ನಿರೂಪಣೆ ಮಾಡುವ ಮೂಲಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.
ಟಿವಿ ರಿಯಾಲಿಟಿ ಶೋ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಕರ್ನಾಟಕದ ಮನೆ ಮಾತಾಗಿ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾಗಿದ್ದು. ಕಳೆದ ಕೆಲ ದಿನಗಳಿಂದ ಕ್ಯಾನ್ಸರ್‌ನಿಂದ ಅಪರ್ಣ ಬಳಲುತ್ತಿದ್ದರು.ಕೇವಲ ನಿರೂಪಣೆಯಷ್ಟೇ ಅಲ್ಲ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದರು. ಇದೀಗ 57 ವರ್ಷಕ್ಕೆ ಬದುಕಿನ ಪಯಣ ಮುಗಿಸಿ ಹೊರಟು ಹೋಗಿದ್ದಾರೆ.
ಖ್ಯಾತ ನಿರೂಪಕಿಯ ಸಾವಿನ ವಿಚಾರ ತಿಳಿದು ಕರ್ನಾಟಕ, ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದ್ದೆ. ಕಳೆದ ಕೆಲ ದಿನಗಳಿಂದ ಅಪರ್ಣಾ ಅವರು ಯಾವುದೇ ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.ಕೇವಲ 57 ವರ್ಷಕ್ಕೆ ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ. ಈ ಸುದ್ದಿ ನಿಜಕ್ಕೂ ಅಭಿಮಾನಿಗಳಿಗೆ ಶಾಕಿಂಗ್ ಆಗಿದೆ. ಕನ್ನಡದಲ್ಲಿ ಇವರಂತೆ ನಿರೂಪಣೆ ಮಾಡುವವರು ಮತ್ತೊಬ್ಬರಿಲಿಲ್ಲ. ದೂರದರ್ಶನ ದಿನಗಳಿಂದಲೂ ಜನರಿಗೆ ಚಿರಪರಿಚಿತರಾಗಿದ್ದರು. ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಬಿಟ್ಟು ಅಪರ್ಣಾ ಅವರು ಇಹಲೋಕ ತ್ಯಜಿಸಿದ್ದಾರೆ. ಬನಶಂಕರಿಯ ತಮ್ಮ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮುಖ್ಯಂತ್ರಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಕಂಬನಿ ಮಿಡಿದಿದ್ದಾರೆ.