ಶಿಡ್ಲಘಟ್ಟ: ತಾಲ್ಲೂಕಿನ ಈ ತಿಮ್ಮಸಂದ್ರ ಗ್ರಾಮದಲ್ಲಿ ಯಾವುದೇ ನಾಮಫಲಕವಿಲ್ಲದೆ ಅನಧಿಕೃತವಾಗಿ ನಕಲಿ ಕ್ಲಿನಿಕ್ ನಡೆಯುತ್ತಿರುವುದಾಗಿ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂದು ದಾಳಿ ನಡೆಸಿ ದಾಖಲೆಗಳು ಪರಿಶೀಲಿಸಿದ ಬಳಿಕ ನಕಲಿ ಕ್ಲಿನಿಕ್ ಗೆ ಬೀಗ ಜಡಿದು ಎಚ್ಚರಿಕೆ ನೀಡಿದ್ದಾರೆ.
ಬಾಗೇಪಲ್ಲಿ ನಿವಾಸಿ ರಾಮಮೂರ್ತಿ ಎಂಬ ವ್ಯಕ್ತಿ ಈ ತಿಮ್ಮಸಂದ್ರದಲ್ಲಿ ನಕಲಿ ಕ್ಲಿನಿಕ್ ಪ್ರಾರಂಭಿಸಿ ಸುತ್ತಮುತ್ತಲಿನ ಜನರಿಗೆ ಚಿಕಿತ್ಸೆ ನೀಡುವುದಲ್ಲದೆ ಅನಧೀಕೃತವಾಗಿ ಕ್ಲಿನಿಕ್ ನಡೆಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಇಂದು ದಿಢೀರ್ ದಾಳಿ ನಡೆಸಿ ಪರಿಶೀಲಿಸಿ ನಕಲಿ ಕ್ಲಿನಿಕ್ ಗೆ ಬೀಗ ಹಾಕಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ತಾಲೂಕು ಆರೋಗ್ಯ ಅಧಿಕಾರಿ ಡಾ ವೆಂಕಟೇಶ್ ಮೂರ್ತಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜು , ವೈದ್ಯರಾದ ರೋಷನ್ ಅವರು ಪರಿಶೀಲನೆ ಮಾಡಿದ್ದು, ನಕಲಿ ಎಂದು ತಿಳಿದ ಬಂದ ಬಳಿಕ ಕ್ಲಿನಿಕ್ ಬಂದ್ ಮಾಡಿಸಿದ್ದಾರೆ. ಸದರಿ ವಿಚಾರವನ್ನು ತಾಲ್ಲೂಕು ಆರೋಗ್ಯ ನಿರಿಕ್ಷಣಾಧಿಕಾರಿ ದೇವರಾಜು ಅವರು ಪತ್ರಿಕೆಗಳಿಗೆ ಮಾಹಿತಿಯನ್ನು ನೀಡಿದ್ದಾರೆ.