Monday, December 23, 2024
Homeಜಿಲ್ಲೆದೇಶ ಭಕ್ತರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಸಾಹಸವನ್ನ ಪ್ರತಿಯೊಬ್ಬರು ಸ್ಮರಿಸಬೇಕು: ಡಿವೈಎಸ್ಪಿ .ಪಿ ಮುರಳಿಧರ್

ದೇಶ ಭಕ್ತರು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಸಾಹಸವನ್ನ ಪ್ರತಿಯೊಬ್ಬರು ಸ್ಮರಿಸಬೇಕು: ಡಿವೈಎಸ್ಪಿ .ಪಿ ಮುರಳಿಧರ್

ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶ ಕಟ್ಟುವಲ್ಲಿ ಕೈ ಜೋಡಿಸಲು ಸಲಹೆ.

ಶಿಡ್ಲಘಟ್ಟ: ಪ್ರತಿಯೊಬ್ಬ ಭಾರತೀಯನಿಗೂ ಆಂಗ್ಲರಿಂದ ಮುಕ್ತಿಯನ್ನು ಪಡೆದುಕೊಂಡ ಐತಿಹಾಸಿಕ ದಿನವೇ ಸ್ವಾತಂತ್ರ್ಯ ದಿನಾಚರಣೆ. ಕೋಟಿ ಕೋಟಿ ದೇಶದ ಪ್ರೇಮಿಗಳ ಕನಸು ನನಸಾದ ಒಂದು ನೆನಪು, ಅದೆಷ್ಟೋ ದೇಶ ಭಕ್ತರು ಮತ್ತು ಸ್ವಾತಂತ್ಯ ಹೋರಾಟಗಾರರ ತ್ಯಾಗ, ಬಲಿದಾನ, ಸಾಹಸ, ವೀರತೆಯನ್ನು ನೆನಪಿಸಿಕೊಳ್ಳುವ ಹಾಗೂ ಗೌರವಿಸುವ ಸಮಯ ಇದಾಗಿದೆ ಎಂದು ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ. ಪಿ ಮುರಳೀಧರ್ ತಿಳಿಸಿದರು.

ತಾಲೂಕಿನ ಬಶೆಟ್ಟಹಳ್ಳಿ ಗೇಟ್‌ ಬಳಿಯಿರುವ ಶ್ರೀ ಸಾಯಿ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಭವ್ಯ ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಇನ್ವ್ಸ್ಟಿರ‍್ಸ್ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿರುವ ಈ ಅದ್ಭುತವಾದ ಶಿಸ್ತಿನ ವಾತಾವರಣ ನೋಡುತ್ತಿದ್ದರೆ ಬಹಳ ಸಂತೋಷವಾಗುತ್ತಿದೆ, ಸ್ವಾತಂತ್ರ್ಯ ತಂದು ಕೊಡಲು ತ್ಯಾಗ, ಬಲಿದಾನ ಮಾಡಿದ ಎಲ್ಲರನ್ನು ಸ್ಮರಿಸಿ ಇಂದಿನ ಮಕ್ಕಳು ಅವರ ಆದರ್ಶ ಮತ್ತು ಬದುಕಿನ ಹಾದಿಯನ್ನು ಅರಿತು ದೇಶ ಸೇವೆಗೆ ಮುಂದಾಗಬೇಕು. ಚೆನ್ನಾಗಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವುದರ ಮೂಲಕ ದೇಶಕಟ್ಟುವಲ್ಲಿ ಕೈಜೋಡಿಸಬೇಕು. ನಮ್ಮ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಮಹಾತ್ಮರಿಗೆ ಗೌರವವನ್ನು ನೀಡಿ ನಮ್ಮ ದೇಶದ ಸಂಸ್ಕೃತಿ, ವಿಜ್ಞಾನ, ಕಲೆಗಳನ್ನು ಕಾಪಾಡಿಕೊಂಡು ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯೊಂದಿಗೂ ಸಾಮರಸ್ಯ, ಸಹಬಾಳ್ವೆಯಿಂದ ಬದುಕುವುದನ್ನು ಕಲಿಯಬೇಕು. ದೇಶದ ಆಸ್ತಿ ಮಕ್ಕಳು ಪ್ರಬುದ್ಧರಾಗಿ ದೇಶದ ಘನತೆ, ಗೌರವಗಳಿಗೆ ದಕ್ಕೆ ಬಾರದಂತೆ ನಡೆದುಕೊಳ್ಳಬೇಕು ಹಾಗೂ ಪ್ರಸ್ತುತದ ವೈಜ್ಞಾನಿಕ ಯುಗದ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಸೀಮಿತಗೊಳಿಸದೆ ಶಾಲಾ ಹಂತದಲ್ಲಿ ಜವಾಬ್ದಾರಿ ವ್ಯಕ್ತಿತ್ವ ನಾಯಕತ್ವ ಗುಣಗಳ ಬೆಳೆಸುವುದರ ಮೂಲಕ ಅವರನ್ನು ದೇಶದ ಆಸ್ತಿಯಾಗಿ ಬೆಳೆಸಬೇಕು ಮಕ್ಕಳ ಶೈಕ್ಷಣಿಕ, ಸಾಮಾಜಿಕ ಹಾಗೂ ಭಾವನಾತ್ಮಕ ಬೆಳೆವಣಿಗೆಗೆ ಪೊರಕವಾದ ಸಮಗ್ರ ಚಟುವಟಿಗಳಲ್ಲಿ ತೊಡಗಿಸಬೇಕೆಂದು ಹಾಗೂ ಮಕ್ಕಳು ಮೊಬೈಲ್ ಎಂಬ ಗೀಳುನಿಂದ ದೂರವಿರಬೇಕೆಂದು ಸಲಹೆ ನೀಡಿದರು.

ಕ್ರಾರ್ಯಕ್ರಮದಲ್ಲಿ ಶಾಲಾ ಇನ್ವ್ಸ್ಟಿರ‍್ಸ್ ಸಮಾರಂಭದ ವಿವಿಧ ತಂಡಗಳಿಗೆ ಕವಚ ಮತ್ತು ಬ್ಯಾಡ್ಜ್ಗಳನ್ನು ಪ್ರಧಾನ ಮಾಡಲಾಯಿತು, ಶಾಲೆಯ ಮಕ್ಕಳು ವಿವಿಧ ದೇಶ ಭಕ್ತಿಗೀತೆಗಳಿಗೆ ನೃತ್ಯ, ಪಥ ಸಂಚಲನ, ವೇಷಭೂಷಣ, ಆಶುಭಾಷಣ, ದೇಶಪ್ರೇಮ ಗೇತೆಗಳ ಗಾಯನ ಸೇರಿದಂತೆ ಅನೇಕ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸ್ವರ್ಧೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು.


ಈ ಸಂದರ್ಭದಲ್ಲಿ ಗಡಿ ಭದ್ರತಾ ಪಡೆಯ ನಿವೃತ್ತ ಅಧಿಕಾರಿ ನರಸಿಂಹಯ್ಯ ಜಿ.ಟಿ, ಭಾರತ ಸೇವಾದಳ ಸಂಯೋಜಕ ವೆಂಕಟರೆಡ್ಡಿ, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ಯಾಮಲ, ವೆಂಕಟರಮಣ, ಸಂಸ್ಥೆಯ ಅಧ್ಯಕ್ಷೆ ಜೆ ದೀಪ. ಸಂಸ್ಥಾಪಕ ಕಾರ್ಯದರ್ಶಿ ಎಂ ಮಂಜುನಾಥ್, ಶಿಕ್ಷಕರು, ಪಾಲಕ ಪೋಷಕರು ಮತ್ತಿತರರು ಉಪಸ್ಥಿರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!