Monday, December 23, 2024
Homeಜಿಲ್ಲೆದೇಶದ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಮತದಾನದ ಹಕ್ಕು ಚಲಾಯಿಸಬೇಕು : ಜಿ. ಮುನಿರಾಜು

ದೇಶದ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಮತದಾನದ ಹಕ್ಕು ಚಲಾಯಿಸಬೇಕು : ಜಿ. ಮುನಿರಾಜು

ಮತದಾನದ ಹಕ್ಕು ಸುಲಭವಾಗಿ ಬಂದಿಲ್ಲ. ಬಾಬಾ ಸಾಹೇಬ್ ಡಾ ಬಿ.ಆರ್ ಅಂಬೇಡ್ಕರ್ ಕೊಡುಗೆ.

ಶಿಡ್ಲಘಟ್ಟ : ಮಹಿಳೆಯರು, ಅನಕ್ಷರಸ್ಥರು, ದೀನ ದಲಿತರಿಗೆ ಹಿಂದೆ ಮತದಾನದ ಹಕ್ಕು ಇರಲಿಲ್ಲ. ಕೇವಲ ರಾಜಮನೆತನ, ಜಮೀನ್ದಾರರು, ಭೂ ಹಿಡುವಳಿದಾರರಿಗೆ ಮಾತ್ರ ಮತದಾನ ಹಕ್ಕು ಇತ್ತು. ಬಾಬಾ ಸಾಹೇಬ್ ಡಾ ಬಿ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ 18 ವರ್ಷ ತುಂಬಿದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ನೀಡಿದ್ದಾರೆ . ದೇಶದ ಭವಿಷ್ಯಕ್ಕಾಗಿ ಪ್ರತಿಯೊಬ್ಬರೂ ಚುನಾವಣೆಯಲ್ಲಿ ಭಾಗವಹಿಸಬೇಕು ಎಂದು ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜಿ ಮುನಿರಾಜು ತಿಳಿಸಿಸರು.

ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಚುನಾವಣಾ ಕುರಿತು ಮತದಾನ ಜಾಗೃತಿ ಮೂಡಿಸಲು ತಾಲ್ಲೂಕಿನ ಪ್ರಾಥಮಿಕ ಕೇಂದ್ರಗಳ ಆಶಾ ಕಾರ್ಯಕರ್ತರಿಗೆ ರಂಗೋಲಿ‌ ಸ್ಪರ್ದೆಯನ್ನ ಏರ್ಪಡಿಸಲಾಗಿತ್ತು. ಮತದಾನದ ಕುರಿತು ಆಶಾ ಕಾರ್ಯಕರ್ತರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಸಂವಿಧಾನ ಕಲ್ಪಿಸಿರುವ ಮತದಾನದ ವ್ಯವಸ್ಥೆಯ ಕುರಿತು ರಂಗೋಲಿಗಳು ಬಿಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ವೇಳೆಯಲ್ಲಿ ಮಾತನಾಡಿದ ಅವರು ಚುನಾವಣೆಯ ದಿವಸ ಮತದಾನ ಮಾಡದೇ ಪ್ರವಾಸ ಹೊರಡುವುದು ಅಥವಾ ನೆಂಟರು ಮನೆಗಳಿಗೆ ಹೋಗುವುದು ನಾನೊಬ್ಬ ಮತ ಹಾಕದೇ ಇದ್ದರೆ ಏನೂ ಆಗುವುದಿಲ್ಲವೆಂಬ ಮನೋಭಾವ ಬಿಡಬೇಕು. ಮತದಾನದ ಹಕ್ಕು ಸುಲಭವಾಗಿ ಬಂದಿಲ್ಲ ಅದಕ್ಕೆ ಪೂರ್ವಜರು ತುಂಬಾ ಕಷ್ಟ ಪಟ್ಟಿದ್ದಾರೆ. ಅವರ ಆತ್ಮಕ್ಕೆ ತೃಪ್ತಿ ಸಿಗಲಿ‌ ಎಂಬ ಕಾರಣಕ್ಕಾಗಲೀ ಅಥವಾ ದೇಶದ ಭವಿಷ್ಯಕ್ಕಾಗಿ ಪ್ರತಿಯೊಬ್ಬರು ಚುನಾವಣೆಯಲ್ಲಿ ಭಾಗವಹಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು. ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಲ್ಲಿ ವಿದ್ಯುತ್ ಬೆಳಕು, ಕುಡಿಯುವ ನೀರು, ಹಿರಿಯರು ಮತ್ತು ವಿಶೇಷ ಚೇತನರು ಕುಳಿತುಕೊಳ್ಳುವುದಕ್ಕೆ ಪ್ರತ್ಯೇಕ ಕೊಠಡಿ, ಆಸನಗಳ ವ್ಯವಸ್ಥೆ, ನೆರಳಿನ ವ್ಯವಸ್ಥೆ ಮೂಲ ಭೂತವಾಗಿ ಮಾಡಲಾಗಿದೆ‌ ಎಂದು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ‌ ಮಾತನಾಡಿ ನಮಗೆ ಮತದಾನದ ಹಕ್ಕು ಕಲ್ಲಿಸಿರುವ ಬಾಬಾ ಸಾಹೇಬ್ ಡಾ ಬಿ.ಅಂಬೇಡ್ಕರ್ ಅವರನ್ನ ನಾವೆಲ್ಲರೂ ಸ್ಮರಿಸಬೇಕು. ಏಪ್ರಿಲ್ 26 ರಂದು ಲೋಕಸಭಾ ಚುನಾವಣೆ ನಡೆಯಲಿದೆ. ತಾಲ್ಲೂಕಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿರುವ ಆಶಾ ಕಾರ್ಯಕರ್ತೆಯರು ಚುನಾವಣೆಯ ಕುರಿತು ತಮ್ಮ ತಮ್ಮ‌ ಹಳ್ಳಿಗಳಲ್ಲಿ ಜನರಿಗೆ ಅರಿವು ಮೂಡಿಸಬೇಕು ಜೊತೆಗೆ ಮನೆಯ ಮುಂದೆ ಪ್ರತಿದಿನ ರಂಗೋಲಿ ಬಿಡಿಸಿ ಮತದಾನದ ಜಾಗೃತಿ‌ ಮೂಡಿಸಬೇಕು. ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡುವುದು ನಮ್ಮೆಲ್ಲರ ಜವಬ್ದಾರಿ ಮತಗಟ್ಟೆಯಲ್ಲಿ ಮೊದಲು ಆಶಾ ಕಾರ್ಯಕರ್ತೆಯರು ಮತದಾನ ಮಾಡುವಂತೆ ತಿಳಿಸಿದರು.

ಇದೇ ವೇಳೆಯಲ್ಲಿ ಚುನಾವಣೆಯ ಪ್ರತಿಜ್ಞಾವಿಧಿಯನ್ನ ಬೋದಿಸಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮನೋಹರ್, ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ ಎಂ.ಎಸ್, ಆಯುಷ್ ವೈದ್ಯ ಡಾ. ವಿಜಯ್ ಕುಮಾರ್, ಆರೋಗ್ಯ ಇಲಾಖೆಯ ಮುನಿರತ್ನಮ್ಮ, ಗೀತಾ, ನಂದಿನಿ, ಟಿಟಿ ನರಸಿಂಹಪ್ಪ, ಅಪ್ರೋಜ್, ನಬೀವುಲ್ಲಾ, ಸುನೀಲ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!