Tuesday, December 24, 2024
Homeಜಿಲ್ಲೆಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ : ಮಾರ್ಕೆಟ್ ಮೋಹನ್ 

ಪ್ರತಿಯೊಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ : ಮಾರ್ಕೆಟ್ ಮೋಹನ್ 

ಗೌರಿಬಿದನೂರು: ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಿಸಬೇಕೆಂದು ನಗರಸಭೆ ಸದಸ್ಯರು ಹಾಗೂ ನಗರ ಬಿಜೆಪಿ ಘಟಕದ ಅಧ್ಯಕ್ಷ ಮಾರ್ಕೆಟ್ ಮೋಹನ್ ತಿಳಿಸಿದರು

ನಗರದ ಬಜಾರ್ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಭಾವಿ ಕಟ್ಟೆ ಮಿತ್ರ ಬಳಗ , ಸಮೃದ್ಧಿ ಭಾರತ್ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ಬಾವಿಕಟ್ಟೆ ಮಿತ್ರ ಬಳಗ ಮತ್ತು ಸಮೃದ್ಧಿ ಟ್ರಸ್ಟ್‌ನ ವತಿಯಿಂದ 9 ವರ್ಷಗಳಿಂದ ಕೂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದೇವೆ ಎಂದ ಅವರು ಸಮಾಜವು ನಮ್ಮ ಬಗ್ಗೆ ಉತ್ತಮವಾಗಿ ಮಾತನಾಡಬೇಕಾದರೆ ನಾವು ಮಾಡುವ ಸಮಾಜಮುಖೀ ಕೆಲಸಗಳಿಂದ ಸಾಧ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಪಡೆದು ಸಮಾಜದ ಸೇವೆಗಾಗಿ ಮುಡಿಪಾಗಿಡಬೇಕೆಂದು ಸಲಹೆ ನೀಡಿದರು.
ಉತ್ತರ ವಿ ವಿ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಹಿರಿಯ ಪ್ರಾಧ್ಯಾಪಕ ಜಿ.ಪಿ. ಬಾಹುಬಲಿ ರವರನ್ನು ಮತ್ತು ಸುಮಾರು 15 ವರ್ಷಗಳಿಂದ ತಾಲ್ಲೂಕಿನ ವಿವಿಧ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರಾದ ಸಕ್ಕರೆ ಗೌಡ ರವರನ್ನು ಸನ್ಮಾನಿಸಲಾಯಿತು.

ಮುದಲೋಡು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರವರು ಮಾತನಾಡಿ ಮಾರ್ಕೆಟ್ ಮೋಹನ್ ರವರು ಪ್ರತಿವರ್ಷವೂ ಕೂಡ ಸಾಧನೆ ಮಾಡಿದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿಕೊಂಡು ಬರುತ್ತಿರೋದು ಶ್ಲಾಘನೀಯ ವಾದ್ದದು ಯಾರು ಕಷ್ಟಪಟ್ಟು ಆಸಕ್ತಿಯಿಂದ ಶ್ರಮಿಸುತ್ತಾರೋ ಅವರು ಸಾಧನೆ ಮಾಡಲು ಸಾಧ್ಯ ಅದಕ್ಕೆ ಇಂದು ಪ್ರತಿಭಾ ಪುರಸ್ಕಾರ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅದಕ್ಕೆ ನಿದರ್ಶನವಾಗಿದೆ ಎಂದರು

ಮುಖಂಡರಾದ ಕೃಷ್ಣಮೂರ್ತಿ ರವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯವಾಗಿದ್ದು , ಅದಕ್ಕಾಗಿ ತಾಳ್ಮೆ ಆಸಕ್ತಿಗಳಂಥ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸಮಾಜಕ್ಕೆ ಆಸ್ತಿಗಳಾಗಿ ಸೇವೆ ಮಾಡಬೇಕೆಂದು ತಿಳಿಸಿದರು.

ಹೋಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಗೀತಾ ನಾಗರಾಜ್ ಅವರು ಮಾತನಾಡಿ ಶಿಕ್ಷಣ ಹಾಗೂ ಆರೋಗ್ಯವು ಜೀವನದ ಎರಡು ಮುಖ್ಯವಾದ ಸಂಗತಿ ಗಳಾಗಿದ್ದು ವಿದ್ಯಾರ್ಥಿಗಳು ಇವೆರೆಡನ್ನು ಸಮತೋಲನದಲ್ಲಿ ಶ್ರಮಪಟ್ಟು ನಿರ್ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು

ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರವಿಣ್ ರವರು ಮಾತನಾಡಿ ಉತ್ತಮ ಶಿಕ್ಷಣದಿಂದ ಮಾತ್ರ ಉತ್ತಮ ವ್ಯಕ್ತಿತ್ವದ ನಿರ್ಮಾಣ ಆಗುತ್ತದೆ ಎಂದು ತಿಳಿಸಿದರು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಕಾದಲವೇಣಿ ಗ್ರಾಮ ಪಂಚಾಯಿತಿ ಸದಸ್ಯ ಅಂಬರೀಶ್ ರವರು ಮಾತನಾಡಿದರು.ನಗರ ಬಿಜೆಪಿ ಉಪಾಧ್ಯಕ್ಷರಾದ ರಾಘವೇಂದ್ರ ಸ್ವಾಗತ ಕೋರಿದರು.

ಕಾರ್ಯಕ್ರಮದಲ್ಲಿ ಮಂಜುನಾಥ್ ರಾವ್,  ಮಣಿಕಂಠ, ವೇಣುಮಾಧವ ಈಶ್ವರ್,ಉಪನ್ಯಾಸಕ ರಘು ಮಾರುತಿ, ಭಾರತ್, ಚಂದನ್, ನದಿಗಡ್ಡೆ ಪರಮೇಶ್, ಅನೀಲ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷ ಪಾರ್ವತಮ್ಮ, ಸುಧಾಕೃಷ್ಣಮೂರ್ತಿ, ಅರುಣಮ್ಮ, ಅನೀತಮೋಹನ್, ಶೀಲಾ,ಸಂಗೀತ, ವಿಜಯಲಕ್ಷ್ಮೀ ಈಶ್ವರ್, ಜಯಂತಿ ,ರೂಪ,ಮಧುಸೇಟ್ ಮುಂತಾದವರು
ಉಪಸ್ಥಿತರಿದ್ದರು,

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!