6 ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮ.
ಶಿಡ್ಲಘಟ್ಟ : ಕೈಗಾರಿಕೆ ಎಂದರೇನು? ಕಟ್ಟಡ ಕಟ್ಟುವುದು ಕಟ್ಟಡದ ಒಳಗೆ ಯಂತ್ರಗಳನ್ನು ಅಳವಡಿಸಿ ಅದರಿಂದ ಉತ್ಪನ್ನಗಳನ್ನು ತಯಾರು ಮಾಡುವುದು ಅದಕ್ಕೆ ಯಾವ ಭೂಮಿ ಯಾದರೇನು ಅದನ್ನು ಬಿಟ್ಟು ಈ ಭಾಗದ ಭೂಮಿ ಉತ್ಕೃಷ್ಟತೆಯನ್ನು ಹೊಂದಿದ್ದು, ಇದು ಬರಡು ಭೂಮಿ ಎಂದು ಹೇಳಲು ಈ ಸಿದ್ದರಾಮಯ್ಯ ಅವರಿಗೆ ಗೊತ್ತಾಗಲಿಲ್ಲವೇ ಇಂದಿನ ಸರ್ಕಾರ ಕಿತ್ತಾಕಿ ನಮಗೆ ಅಧಿಕಾರ ಕೊಡಿ ಅಧಿಕಾರ ಬಂದ 24 ಗಂಟೆಯಲ್ಲಿ ರೈತರ ಕಾಯ್ದೆಯನ್ನು ರದ್ದು ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು ಎಲ್ಲಾ ರಾಜಕೀಯ ಪಕ್ಷದವರೂ ಒಂದೇ ಮಾನ ಮರ್ಯಾದೆ ಇಲ್ಲವೆಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಡ್ಲಘಟ್ಟ ತಾಲ್ಲೂಕು ವತಿಯಿಂದ ಜಂಗಮಕೋಟೆ ಕ್ರಾಸ್ ಬಳಿ ಹಮ್ಮಿಕೊಂಡಿದ್ದ 6 ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭದ ಕ್ರಾಯಕ್ರಮದಲ್ಲಿ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು.
ಎಲ್ಲಾ ಕಾಲಕ್ಕೂ ಮನುಷ್ಯ ಅನ್ನವೇ ತಿನ್ಬಬೇಕು. ಹಾಗಾಗಿ 1961 ಕಾಯ್ದೆಯ ಪ್ರಕಾರ ಕೃಷಿ ಭೂಮಿಯನ್ನ ಕೃಷಿಗಾಗಿ ಉಳಿಸಕೊಳ್ಳಬೇಕು ಕೃಷಿ ಯೋಗ್ಯವಲ್ಲದ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಬೇಕು ಹೊರತು ಕೃಷಿ ಭೂಮಿಯಲ್ಲಿ ಅಲ್ಲ. ರೈತರ ಜಮೀನನ್ನ ಕಿತ್ತು ಕೈಗಾರಿಕೆ ಮಾಡಲು ಹೊರಟಿರುವ ಎಲ್ಲಾ ರಾಜಕೀಯ ಪಕ್ಷದವರಿಗೂ ಮಾನ ಮರ್ಯಾದೆ ಇಲ್ಲ ಎಲ್ಲಾ ರಾಜಕಾರಣಿಗಳ ಉದ್ದೇಶ ಒಂದೇ, ಕೇವಲ ಅಧಿಕಾರಕ್ಕೋಸ್ಕರ ಇದ್ದಾರೆ ಇಂಥವರನ್ನು ನೋಡಿಕೊಂಡಿದ್ದರೆ ಹೇಗೆ ಅದಕ್ಕೆ ಯೋಗ್ಯವಾದ ವ್ಯಕ್ತಿಯನ್ನು ಸೇವಾ ಮನೋಭಾವದ ವ್ಯಕ್ತಿಯನ್ನು ಆಯ್ಕೆ ಮಾಡುವ ಸಂದರ್ಭ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರಗಳೇ ನಮಗೆ ಪಾಯಿಸನ್ ಇದ್ದಹಾಗೆ ಇವರ್ಯಾರು ರೈತರ ಮಕ್ಕಳಲ್ಲ ನಾವು ರೈತರ ಮಕ್ಕಳ ಅಂತ ಹೇಳಿಕೊಳ್ಳುವ ನಾಜೂಕಾದ ಕಳ್ಳರು ಖದೀಮರು ವಿಧಾನಸೌಧದ ಒಳಗೆ ಇದ್ದಾರೆ ವಿಧಾನಸೌಧ ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ನೀವು ಕಳ್ಳರು ನೀವು ಕಳ್ಳರು ಅಂತ ಹೇಳಿಕೊಳ್ಳುವುದರಲ್ಲಿ ಕಾಲ ಕಳೆಯುತ್ತಾರೆ ಅದಕ್ಕೆ ಇಂಥ ಸರ್ಕಾರಗಳನ್ನು ಕಿತ್ತಾಕಿ ಎಂದರು.
ರಾಜ್ಯ ಕಾರ್ಯಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ
ರಾಜ್ಯ ಉಪಾಧ್ಯಕ್ಷ ಕೆಂಪೇಗೌಡ,ರಾಜ್ಯ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಪಾಧ್ಯಕ್ಷ ಮುನಿನಂಜಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ವೀರಾಪುರ ಮಂಜುನಾಥ್, ಹಿರೆಬಲ್ಲ ಕೃಷ್ಣಪ್ಪ, ವೈ.ರಾಮಕೃಷ್ಣಪ್ಪ, ಹಿತ್ತಲಲ್ಲಿ ರಮೇಶ್, ವೀರಪುರ ಈರಪ್ಪ, ವೇಣುಗೋಪಾಲ್,
ಮುನಿ ನಂಜಪ್ಪ, ರೈತ ಸಂಘದ ಸದಸ್ಯರು ಮತ್ತು ಮುಖಂಡರು ಉಪಸ್ಥಿತರಿದ್ದರು.