ಗೌರಿಬಿದನೂರು : ತಾಲೂಕಿನ ನಗರಗೆರೆ ಹೋಬಳಿ ವಾಟದ ಹೊಸ ಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಘಟಕ ಸ್ಥಾಪನೆ ಮಾಡಲಾಯಿತು. ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ನೂತನ ಘಟಕಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುನಿತಾ ಮಹೇಶ್, ಶಾಲಾ ಮುಖ್ಯ ಶಿಕ್ಷಕರು ಮತ್ತು ತಾಲೂಕು ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯದರ್ಶಿಗಳು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು. ಸರ್ಕಾರಿ ಪ್ರೌಢಶಾಲೆ ವಾಟದ ಹೊಸಹಳ್ಳಿ ಶಾಲೆಯಲ್ಲಿ ಸುಮಾರು 20 ವಿದ್ಯಾರ್ಥಿಗಳಿಗೆ ಸ್ಕೌಟ್ ಮತ್ತು ಗೈಟ್ನ ಮಾಸ್ಟರ್ ವೆಂಕಟೇಶ್ ನಾಯಕ್ ರವರು ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕು ಕಾರ್ಯದರ್ಶಿಗಳಾದ ಗಿರಿಧರ್ ವೈ ಜಿ ರವರು ನಗರಗೆರೆ ಹೋಬಳಿ ಗಡಿಭಾಗದಲ್ಲಿ ಈ ಘಟಕ ಸ್ಥಾಪನೆ ಆಗಿರುವುದು ನನಗೆ ಸಂತಸದ ಸುದ್ದಿಯಾಗಿದೆ ಅದೇ ರೀತಿ ನೀವು ಸಹ ಈ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥೆಯಲ್ಲಿ ಪಾಲ್ಗೊಂಡು ಶಿಸ್ತು ಕಾಪಾಡಬೇಕು ಸಮಾಜದಲ್ಲಿ ಸ್ವಚ್ಛತೆ, ಶಾಂತಿ, ಶಿಸ್ತು,ತಾಳ್ಮೆ, ಇದೆಲ್ಲವೂ ಸಹ ಸ್ಕೌಟ್ಸ್ ಮತ್ತು ಗೈಡ್ಸ್ ನಲ್ಲಿ ಕಲಿಯಬಹುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿಯವರಾದ ಪಾರ್ವತಮ್ಮ, ಶೋಭಾ, ವೆಂಕಟೇಶ್ ನಾಯಕ್, ಗೋವಿಂದಪ್ಪ,ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ನರಸಿಂಹಮೂರ್ತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ರಾಮಚಂದ್ರಪ್ಪ, ನಗರಗೆರೆ ಶಾಲೆಯ ಶಿಕ್ಷಕರಾದ ಶ್ರೀನಿವಾಸ್, ಹಾಗೂ ಶಾಲೆಯ ಎಲ್ಲಾ ಶಿಕ್ಷಕಿಯರು ಹಾಗೂ ವಿದ್ಯಾರ್ಥಿನಿಯರು ವಿದ್ಯಾರ್ಥಿಯರು ಭಾಗವಹಿಸಿದ್ದರು.