Monday, December 23, 2024
Homeಜಿಲ್ಲೆಪ್ಲಾಸ್ಟಿಕ್ ಮುಕ್ತ ಜೀವನ ರೂಡಿಸಿಕೊಳ್ಳಿ : ಇ.ಓ. ನಾರಾಯಣ್ ಸಲಹೆ.

ಪ್ಲಾಸ್ಟಿಕ್ ಮುಕ್ತ ಜೀವನ ರೂಡಿಸಿಕೊಳ್ಳಿ : ಇ.ಓ. ನಾರಾಯಣ್ ಸಲಹೆ.

ಶಿಡ್ಲಘಟ್ಟ: ಪರಿಸರದ ಮೇಲೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ಪ್ಲಾಸ್ಟಿಕ್ ಮನುಷ್ಯ ಮತ್ತು ಪ್ರಕೃತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಾವೆಲ್ಲರೂ ಪ್ಲಾಸ್ಟಿಕ್ ಮುಕ್ತ ಜೀವನ ರೂಡಿಸಿಕೊಳ್ಳಬೇಕು ಜೊತೆಗೆ ಸ್ವಚ್ಛತೆಯ ಬದುಕಿನ ಅರಿವು ಪ್ರತಿಯೊಬ್ಬರ ಸಾಮಾಜಿಕ ಕಾಳಜಿಯಾಗಬೇಕೆಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಎಸ್. ನಾರಾಯಣ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಪ್ಲಾಸ್ಟಿಕ್ ಮುಕ್ತ ಜನ ಜಾಗೃತಿ ಅಭಿಯಾನ ಕಾರ್ಯಕ್ರಮದ ಚಿಲ್ಲರೆ ಅಂಗಡಿ ಸಂತೆಯಲ್ಲಿ ಜನ ಜಾಗೃತಿ ಅರಿವು‌ ಮೂಡಿಸಿ ಮಾತನಾಡುತ್ತಿದ್ದರು ಪ್ಲಾಸ್ಟಿಕ್‌ ಹಾಗೂ ಕಸಮುಕ್ತ ಸಮಾಜದೆಡೆಗೆ ನಮ್ಮ ಹೆಜ್ಜೆ ಆಗಬೇಕು ಎಂದು ಅರಿವು ತಿಳಿಸಿದರು.

ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ಬೀದಿಗಳ ಅಂಗಡಿ ಮುಂಗ್ಗಟ್ಟು ಸೇರಿದಂತೆ ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ಪ್ಲಾಸ್ಟಿಕ್‌ ಮುಕ್ತ ಮಾಡುವಲ್ಲಿ ಅರಿವು ಮೂಡಿಸಲಾಗುತ್ತಿದೆ. ಬುಧವಾರ ದಂದು ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಿರಾಣಿ ವರ್ತಕರು ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.

ಗ್ರಾಮ ಪಂಚಾಯಿತಿ ಹಾಗೂ ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಸಾರ್ವಜನಿಕರಿಗಿಂತಲೂ ಮೊದಲು ವ್ಯಾಪಾರಸ್ಥರಿಗೆ ಅರಿವು ಮೂಡಿಸುವ ಅವಶ್ಯಕ. ಇದರೊಂದಿಗೆ ಸುಸ್ಥಿರ ಮೂಲ ಸೌಕರ್ಯಗಳ ಅಭಿವೃದ್ಧಿ ಉತ್ತೇಜಿಸಿ, ಪ್ರೋತ್ಸಾಹಿಸಲು ಹಾಗೂ ಪರಿಸರ ಸ್ನೇಹಿ ಸಾಮಗ್ರಿ ಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಅಭಿಯಾನ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ , ನರೇಗಾ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರು ಹಾಜರಿದ್ದರು

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!