ಶ್ರೀ ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೀಳ್ಕೊಡುಗೆ ಸಮಾರಂಭ.
ಚಿಕ್ಕಬಳ್ಳಾಪುರ: ನಗರದ ಬಾಗೇಪಲ್ಲಿ ರಸ್ತೆಯಲ್ಲಿರುವ ಡಾ. ಶ್ರೀ ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳಿಂದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಕಾಲೇಜಿನ ಆಡಳಿತಾಧಿಕಾರಿ ಡಾ. ಶಿವಜ್ಯೋತಿ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನವೂ ತಮ್ಮ ಜೀವನದಲ್ಲಿ ಅತ್ಯಂತ ಅಮೂಲ್ಯವಾಗಿದೆ ಪ್ರತಿ ದಿನ ತಾವು ಓದುವುದಕ್ಕಾಗಿ ತಮ್ಮ ಸಮಯವನ್ನು ಮೂಡಿಪಾಗಿ ಇಡಬೇಕು. ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತಿನ ಜೊತೆಗೆ ಗುಣಮಟ್ಟ ಶಿಕ್ಷಣವನ್ನು ಕೊಟ್ಟಿದ್ದೇವೆ ಎಂದರು.
ತಾವು ಸದಾ ಸಕರಾತ್ಮಕ ಯೋಚನೆಗಳನ್ನು ಮಾಡಬೇಕು ಎಂದು ಹೇಳಿದರು. ಸ್ವಚ್ಛ ಮನಸ್ಸಿನಿಂದ ತಾವು ಪರೀಕ್ಷೆಗೆ ತಯಾರಿ ನಡೆಸಿದರೆ ಉತ್ತಮ ಪ್ರತಿಫಲ ದೊರೆಯುತ್ತದೆ. ಯಾವಾಗಲು ಸಕ್ರಿಯವಾಗಿ ಇರಬೇಕು ಕೆಟ್ಟ ಯೋಚನೆಗಳನ್ನು ಎಂದಿಗೂ ಮಾಡುವಂತಿಲ್ಲ ವಿದ್ಯಾರ್ಥಿಗಳಿಗೆ ದೆಸೆಯಲ್ಲಿ ಯಾವುದೇ ಬೇಧ ಭಾವನೆಗಳು ಬರಬಾರದು ಎಂದು ನುಡಿದು ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಾರನ್ನು ಕೀಳಾಗಿ ಕಾಣಬಾರದು ಎಲ್ಲರೂ ಸಮಾನರು. ತಮ್ಮಲ್ಲಿರುವ ಚೈತನ್ಯ ಶಕ್ತಿಯನ್ನು ಹೊರಹಾಕಲು ಶುದ್ಧ ಪವಿತ್ರ ಮನಸ್ಸಿನಿಂದ ನಿಸ್ವಾರ್ಥವಾಗಿ ಓದಬೇಕು. ಹಿರಿಯರನ್ನು ಸದಾ ಗೌರವಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಿವ ಶಂಕರ್, ಉಪಾಧ್ಯಯರಾದ ರಾಜು, ಪ್ರೊ.ರಾಮಕೃಷ್ಣ, ಪ್ರೊ.ವಿಜಯಲಕ್ಷ್ಮಿ ಕವಿತಾ, ಇತರರು ಉಪಸ್ಥಿತರಿದ್ದರು.