ಗೌರಿಬಿದನೂರು : ಸ್ವಾತಂತ್ರ್ಯ ಸಮರಭೂಮಿ ವಿದುರಾಶ್ವತದ ವೀರ ಸೌಧದಲ್ಲಿ ಬೆಂಗಳೂರಿನ ಜೈನ್ ಡೀಮ್ಡ್ ವಿಶ್ವವಿದ್ಯಾಲಯದವರು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕುರಿತಂತೆ ವಿಷಯ ಮಂಡನೆ ಮಾಡಲು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ತೀರ್ಥ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ. ಕೆ. ವಿ ಪ್ರಕಾಶ್ ಮಾತನಾಡಿದ ಅವರು ಭಾರತ ಬಹು ಜನಾಂಗೀಯ, ಬಹು ಭಾಷೆಯ, ಬಹು ಸಂಸ್ಕೃತಿಯ ದೇಶ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ವೈಶಿಷ್ಟವನ್ನು ಹೊಂದಿರುವ ವೈವಿಧ್ಯಮಯ ದೇಶವಾಗಿದೆ.ರಾಷ್ಟ್ರೀಯ ಭಾವೈಕ್ಯತೆ ದೇಶದ ಆತ್ಮ, ಭವಿಷ್ಯದಲ್ಲಿ ಬಹುತ್ವವೇ ಜೀವಾಳ. ರಾಷ್ಟ್ರದ ಏಕತೆ, ಅಖಂಡತೆ,ಸಮಗ್ರತೆ, ಭ್ರಾತೃತ್ವ ಭಾವನೆ, ಕೋಮು ಸೌಹಾರ್ದತೆ, ಭಾಷಾ ಭಾಂದವ್ಯ, ಪರಧರ್ಮ ಸಹಿಷ್ಣುತೆ, ಸಾಮಾಜಿಕ ಸಾಮರಸ್ಯ,ಸದ್ಭಾವನೆ, ಕಷ್ಟಸಹಿಷ್ಣುತೆ, ಸರ್ವಧರ್ಮ ಸಮನ್ವಯ,ವಸುದೈವ ಕುಟುಂಬಕಂ, ರಾಷ್ಟ್ರ ಪ್ರೇಮ, ಸಾಮಾಜಿಕ ಸಾಮರಸ್ಯ ಇತ್ಯಾದಿ ಅಂಶಗಳನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವವನ್ನು ಬಲಪಡಿಸಿಕೊಂಡು ಭವ್ಯ ಭಾರತವನ್ನು ಬಲಿಷ್ಠ ಗೊಳಿಸಬೇಕೆಂದು ಕರೆ ಕೊಟ್ಟರು.
ಶಿಬಿರದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಶಿಕ್ಷಕರಾದ ವೈ. ಜಿ
ಗಿರಿಧರ್, ರಾಷ್ಟ್ರೀಯ ಸೇವಾ ಯೋಜನೆಯ ಸಮನ್ವಯ ಅಧಿಕಾರಿಗಳಾದ ಶ್ವೇತಾ ಬಿ.ಎಂ, ಪುರುಷೋತ್ತಮ್. ಎಚ್. ಸಿ, ಸಂಧ್ಯಾರೆಡ್ಡಿ, ಕೃಷ್ಣಮೂರ್ತಿ ಮತ್ತು ಕಲಾವಿದ ರಾಮಕೃಷ್ಣ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.