ಗೌರಿಬಿದನೂರು : ತಾಲೂಕು ನಗರಗೆರೆ ಹೋಬಳಿ ವಾಟದ ಹೊಸಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಹಾಗೂ ಜಾಮೀಟರಿ ಬಾಕ್ಸ್ , ಮತ್ತು ಪೆನ್ನುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮಿಗಳಾದ ಪಿ ಎನ್.ದೇವರಾಜಲು ಮಾತನಾಡಿ ಸರ್ಕಾರಿ ಶಾಲೆಗೆ ಎಲ್ಲಾ ಬಡ ಮಕ್ಕಳು ಮತ್ತು ಮಧ್ಯ ತರಗತಿಯ ಮಕ್ಕಳು ಬರುತ್ತಾರೆ ಆದ್ದರಿಂದ ಮಕ್ಕಳಿಗೆ ಸಹಾಯವಾಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದೇನೆ ನಾನು ಸಹ ಈ ಶಾಲೆಯಲ್ಲಿ ಓದಿ ವಿದ್ಯಾವಂತರಾಗಿದ್ದೇನೆ ನಾವು ಓದುವಾಗ ಸರಿಯಾಗಿ ತಿನ್ನಲು ಊಟ ಮತ್ತು ಧರಿಸಲು ಬಟ್ಟೆ ಇರುತ್ತಿರಲಿಲ್ಲ ಆದರೂ ಸಹ ಓದಬೇಕು ಎನ್ನುವ ಛಲ ನಮ್ಮಲ್ಲಿತ್ತು ಆದರೆ ನಿಮಗೆ ಈಗ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ದೊರೆಯುತ್ತಿವೆ ಅದನ್ನು ನೀವು ಸದುಪಯೋಗಪಡಿಸಿಕೊಂಡು ಚೆನ್ನಾಗಿ ಓದಿ ವಿದ್ಯಾವಂತರಾಗಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಆರ್ಯವೈಶ್ಯ ಸಂಘದ ಹರೀಶ್ ಬಾಬು, ನಿವೃತ್ತ ಶಿಕ್ಷಕರಾದ ವೆಂಕಟಚಲಪತಿ, ಬದ್ರಿನಾಥ್, ಮತ್ತು ಮುಖ್ಯ ಶಿಕ್ಷಕರಾದ ರಾಮಚಂದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷರಾದ ಅಪ್ಸರ ಭಾಷಾ, ಸದಸ್ಯರಾದ ನವೀನ್ ಎಲ್ಲಾ ಸಹ ಶಿಕ್ಷಕರು ಉಪಸ್ಥಿತರಿದ್ದರು