ಶಿಡ್ಲಘಟ್ಟ : ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ( ರಿ ) ವತಿಯಿಂದ ಸಂಘದ ತಾಲ್ಲೂಕು ಕಚೇರಿಯಲ್ಲಿ ಆರೋಗ್ಯ ರಕ್ಷಾ ವಿಮಾ ಚೆಕ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಶಾಂತ್ ಸಿ ಎಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಪರಮ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಿಂದ ಪ್ರಗತಿ ಬಂದು ಸ್ವಸಹಾಯ ಸಂಘಗಳಿಗೆ ಸಂಪೂರ್ಣ ಸುರಕ್ಷಾ ಹಾಗೂ ಆರೋಗ್ಯ ರಕ್ಷಾ ಕಾರ್ಯಕ್ರಮದಲ್ಲಿ ನೋಂದಾವಣೆ ಮಾಡಿದ ಸಂಘದ ಸದಸ್ಯರ ಆರೋಗ್ಯ ರಕ್ಷಾ ವಿಮಾ ಅನ್ವಯವಾಗುತ್ತಿದೆ. ರಾಜ್ಯದ ಯಾವುದೇ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಪಡೆದುಕೊಂಡ ಚಿಕಿತ್ಸೆಗೆ ಗರಿಷ್ಠ ರೂ 20,000 ವರೆಗೆ ವಿಮಾ ಮೊತ್ತ ನೀಡಲಾಗುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೆ ಒಂದು ಕೋಟಿ ಏಳು ಲಕ್ಷದವರೆಗೆ ಆರೋಗ್ಯ ರಕ್ಷಾ ವಿಮಾ ಮೊತ್ತ ಪಾವತಿಸಲಾಗಿದೆ ಜೊತೆಗೆ ಯೋಜನೆಯ ಇತರ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
34 ಮಂದಿ ಫಲಾನುಭವಿಗಳಿಗೆ 41 ಲಕ್ಷದ 12 ಸಾವಿರ ಮೊತ್ತದ ಚೆಕ್ ಗಳು ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೆ.ಎನ್. ಸುಬ್ಬಾರೆಡ್ಡಿ ಮಾತನಾಡಿ ಆರೋಗ್ಯ ರಕ್ಷಾ ಹಾಗೂ ಸಂಪೂರ್ಣ ಸುರಕ್ಷ ವಿಮೆಯನ್ನು ಫಲಾನುಭವಿಗಳಿಗೆ ನೀಡುತ್ತಿದ್ದು, ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಎಂದರು.
ಈ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಸದಸ್ಯ ತ್ಯಾಗರಾಜ್, ತಾಲೂಕು ಯೋಜನಾಧಿಕಾರಿ ಎಸ್ ಸುರೇಶ್ ಗೌಡ, ಜನಜಾಗೃತಿ ವೇದಿಕೆಯ ಸರ್ವ ಸದಸ್ಯರು, ಉದ್ಯಮಿ ಪ್ರಕಾಶ್, ನಿರಂಜನ್ , ವಲಯದ ಮೇಲ್ವಿಚಾರಕ ಮಂಜುನಾಥ, ಉಮಾದೇವಿ ಸೇರಿದಂತೆ ಪ್ರಗತಿ ಬಂದು ಸ್ವಸಹಾಯ ಸಂಘದ ಸದಸ್ಯರು ಇತರರು ಉಪಸ್ಥಿತರಿದ್ದರು.