Monday, December 23, 2024
Homeಜಿಲ್ಲೆಮಾರುಕಟ್ಟೆಯಲ್ಲಿ ಧಿಡೀರ್ ತರಕಾರಿ ಬೆಲೆ ಕುಸಿತ.!

ಮಾರುಕಟ್ಟೆಯಲ್ಲಿ ಧಿಡೀರ್ ತರಕಾರಿ ಬೆಲೆ ಕುಸಿತ.!

ಗೌರಿಬಿದನೂರು: ಕಳೆದೊಂದು ವಾರಕ್ಕೆ ಹೋಲಿಕೆ ಮಾಡಿದರೆ ಉಷ್ಣಾಂಷ ಹೆಚ್ಚಾಗಿ ತಾಪಮಾನ ಏರಿಕೆಯಿಂದ ರೈತರು ಬೆಳೆ ಬೆಳೆಯಲಾಗದ ಕಾರಣ ತರಕಾರಿಗಳ ಬೆಲೆ ಗಗನಕ್ಕೇರಿತ್ತು. ಆದ್ರೆ, ಮಳೆಯಾದ ಹಿನ್ನೆಲೆ ಒಂದೆ ವಾರದಲ್ಲಿ ಎಲ್ಲವೂ ಬದಲಾಗಿದೆ. ಕಳೆದ ಒಂದು ತಿಂಗಳಿನಿಂದ ಮಳೆಯಾಗುತ್ತಿರುವ ಕಾರಣ ತರಕಾರಿಗಳ ಬೆಲೆ ದಿಢೀರ್ ಕುಸಿತ ಕಂಡಿದೆ .

ಗೌರಿಬಿದನೂರಿನ ಎಪಿಎಂಸಿಯಲ್ಲಿ ವ್ಯಾಪಾರ ಇಲ್ಲದೆ ಮೂಟೆ ಗಟ್ಟಲೆ ತರಕಾರಿಗಳನ್ನ ವ್ಯಾಪಾರಸ್ಥರು ಗುಡ್ಡೆ ಹಾಕಿಕೊಂಡಿದ್ದಾರೆ. ಹೌದು, ಕಳೆದ ತಿಂಗಳು ಕೆಜಿಗೆ ಬೀನ್ಸ್-200 ರೂಪಾಯಿ ಇತ್ತು, ಈಗ 60 ರೂಪಾಯಿಗೆ ಬಂದಿದೆ. ಹೀಗೆ ಒಂದಕ್ಕಿಂತ ಒಂದು ತರಕಾರಿಯ ಬೆಲೆಗಳು ಕುಸಿತ ಕಂಡಿದೆ.

ಬಿರು ಬಿಸಿಲಿನ ತಾಪಮಾನಕ್ಕೆ ರೈತರು ಬೆಳೆ ಬೆಳೆಯಲಾಗದೆ ಪರದಾಡುವಂತಾಗಿತ್ತು, ಆದ್ರೆ, ಕಳೆದ ಒಂದು ತಿಂಗಳಿನಿಂದ ಉತ್ತಮವಾದ ಮಳೆಯ ಪರಿಣಾಮ ತರಕಾರಿ ಬೆಲೆಯಲ್ಲಿ ಇಳಿಕೆ ಕಂಡಿದೆ.

ರೈತರಿಗೆ ಸಿಗುತ್ತಿಲ್ಲ ಉತ್ತಮ ಬೆಲೆ: ಕಳೆದ 6 ತಿಂಗಳಿನಿಂದ ಮಳೆಯಿಲ್ಲದೆ ರೈತರು ತರಕಾರಿಗಳನ್ನ ಬೆಳೆಯೋದೆ ನಿಲ್ಲಿಸಿದ್ದರು. ಆದ್ರೆ, ಇತ್ತೀಚೆಗೆ ಮಳೆಯಾಗುತ್ತಿರುವ ಹಿನ್ನೆಲೆ ಗೌರಿಬಿದನೂರಿನ ರೈತರು ಹೆಚ್ಚಾಗಿ ಹಣ್ಣು ತರಕಾರಿಗಳನ್ನ ಬೆಳೆಯಲು ಆರಂಭಿಸಿದ್ದಾರೆ. ಅದರಂತೆ ಬೇರೆ ಬೇರೆ ಹಣ್ಣು ತರಕಾರಿಗಳನ್ನ ಹೆಚ್ಚಾಗಿ ಬೆಳೆದು ಮಾರುಕಟ್ಟೆಗೆ ಹಾಕುತ್ತಿದ್ದಾರೆ. ತರಕಾರಿ ಉತ್ಪಾದನೆ ಹೆಚ್ಚಾಗಿದ್ದು, ಈಗ ಸರಿಯಾದ ಬೆಲೆ ರೈತರಿಗೆ ಸಿಗುತ್ತಿಲ್ಲ.

ಒಟ್ಟಿನಲ್ಲಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ಸಧ್ಯಕ್ಕೆ ನಿಟ್ಟುಸಿರು ಬಿಟ್ಟಿದ್ರೆ, ಇತ್ತ ರೈತರು ಮತ್ತೆ ಬೆಲೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಬಂದರೂ, ಬರದೆ ಇದ್ದರೂ ಸಹ ಗೌರಿಬಿದನೂರಿನ ರೈತರು ಒಂದಿಲ್ಲೊಂದು ರೀತಿಯಲ್ಲಿ ನಷ್ಟಕ್ಕೆ ಗುರಿಯಾಗುವುದು ಇಲ್ಲಿ ಸರ್ವೇ ಸಾಮಾನ್ಯ ವಿಚಾರ ಎನ್ನುವಂತಾಗಿದೆ.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!