ಎಫ್ ಇ ಎಸ್ ಸಂಸ್ಥೆಯಿಂದ ಸಾಮೂಹಿಕ ಆಸ್ತಿಗಳ ಸಪ್ತಾಹ ಹಾಗೂ ವಿಶ್ವ ಮಣ್ಣಿನ ದಿನಾಚರಣೆ.
ಶಿಡ್ಲಘಟ್ಟ : ಇತ್ತಿಚೇಗೆ ಗ್ರಾಮೀಣ ಭಾಗದ ಬಹುತೇಕ ರೈತರು ವಾಣಿಜ್ಯ ಬೆಳೆಗಳು ಬೆಳೆಯುತ್ತಿದ್ದು, ಎಲ್ಲಾ ಕಾಲದಲ್ಲೂ ಸಮರೋಪಾದಿಯಲ್ಲಿ ಯತೇಚ್ಚವಾಗಿ ಬೆಳೆಯಲು ಮತ್ತು ಮನಬಂದಂತೆ ರಸಾಯನಿಕ ಗೊಬ್ಬರಗಳನ್ನು ಮತ್ತು ಕ್ರಿಮಿನಾಶಕಗಳನ್ನು ಬಳಸುತ್ತಿರುವುದರಿಂದ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು, ಗಾಳಿ ಮತ್ತು ಪ್ರಾಣಿಪಕ್ಷಿಗಳನ್ನು ವಿನಾಶಗೊಳಿಸುತ್ತಿದ್ದೇವೆ ಇದರಿಂದ ಸೃಷ್ಟಿಯ ಮೂಲವಾದ ಮಣ್ಣು ಮತ್ತು ನೀರು ಹಾಗೂ ಗಾಳಿ ಕಲುಷಿತಗೊಳ್ಳುತ್ತಿದ್ದು, ಮುಂದಿನ ಪಿಳಿಗೆಗೂ ನೆಲೆಯಿಲ್ಲದಂತಾಗುತ್ತಿದೆ ಎಂದು ಎಫ್ .ಇ .ಎಸ್ ಸಂಸ್ಥೆಯ ಕಾರ್ಯಕ್ರಮದ ವ್ಯವಸ್ಥಾಪಕ ನಿಖತ್ ಪರ್ವಿನ್ ವಿವರಿಸಿದರು.
ತಾಲ್ಲೂಕಿನ ಈ. ತಿಮ್ಮಸಂದ್ರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಆಸ್ತಿಗಳ ಸಾಪ್ತಾಹ ಮತ್ತು ವಿಶ್ವ ಮಣ್ಣಿನ ದಿನಾಚರಣೆಯ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು. ನಾವು ತಿನ್ನುವ ಎಲ್ಲಾ ಆಹಾರ ಪದಾರ್ಥಗಳನ್ನು ಬೆಳೆಯಲು ಮೂಲ ಮಣ್ಣು ಬೇಕಾಗಿದೆ. ನಾವು ಬೆಳೆಯುವ ಎಲ್ಲಾ ಬೆಳೆಗಳಿಗೆ ರಸಾಯನಿಕ ಗೊಬ್ಬರಗಳನ್ನು ಮತ್ತು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಿಸಿ ಮತ್ತು ಅದೇ ಬೆಳೆಗಳಲ್ಲಿ ಬೆಳೆಯುವ ಪದಾರ್ಥಗಳನ್ನು ನಾವು ತಿನ್ನುವುದರಿಂದಾಗಿ ಇಂದು ನಮ್ಮೆಲ್ಲರ ಆರೋಗ್ಯವೂ ಕೆಡುವುದಲ್ಲದೇ ಚಿತ್ರ ವಿಚಿತ್ರ ಖಾಯಿಲೆಗಳಿಗೆ ಬಲಿಯಾಗುತ್ತಿದ್ದೇವೆ ಎಂದು ತಿಳಿಸಿದರು.
ಪ್ರಮುಖವಾಗಿ ಇದನ್ನು ತಡೆಗಟ್ಟಲು ಮತ್ತು ಭೂಮಿಯಲ್ಲಿರುವ ವಿವಿಧ ಜೀವಕೋಶಗಳನ್ನು ಹಾಗೂ ಪೋಷಕಾಂಶಗಳನ್ನು ಸಂರಕ್ಷಿಸಿಸಲು ಪಂಚಗವ್ಯ & ಜೀವಾಮೃತಗಳನ್ನು ತಯಾರಿಸಿ, ತಮ್ಮ ಬೆಳೆಗಳಿಗೆ ಮತ್ತು ಮಣ್ಣಿಗೆ ಸಿಂಪಡಿಸಿ ಭೂಮಿಯನ್ನು ತಂಪಾಗಿಸಬೇಕಾಗಿರುವುದು ಬರಡಾಗುತ್ತಿರುವ ಬಯಲುಸೀಮೆಯ ಭಾಗದ ರೈತರಿಗೆ ಅತ್ಯಂತ ಅವಶ್ಯಕ ಎಂದು ಮನವರಿಕೆ ಮಾಡಿದರು ಸಾವಯವ ಬೇಸಾಯ ಮತ್ತು ಸುಸ್ಥಿರ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ವಿವಿಧ ತರಭೇತಿಗಳನ್ನು ಹಾಗೂ ಪ್ರಾತ್ಯಕ್ಷೀತೆಗಳ ಮೂಲಕ ಪ್ರೆರೇಪಿಸಲಾಗುತ್ತಿದೆ. ವೈವಿಧ್ಯತೆ ಆಧಾರಿತ ಪ್ರಕೃತಿ ಪೂರಕ ಕೃಷಿ ಪದ್ಧತಿಯಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಸಾವಯವ ದ್ರವರೂಪೀ ಗೊಬ್ಬರಗಳೂ ಸಹ ಪ್ರಮುಖ ಪಾತ್ರ ವಹಿಸುತ್ತವೆ. ಸ್ಥಳೀಯವಾಗಿಯೇ ಸಿಗುವ ನಿಸರ್ಗ ಸಹಜ ಸಂಪನ್ಮೂಲಗಳನ್ನು ಬಳಸಿ ವಿವಿಧ ಬಗೆಯ ದ್ರವಗೊಬ್ಬರಗಳನ್ನು ತಯಾರಿಸಿ ಬಳಸಬಹುದಾಗಿದೆ. ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಡಾ. ಸೆಮೀವುಲ್ಲಾ ರವರು ಮಾತನಾಡುತ್ತಾ ಇವತ್ತಿನ ದಿನಗಳಲ್ಲಿ ನಮ್ಮ ಭೂಮಿಯ ಒಡಲಲ್ಲಿ ಇರುವ ಸಂಪತ್ತನ್ನು ನಾವು ಮತ್ತು ನಮ್ಮ ಸರ್ಕಾರಗಳು ನಾಶ ಮಾಡುತ್ತಿದೆ. ಮಣ್ಣಿನ ಗುಣ ಧರ್ಮಗಳನ್ನು ಕಳೆದುಕೊಳ್ಳಲು ಮಾನವನ್ನು ಏನೇಲ್ಲ ತೊಂದರೆ ಮಾಡಬೇಕೋ ಅದೆಲ್ಲವನ್ನು ಮಾಡುತ್ತಿದ್ದಾನೆ. ೧೮ ಕೋಟಿ ಜೀವರಾಶಿಗಳಿಗೆ ಇದು ಜೀವನಾಂಶ ಮತ್ತು ಸೃಷ್ಠಿಯ ಮೂಲ ಮಣ್ಣು ಆಗಿದೆ. ಮಣ್ಣಿನ ಮಹತ್ವ ಅರಿಯಲು ಇದು ಸುದಿನ ಹಾಗೂ ಭೂ ತಾಯಿಯ ಮಡಿಲಲ್ಲಿ ಎನೇಲ್ಲಾ ಮಹತ್ವ ಇದೆ ಎಂದು ಎಫ್ಇಎಸ್ ಸಂಸ್ಥೆಯು ಹಲವಾರು ಕಾರ್ಯಕ್ರಮಗಳ ಮೂಲಕ ಎಲ್ಲಾರಿಗೂ ತಿಳಿಸುತ್ತಿಸುವುದು ಶ್ಲಾಘನೀಯ ವಾದದ್ದು, ಇವತ್ತು ಮಾನವ ಕುಲಕ್ಕೆ ಆರೋಗ್ಯವೇ ಮಾಹಾ ಬಾಗ್ಯ ಎಂದು ಎಲ್ಲರು ಹೇಳುತ್ತಾರೆ. ನಾವು ಎಲ್ಲಿ ನೋಡಿದರು ಗುಂಡುತೋಪುಗಳಿದ್ದವು, ಜಾಲಾರಿ ಮರಗಳಿದ್ದವು, ಪ್ರಾಣಿ ಪಕ್ಷಿಗಳು, ಹಾವು ಹದ್ದುಗಳಿದ್ದವು ಮತ್ತು ಪರಿಸರವನ್ನು ಸಮತೋಲನವನ್ನು ಮಾಡುತ್ತಿದ್ದವು ಎಂದು ತಿಳಿಸಿದರು.
ಪ್ರಕೃತಿಯಲ್ಲಿ ಸ್ವಾಬಾವಿಕವಾಗಿ ಸಿಗುವ ಸಂಪತ್ತಿಗೆ ಇವತ್ತು ದಕ್ಕೆಯಾಗುತ್ತಿದೆ ಇದನ್ನು ನಿಯಂತ್ರಿಸಲು ಇಂದು ಎಫಿಎಸ್ ಸಂಸ್ಥೆಯು ಉದ್ಭ ವಿಸಿದೆ. ಭೂಮಿಯಲ್ಲಿರುವ ಮರಗಳನ್ನು ಕಡಿದರೆ ಏನು, ಕೆರೆ, ಕಾಲುವೆಗಳು ಒತ್ತುವರಿ ಮಾಡಿದರೆ ನಮಗೇನು ಕೆಲಸ ಎಂದು ನಾವಿದ್ದರೆ ನಮಗೆ ಉಳಿಗಾಲವಿಲ್ಲ ನಾವೆಲ್ಲರೂ ಒಗ್ಗಟ್ಟಾಗಿ ಉಳಿಸಬೇಕಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಈ ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವಿರ್ ಆಹಮದ್ , ಈಗಲೇಟ್ ತಿಮ್ಮಸಂದ್ರ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷರಾದ ಬೈರಾರೆಡ್ಡಿ, ಗ್ರಾಮದ ಮುಖಂಡರಾದ ಸಮೀವುಲ್ಲಾ, ಮೌಲಾಸಾಭಿ, ನಾಗರಾಜು, ವೆಂಕಟಾಚಲಪತಿ, ಎಫ್ ಇ ಎಸ್ ಸಂಸ್ಥೆಯ ಸಿಬ್ಬಂದಿಯಾದ ಸೌಭಾಗ್ಯ, ಗೋಪಿ, ಲೀಲಾವತಿ, ರಮೇಶ್, ವಿಶ್ವನಾಥ್, ಮಖ್ಯ ತರಭೇತುದಾರರಾದ ಕ್ಯಾತಪ್ಪ ಮತ್ತು ಸಿಎಸ್ಎ ಸಂಸ್ಥೆಯ ಸಿಬ್ಬಂದಿಯಾದ ಪವನ್, ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿಗಳಾದ ರಾಜಮ್ಮ, ನಂಜಮ್ಮ, ಪ್ರಮೀಳ, ಮದ್ದಿರೆಡ್ಡಿ ಮುಂತಾದವರು ಹಾಜರಿದ್ದರು