Tuesday, December 24, 2024
Homeಜಿಲ್ಲೆಸಮಾಜ ಘಾತುಕ ವ್ಯಕ್ತಿಗಳಿಗೆ ಪೊಲೀಸರು ಸಿಂಹ ಸ್ವಪ್ನ : ಡಿ.ವೈ.ಎಸ್ಪಿ. ಪಿ.‌ಮುರಳಿಧರ್

ಸಮಾಜ ಘಾತುಕ ವ್ಯಕ್ತಿಗಳಿಗೆ ಪೊಲೀಸರು ಸಿಂಹ ಸ್ವಪ್ನ : ಡಿ.ವೈ.ಎಸ್ಪಿ. ಪಿ.‌ಮುರಳಿಧರ್

ಕಾನೂನು ಗೌರವಿಸಿ ಪಾಲಿಸುವ ಜನರೊಂದಿಗೆ ಪೊಲೀಸರು ಸದಾ ಜನಸ್ಮೇಹಿಯಾಗಿರುತ್ತಾರೆ.


ಶಿಡ್ಲಘಟ್ಟ : ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವನ ನಡೆಸಬೇಕು. ಯಾವುದೇ ಜಾತಿ , ಧರ್ಮ ಬೇದಬಾವಿಲ್ಲದೆ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಂಡು ಬದುಕಬೇಕು. ಪ್ರತಿಯೊಬ್ಬರೂ ಮೊದಲು ತಮ್ಮ ಕುಟುಂಬ‌ಕ್ಕೆ ಆದ್ಯತೆ ನೀಡಿ ಸಮಾಜದಲ್ಲಿ ನೆಮ್ಮದಿ ಮತ್ತು ಶಾಂತಿಯುವ ಜೀವನ ಮಾಡಬೇಕು ಎಂದು ಚಿಂತಾಮಣಿ ಉಪವಿಭಾಗದ ಡಿ.ವೈ.ಎಸ್ಪಿ. ಪಿ. ಮುರಳಿಧರ್ ಕರೆ ನೀಡಿದರು.

ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಆಟೋ ಚಾಲಕರ ಸಭೆಯಲ್ಲಿ ಉತ್ಸಾಹ ಸ್ಪೂರ್ತಿದಾಯಕವಾಗಿ ಮಾತನಾಡುತ್ತಿದ್ದರು, ಆಟೋಚಾಲಕರು ಡ್ರೈವಿಂಗ್ ಲೈಸೆನ್ಸ್, ಇನ್ಸೂರೆನ್ಸ್ ಹೊಂದಿರಬೇಕು ಸಂಚಾರಿ ನಿಯಮಗಳು ಕಡ್ಡಾಯವಾಗಿ ಪಾಲಿಸಬೇಕು. ಜೊತೆಗೆ ದ್ವಿ ಚಕ್ರ ವಾಹನ ಸವಾರರು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ತಪ್ಪದೇ ಹೆಲ್ಮೇಟ್ ಧರಿಸಿ. ಇದರಿಂದ ಜೀವ ರಕ್ಷಣೆ ಮಾಡುತ್ತದೆ. ಪೊಲೀಸರು ದಂಡ ಹಾಕುತ್ತಾರೆಂದು ಹೆದರಿ ಹೆಲ್ಮೆಟ್ ಹಾಕುವ ಅಗತ್ಯವಿಲ್ಲ. ನಿಮ್ಮನ್ನೆ ನಂಬಿಕೊಂಡಿರು ಕುಟುಂಬ ಮತ್ತು ಮಕ್ಕಳಿಗೋಸ್ಕರ ಹೆಲ್ಮೆಟ್ ಧರಿಸಬೇಕು. ಜೊತೆಗೆ ಇನ್ಸೂರೆನ್ಸ್ ಇದ್ದರೆ ಅಪಘಾತವಾದಂತಹ ಸಂದರ್ಭದಲ್ಲಿ ಕಂಪನಿಯಿಂದ ಹಣ ಬರುತ್ತದೆ. ಇನ್ನೂ ಇನ್ಸೂರೆನ್ಸ್ ಇಲ್ಲದೆ ವಾಹನ ಚಲಾಯಿಸಿ ಅಪಘಾತ ಉಂಟಾಗಿ ಪ್ರಾಣಹಾನಿಯಾದಲ್ಲಿ ಅದಕ್ಕೆ ಆಸ್ತಿ ಮುಟ್ಟುಗೋಲು ಜೊತೆಗೆ ಹಣಕಟ್ಟಿಕೊಡುವ ಕೆಲಸ ಆಗುತ್ತದೆ. ನಮ್ಮ ಬಳಿ ಆಸ್ತಿ ಏನೂ ಇಲ್ಲ ಬಿಡಿ ಎಂದು ನಿರ್ಲಕ್ಷ್ಯ ಮಾಡಿದರೂ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳು ಪಾಲಿಸಿದರೆ ದಂಡ ಕಟ್ಟುವಂತಿಲ್ಲ. ಪೊಲೀಸರಿಗೆ ಯಾರೂ ಕಾಸು ಕೊಡುವ ಅಗತ್ಯವಿಲ್ಲ. ಸರ್ಕಾರ ಸಂಬಳ ಕೊಡುತ್ತದೆ. ಕಾನೂನು ಪಾಲಿಸುವ, ಗೌರವಿಸುವ ಜನರೊಂದಿಗೆ ಪೊಲೀಸರು ಸದಾ ಇರುತ್ತಾರೆ.‌ ರೌಡಿಗಳು, ಸಮಾಜ ಘಾತುಕ ವ್ಯಕ್ತಿಗಳಿಗೆ ಪೊಲೀಸರು ಸಿಂಹ ಸ್ವಪ್ನವಾಗಿರುತ್ತಾರೆ. ನಾನು ಹಲವು ಕಡೆ ಕೆಲಸ ಮಾಡಿದ್ದೇನೆ ಪ್ರಸ್ತುತ ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಆಗಿ ಅಧಿಕಾರಿ ವಹಿಸಿಕೊಂಡು ಎಂಟು ತಿಂಗಳಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ಜನತೆ ಕಾನೂನು ಅರಿವಿನಿಂದ ನಡೆದುಕೊಳ್ಳುವುದು ನನಗೆ ತುಂಬಾ ಸಂತೋಷವಾಗಿದೆ. ಈ ಭಾಗದ ಜನರಿಗೆ ನಾನು ಕೃತಜ್ಞತೆಗಳು ಸಲ್ಲಿಸುತ್ತೇನೆ. ಎಲ್ಲರೂ ಕಾನೂನು ಪಾಲಿಸಿ ಗೌರವಿಸಬೇಕು ಎಂದು ಹೇಳಿದರು.‌

ಹಿಂದೂ‌ – ಮುಸ್ಲಿಂ , ಜಾತಿ, ಧರ್ಮ ಇವೆಲ್ಲಾ ನಾವು ಸೃಷ್ಟಿ ಮಾಡಿಕೊಂಡಿರುವುದು. ಸಮಾಜದಲ್ಲಿ ಒಳ್ಳೆಯವರು ನಮ್ಮವರು, ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳುವವರೇ ನಮಗೆ ಶತ್ರುಗಳು ಎಂದರು.

ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ವೇಣುಗೋಪಾಲ್, ಗ್ರಾಮಾಂತರ ಠಾಣೆ ಪಿ.ಎಸ್.ಐ. ಸತೀಶ್, ಕೆ., ವೆಂಕಟರೋಣಪ್ಪ, ಪೊಲೀಸ್ ಸಿಬ್ಬಂದಿ ಮಂಜುನಾಥ, ಶ್ರೀನಿವಾಸ್ ಸೇರಿದಂತೆ ಆಟೋಚಾಲಕರು, ಸಾರ್ವಜನಿಕರು ಹಾಜರಿದ್ದರು.

ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!