ಶಿಡ್ಲಘಟ್ಟ: ಸಂಚಾರಿ ನಿಯಮಗಳು ಪಾಲಿಸದೆ, ಸಂಚರಿಸುತ್ತಿದ್ದ ಹಾಗೂ ಪಾಕಿಂಗ್ ಲೈನ್ ನಲ್ಲಿ ನಿಲ್ಲಿಸದ ವಾಹನಗಳ ಸವಾರರಿಗೆ ದಂಢವಿಧಿಸುವ ಮೂಲಕ ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ ರವರ ಬಿಸಿ ಮುಟ್ಟಿಸಿದರು.
ನಗರದ ದಿಬ್ಬೂರಹಳ್ಳಿ ಮುಖ್ಯ ರಸ್ತೆಯಲ್ಲಿ ಪ್ರತ್ಯೇಕ ವಿಭಜಕ ರಸ್ತೆಯಿದ್ದು, ಎಡ ಬದಿ ರಸ್ತೆಯಲ್ಲಿ ಚಲಿಸಬೇಕಾದ ವಾಹನಗಳು ಬಲಬದಿ ರಸ್ತೆಯಲ್ಲಿ ಸಂಚರಿಸುವುದನ್ನ ಗಮನಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಜೀಪ್ ನಿಲ್ಲಿಸಿ ಸಂಚಾರಿ ನಿಯಮಗಳು ಪಾಲಿಸದೇ ಸವಾರರನ್ನು ಎಚ್ಚರಿಸಿದರು. ತಾಲ್ಲೂಕು ಕಛೇರಿಯ ಸಮೀಪ ದಿಬ್ಬೂರಹಳ್ಳಿ ಮುಖ್ಯ ರಸ್ತೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಜೀಪ್ ಗೆ ವಿರುದ್ದವಾಗಿ ಬರುತ್ತಿದ್ದ ವಾಹನ ಸವಾರರನ್ನು ತರಾಟೆ ತೆಗೆದುಕೊಂಡು ರಸ್ತೆ ನಿಯಮಗಳು ಪಾಲಿಸುವಂತೆ ಸೂಚಿಸಿದರು.
ಈ ಏರಿಯಾ ಕಾಸು ಬರುವ ಏರಿಯಾ ಎಲ್ಲೆಲ್ಲೊ ವಾಹನಗಳು ನಿಲ್ಲಿಸಿ ತಪಾಸಣೆ ಮಾಡುವ ಬದಲು ದಿಬ್ಬೂರಹಳ್ಳಿ ಮುಖ್ಯ ರಸ್ತೆ ತಾಲ್ಲೂಕು ಕಛೇರಿಯ ಸಮೀಪದಲ್ಲಿ ನಿಂತು ಸಂಚಾರಿ ನಿಯಮಗಳು ಪಾಲಿಸದ ಹಾಗೂ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ವಾಹನಗಳಿಗೆ ದಂಢ ವಿಧಿಸುವಂತೆ ನಗರ ಠಾಣೆಯ ಪಿ.ಎಸ್.ಐ ಹಾಗೂ ಎಎಸ್ಐ ಅವರಿಗೆ ಸೂಚಿಸಿದರು.