ನಾಳೆ ನಗರದ ಕಾಂಗ್ರೇಸ್ ಭವನದಲ್ಲಿ ಅಭಿನಂದನಾ ಸಮಾರಂಭ ಕಾರ್ಯಕ್ರಮ.
ಶಿಡ್ಲಘಟ್ಟ : ಹಿರಿಯ ಅನುಭವಿ ರಾಜಕಾರಣಿ ಮಾಜಿ ಸಚಿವರಾದ ವಿ ಮುನಿಯಪ್ಪ ಅವರು ಮತ್ತೆ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸುತ್ತಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ದೇಶದಲ್ಲಿ ಅಧಿಕಾರದ ಗದ್ದುಗೆ ಏರಲು ಶತಾಯ ಗತಾಯ ಪ್ರಯತ್ನ ಮಾಡುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳು ಗೆಲ್ಲುವುದಕ್ಕೆ ತಂತ್ರ ರೂಪಿಸಿದೆ.
ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಕಳೆದ ಬಾರಿ ವಿಧಾನ ಸಭೆ ಚುನಾವಣೆಯಿಂದ ದೂರ ಸರಿದಿದ್ದ ವಿ ಮುನಿಯಪ್ಪ ಅವರು ಮತ್ತೆ ಸಕ್ರೀಯವಾಗಿ ರಾಜಕೀಯ ಅಖಾಡಕ್ಕೆ ದುಮಿಕಿದ್ದಾರೆ. ಕಾಂಗ್ರೇಸ್ ಪಕ್ಷ ವಿ ಮುನಿಯಪ್ಪ ಅವರನ್ನ ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೆ ಪ್ರಬಲ ಅಭ್ಯರ್ಥಿ ಪುಟ್ಟು ಆಂಜಿನಪ್ಪ ಅವರು ಕಾಂಗ್ರೇಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದು, ಇದರಿಂದ ಸ್ಥಳೀಯವಾಗಿ ಕಾಂಗ್ರೇಸ್ ಗೆ ಮತ್ತಷ್ಟು ಬೆಂಬಲ ಸಿಕ್ಕಂತಾಗಿದೆ. ಕರ್ನಾಟಕ ಪ್ರದೇಶ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಪಕ್ಷದಲ್ಲಿ ಎಲ್ಲಾ ಹಿರಿಯ ಮುಖಂಡರೊಂದಿಗೆ ಸೇರಿ ಕೆಲಸ ಮಾಡಬೇಕೆಂದು ಈಗಾಗಲೇ ಸೂಚನೆ ನೀಡಿದ್ದಾರೆ.
ನಾಳೆ ಶುಕ್ರವಾರ ನಗರದ. ಕಾಂಗ್ರೇಸ್ ಭವನದಲ್ಲಿ ಬೆಳಗ್ಗೆ 10:30 ಕ್ಕೆ ನೂತನವಾಗಿ ಕೆಪಿಸಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ಸಚಿವರಾದ ವಿ.ಮುನಿಯಪ್ಪ ಅವರಿಗೆ ಅಭಿನಂಧನಾ ಸಮಾರಂಭ ಕಾರ್ಯಕ್ರಮವನ್ನ ಕಾಂಗ್ರೇಸ್ ಪಕ್ಷದ ಮುಖಂಡರಿಂದ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು,ಮುಖಂಡರು ಭಾಗವಹಿಸವಂತೆ ಕರೆ ನೀಡಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆವಿ ಗೌತಮ್ ಅವರ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡುತ್ತಿದ್ದು, ಲೋಕ ಸಭಾ ಚುನಾವಣೆಯಲ್ಲಿ ಕಾರ್ಯಕರ್ತರು, ಪಕ್ಷದ ಮುಖಂಡರು ಹೊಸ ಉಮ್ಮಸ್ಸಿನಿಂದ ಕೆಲಸ ಮಾಡುವ ಉರುಪು ಮೂಡಿಸಿದ್ದು, ಮುಂದೆ ಯಾವೆಲ್ಲಾ ಬದಲಾಣೆಗಳು, ಬೆಳವಣಿಗೆಗಳು ಆಗಲಿದೆಯೆಂದು ಕಾದು ನೋಡಬೇಕಿದೆ. ಅಂತೂ ರಾಜಕಾರಣ ನಿಂತ ನೀರಲ್ಲ ಎಂಬುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.
ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ