ಶಿಡ್ಲಘಟ್ಟ : ಖಡಕ್ ಪೊಲೀಸ್ ಅಧಿಕಾರಿಯೆಂಬ ಜನಪ್ರಿಯತೆ ಗಳಿಸಿರುವ ಶಿಡ್ಲಘಟ್ಟದ ಆರಕ್ಷಕ ವೃತ್ತ ನಿರೀಕ್ಷಕರಾದ ಎಂ. ಶ್ರೀನಿವಾಸ್ ರವರ ಹುಟ್ಟು ಹಬ್ಬದ ಪ್ರಯುಕ್ತ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ದಲಿತ ಮುಖಂಡರು, ಅಭಿಮಾನಿಗಳು ಸೇರಿದಂತೆ ,ಯುವಕರು, ಪತ್ರಕರ್ತರು ಒಳಗೊಂಡಂತೆ ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಅವರಿಗೆ ತಲೆಗೆ ಮೈಸೂರು ಪೇಟ ತೊಟ್ಟು, ಶಾಲು ಹೊದಿಸಿ, ಬೃಹತ್ ಹೂವಿನ ಹಾರ ಹಾಕಿ ಕೇಕ್ ತಿನ್ನಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.
ಹೌದು ನಿನ್ನೆ ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಅವರ ಹುಟ್ಟು ಹಬ್ಬದ ಪೋಸ್ಟ್ ಗಳು ವಾಟ್ಸಾಪ್, ಪೇಸ್ ಬುಕ್, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದವು. ಪೊಲೀಸ್ ಠಾಣೆಗೆ ನಿಕಟ ಸಂಪರ್ಕ ಹೊಂದಿರುವ ಮುಖಂಡರು, ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ದಲಿತ ಮುಖಂಡರು, ಸೇರಿದಂತೆ ಪತ್ರಕರ್ತರು ಶುಭಾಶಯಗಳು ಕೋರಿದರು.
ನೇರ ಮಾತು, ಉತ್ತಮ ಸೇವೆ, ಮಾತಿನ ದಾಟಿಯಿಂದ ಗದರಿಸಿ ಬುದ್ದಿ ಹೇಳಿ ಕಳುಹಿಸುವ ಮೂಲಕ ಜನ ಮನ್ನಣೆಗಳಿಸಿರುವ ಇವರ ಸೇವೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅವರ ಹುಟ್ಟು ಹಬ್ಬವನ್ನು ಯುವಕರು ನಗರದ ಅಂಧ ಮಕ್ಕಳ ಶಾಲೆಯಲ್ಲಿ ಕೇಕ್ ಕತ್ತರಿಸಿ ಸಹಿಯನ್ನು ಹಂಚುವ ಮೂಲಕ ಆಚರಿಸಿದರು. ಇನ್ನೂ ಸಂಘ – ಸಂಸ್ಥೆಗಳ ಮುಖಂಡರು, ಅಭಿಮಾನಿಗಳು, ಯುವಕರು, ಪತ್ರಕರ್ತರು, ಸೇರಿದಂತೆ ದಲಿತ ಮುಖಂಡರು ಕಛೇರಿಗೆ ತೆರಳಿ ಸರ್ಕಲ್ ಇನ್ಸ್ ಪೆಕ್ಟರ್ ಅವರನ್ನ ಸನ್ಮಾನಿಸಿ ಅಭಿನಂಧಿಸುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳು ಕೋರಿದ್ದಾರೆ.
ಹುಟ್ಟು – ಸಾವಿನ ನಡುವೆ ಜೀವನದಲ್ಲಿ ಸಾಧಿಸುವ ಚಲವಿರಬೇಕು. ದೇವರು ನಮಗೆ ಅವಕಾಶಗಳು ಕೊಟ್ಟಾಗ ಒಳ್ಳೆಯ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಜನಮನ್ನಣೆ ಸಿಗುತ್ತದೆ. ನಡೆಯುವ ದಾರಿ, ನಡೆ, ನುಡಿ, ಆಚಾರ, ವಿಚಾರ. ಮಾಡುವ ಕೆಲಸದಲ್ಲಿ ನಿಷ್ಟೆ ಇದ್ದರೆ ಉನ್ನತ ಸ್ಥಾನಮಾನ ಸಿಗುತ್ತದೆ. ಸರ್ಕಲ್ ಇನ್ಸ್ ಪೆಕ್ಟರ್ ಎಂ. ಶ್ರೀನಿವಾಸ್ ಅವರು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.