ಬೆಂಗಳೂರು: ಇಸ್ಲಾಂ ಧರ್ಮದ ಪ್ರಮುಖ ಹಬ್ಬಗಳಲ್ಲಿ ಒಂದಾದ ಪವಿತ್ರ ರಂಜಾನ್ ಹಬ್ಬವನ್ನ ಇಂದು ಎಲ್ಲೆಡೆ ಮುಸ್ಲಿಂರು ನಂಬಿಕೆ, ಶ್ರದ್ದೆಯಿಂದ ಆಚರಿಸುತ್ತಿದ್ದು, ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ. ಸಿದ್ದರಾಮಯ್ಯ ಅವರು ಮುಸ್ಲಿಂ ಬಾಂದವರಿಗೆ ಹಬ್ಬದ ಶುಭಾಶಯಗಳು ಕೋರಿದ್ದಾರೆ.
ತ್ಯಾಗ ಮತ್ತು ಸೌಹಾರ್ದತೆಯ ಸಂಕೇತ ಪವಿತ್ರ ರಂಜಾನ್ ಹಬ್ಬವು ಎಲ್ಲರಿಗೂ ಶಾಂತಿ ಸಮೃದ್ದಿಯನ್ನುಂಟು ಮಾಡಲಿ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದು ಶುಭವನ್ನ ಹಾರೈಸಿ ಮುಸ್ಲಿಂ ಬಾಂದವರಿಗೆ ಸಿದ್ದರಾಮಯ್ಯ ಅವರು ಶುಭಾಶಯಗಳು ತಿಳಿಸಿದ್ದಾರೆ.
ರಂಜಾನ್ ಹಬ್ಬವು ನಂಬಿಕೆಯಂತೆ, ಅಲ್ಲಾನೊಂದಿಗಿನ ತಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು, ಹಾಗೂ ಉಪವಾಸ ಆತ್ಮಸ್ಥೈರ್ಯ ಹೆಚ್ಚಿಸಲು, ಹಸಿವಿನ ಮಹತ್ವ ಮತ್ತು ಅದೃಷ್ಟ ಸಂಪಾದನೆ ಮಾಡಲು ಶ್ರದ್ಧೆಯಿಂದ ಮುಸ್ಲಿಂರು ಉಪವಾಸವನ್ನು ಆಚರಿಸುತ್ತಾರೆ. ಈ ಹಬ್ಬದ ಆಚರಣೆ ಮೂಲಕ ಅಲ್ಲಾನಲ್ಲಿ ನಂಬಿಕೆ ಇಟ್ಟಿರುತ್ತಾರೆ.