ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ನಿರ್ವಹಿಸಲು ಸೂಚನೆ.
ಶಿಡ್ಲಘಟ್ಟ : ಲೋಕಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗಧಿಯಾಗಿದೆ. ಚುನಾವಣೆಯ ಪೂರ್ವ ಸಿದ್ದತೆಗಳು ಅಧಿಕಾರಿಗಳು ಕೈಗೊಂಡಿದ್ದು ಈ ನಿಟ್ಟಿನಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಮುಖ್ಯ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಚುನಾವಣಾ ಸಿದ್ದತೆಗಳ ಅವಲೋಕನಕ್ಕಾಗಿ ಶುಕ್ರವಾರದಂದು ಶಿಡ್ಲಘಟ್ಟಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಸೆಕ್ಟರ್ ಅಧಿಕಾರಿಗಳಿಗೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಚುನಾವಣೆ ಆಯೋಗದಿಂದ ಕಾಲಕಾಲಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಮಗೆ ನಿರ್ದೇಶನ ನೀಡಲಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಯಾವುದೇ ರೀತಿಯಲ್ಲಿ ಅಡೆತಡೆ ಇಲ್ಲದೆ ವ್ಯವಸ್ಥಿತವಾಗಿ ಯಶಸ್ವಿಯಾಗಿ ಚುನಾವಣೆ ನಡೆಯಬೇಕು ಆ ನಿಟ್ಟಿನಲ್ಲಿ ಚುನಾವಣೆ ಆಯೋಗ ಮುಖ್ಯಚುನಾವಾಧಿಕಾರಿಘಲು, ಸಹಾಯಕ ಚುನಾವಣೆ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳನ್ನು ನೇಮಿಸಿ ವಿಶೇಷವಾದ ಜವಬ್ದಾರಿಯನ್ನ ನೀಡಿದೆ. ಹಾಗಾಗಿ ಅಧಿಕಾರಿ ತಮಗೆ ವಿಶೇಷ ಅಧಿಕಾರಿಗಳು, ಮತಗಟ್ಟೆಯ ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಪ್ರತಿಯೊಬ್ಬರೂ ನಮ್ಮ ಜವಬ್ದಾರಿಗಳು ಏನೆಂದು ತಿಳಿದುಕೊಳ್ಳಬೇಕು ಇಲ್ಲವಾದರೆ ಮತದಾರರು ಆತಂಕಪಡುವಂತಾಗುತ್ತದೆ. ಮತಗಟ್ಟೆಯ ಬಳಿ ಸಮಸ್ಯೆ ಉಂಟಾದರೆ ಅಲ್ಲಿಗೆ ಎಷ್ಟು ಸಮಯದಲ್ಲಿ ತಲುಪಬಹುದು ರೂಟ್ ಮ್ಯಾಪಿಂಗ್ ಎಲ್ಲವೂ ಸಿದ್ದತೆ ಮಾಡಿಕೊಂಡಿರಬೇಕು ಚುನಾವಣೆಯಲ್ಲಿ ಸೆಕ್ಟರ್ ಅಧಿಕಾರಿಗಳು ಚುನಾವಣೆಯ ಬಗ್ಗೆ ಎಲ್ಲಾ ವಿಷಯವನ್ನ ತಿಳಿದುಕೊಂಡಿರಬೇಕು. ಚುನಾವಣೆ ಪೂರ್ವತಯಾರಿ ಮಾಡಿಕೊಂಡು ಚುನಾವಣೆ ಯಶಸ್ವಿಯಾಗಿ ನಡೆಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್ ಸ್ವಾಮಿ, ಜಾವೀದ ನಸೀಮಾ ಖಾನಂ, ಡಿವೈಎಸ್ಪಿ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ , ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.