Monday, December 23, 2024
HomeUncategorizedವಕ್ಫ್ ಹೆಸರು ನಮೂದಿಸಿರುವ ಅಧಿಕಾರಿಗಳನ್ನ ಜೈಲಿಗೆ ಹಾಕಬೇಕು : ಛಲವಾಧಿ ನಾರಾಯಣಸ್ವಾಮಿ.

ವಕ್ಫ್ ಹೆಸರು ನಮೂದಿಸಿರುವ ಅಧಿಕಾರಿಗಳನ್ನ ಜೈಲಿಗೆ ಹಾಕಬೇಕು : ಛಲವಾಧಿ ನಾರಾಯಣಸ್ವಾಮಿ.

ರೈತರ ಆಸ್ತಿಗಳಾಗಲಿ, ಮಠ, ದೇವಾಲಯಗಳ ಜಾಗವನ್ನ ನಾವು ವಾಪಸ್ ಪಡೆಯುತ್ತೇವೆಂದು ಭರವಸೆ.!

ಶಿಡ್ಲಘಟ್ಟ : ದೇವಾಲಯದ ಜಾಗವನ್ನ ವಕ್ಫ್ ಹೆಸರಿಗೆ ನಮೂದಿಸಿರುವ ಅಧಿಕಾರಿಗಳನ್ನು ಸಮುದ್ರದಲ್ಲಿ ಹಾಕಬೇಕು. ಅಥವಾ ಅಂತಹ ಎಲ್ಲಾ ಅಧಿಕಾರಿಗಳನ್ನ ಜೈಲಿಗೆ ಹಾಕಬೇಕು. ಆ ಕೆಲಸ ಈ ಸರ್ಕಾರ ಮಾಡುತ್ತದೆಯಾ ಎಂದು ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ ಗುಡುಗಿದರು.

ಇಂದು ತಾಲ್ಲೂಕಿನ ಬೆಳ್ಳೂಟಿ ಆಂಜನೇಯಸ್ವಾಮಿ ದೇವಾಲಯಕ್ಕೆ ಬೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸ್ಥಳೀಯರಿಂದ ಅಹವಾಲುಗಳು ಆಲಿಸಿ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ವಕ್ಫ್ ಬೋರ್ಡ್ ವಿಚಾರದಲ್ಲಿ ದೊಡ್ಡ ಗೊಂದಲ ಆರಂಭವಾಗಿದೆ. ಭಾರತೀಯ ಜನತಾ ಪಾರ್ಟಿ ಮೂರು ತಂಡಗಳಾಗಿ ರಾಜ್ಯಾದ್ಯಂತ ಸಮಸ್ಯೆಯಾಗಿರುವ ಪ್ರದೇಶಗಳಿಗೆ ಪ್ರವಾಸ ಮಾಡಿ ಜನರಿಂದ ವಾಸ್ತವ ವಿಚಾರವನ್ನ ಆಲಿಸಿ ಅಹವಾಲುಗಳು ಸ್ವೀಕರಿಸಿದ್ದೇವೆ. ವಕ್ಫ್ ಆಸ್ತಿಯ ವಿಚಾರ ಪರಿಶೀಲಿಸುವಂತಹ ಕೆಲಸ ಮಾಡುತ್ತಿದ್ದೇವೆ. ಮುಳಬಾಗಿಲಿಗೂ ಸಹ ಭೇಟಿ ಕೊಟ್ಟು ಅಲ್ಲಿನ ಸಮಸ್ಯೆಗಳು ಆಲಿಸಿ ದಾಖಲೆಗಳನ್ನು ಈಗಾಗಲೇ ಪಡೆದುಕೊಂಡಿದ್ದೇವೆ. 9ನೇ ತಾರೀಖು ಸದನ ನಡೆಯುತ್ತದೆ. ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪ ಮಾಡಲಾಗುವುದು ಎಂದರು.

ರಾಮ ಜನ್ಮಭೂಮಿ ಕಥೆ ಏನಾಗಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಐದು ನೂರು ವರ್ಷಗಳ ಕಾಲ ಹೋರಾಟ ಮಾಡಿ ಕೊನೆಗೂ ನ್ಯಾಯಯುತವಾಗಿ ನಾವೇ ತೆಗೆದುಕೊಂಡಿದ್ದೇವೆ. ವಕ್ಫ್ ವಿಚಾರದಲ್ಲೂ ನಾವೇ ಗೆಲ್ಲುತ್ತೇವೆ . ಇದನ್ನು ನಾವು ಬಿಡುವುದಿಲ್ಲ. ರೈತರ ಆಸ್ತಿಗಳಾಗಲಿ, ಮಠಮಾನ್ಯಗಳ ಆಸ್ತಿಗಳಾಗಲಿ ದೇವಾಲಯಗಳ ಜಾಗವನ್ನ ನಾವು ವಾಪಸ್ ಪಡೆಯುತ್ತೇವೆಂದು ಭರವಸೆ ನೀಡಿದರು.

ಬೆಳ್ಳೂಟಿ ಗೇಟ್ ಬಳಿಯಿರುವ ಆಂಜನೇಯಸ್ವಾಮಿ ದೇವಾಲಯದ ಜಮೀನು ವಕ್ಫ್ ಹೆಸರಿಗೆ ಆಗಿರುವುದು ಬಿಜೆಪಿ ಆಡಳಿತ ಅವಧಿಯಲ್ಲೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಅವಧಿಯಲ್ಲಿ ಯಾವ ಅಧಿಕಾರಿ ವಕ್ಪ್ ಎಂದು ನಮೂದಿಸಿದ್ದಾರೋ ಅವರನ್ನು ತೆಗೆದುಕೊಂಡು ಹೋಗಿ ಸಮುದ್ರಕ್ಕೆ ಆಗಬೇಕು. ಈ ಸರ್ಕಾರ ಆ ಕೆಲಸ ಮಾಡುತ್ತಾ.? ಈ ಸರ್ಕಾರದ ಅವಧಿಯಲ್ಲಿ ಅವರನ್ನೆಲ್ಲಾ ಜೈಲಿಗೆ ಹಾಕಲಿ ಯಾರಾದರೂ ಮಾಡಿರಲಿ, ಯಾರೇ ಮಾಡಿದರೂ ತಪ್ಪು ತಪ್ಪೇ ಅಲ್ವಾ.? ಜಮೀರ್ ಅಹಮದ್ ಪ್ರತಿ ದಿನ ಸಿದ್ದರಾಮಯ್ಯ ಅವರ ಹೆಸರು ಹೇಳುತ್ತಿದ್ದಾರೆ. ಅವರನ್ನು ಒಪ್ಪಿಸಿ ಅವರ ಸಲಹೆ ಮೇರೆಗೆ ಆಶೀರ್ವಾದ ಪಡೆದು ಮಾಡಿದ್ದಾರಂತೆ ಎಂದು ತಿಳಿಸಿದರು.

ಮಾಜಿ ಸಂಸದ ಎಸ್ ಮುನಿಸ್ವಾಮಿ ಮಾತನಾಡಿ ಆ ಸಮುದಾಯದವರು ತಾಲ್ಲೂಕು ದಂಡಾಧಿಕಾರಿಗಳಾಗಿ ಬಂದಾಗ ಕಮ್ಯೂನಿಟಿಯ ಮೇಲೆ ಪ್ರೀತಿ ಇರುತ್ತದೆ. ಕೋಲಾರದಲ್ಲಿ ಡೀಸಿ ಅಕ್ರಂಪಾಷ ಇದ್ದಾರೆ. ಯಾವುದೇ ತಾಲ್ಲೂಕಿಗೆ ಆ ಸಮುದಾಯದವರು ಬಂದಾಗ ವಕ್ಫ್ ಹೆಸರಿಗೆ ಮಾಡಿದ್ದಾರೆ. ಜಮೀರ್ ಅಹಮದ್, ಸಿದ್ದರಾಮುಲ್ಲಾ ಖಾನ್ ಬಂದಾಗ ಒಂದಷ್ಟು ಮಾಡುವುದು ಹೀಗೆ ಮಾಡಿಕೊಂಡು ಬಂದಿದ್ದಾರೆ. ನೆಹರೂ ಅವರ ಕಾಲದಿಂದಲೂ ವಂಶ ಪಾರಂಪರ್ಯವಾಗಿ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ನಮ್ಮ ಆಸ್ತಿಗೆ ಬರುವ ಮುನ್ನವೇ ನಾವು ಎಚ್ಚತ್ತುಕೊಳ್ಳಬೇಕು ಇದನ್ನೆಲ್ಲಾ ಸರಪಡಿಸುವ ಕೆಲಸ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಂ.ಎಲ್.ಸಿ ವೈ. ಎ ನಾರಾಯಣಸ್ವಾಮಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾದ ಸೀಕಲ್ ಆನಂದ್ ಗೌಡ, ಬಿಜೆಪಿ ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ನಗರಸಭೆ ಸದಸ್ಯರಾದ ನಾರಾಯಸ್ವಾಮಿ, ಸೇರಿದಂತೆ ಇತರರು ಉಪಸ್ಥಿತಿರಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!