Sunday, December 22, 2024
Homeರಾಜ್ಯಅನರ್ಹ ಬಿಪಿಎಲ್ ಕಾರ್ಡ್ ರದ್ದು, ಕುರಿಗಾಹಿಗಳಿಗೆ ಗನ್‌ ಲೈಸೆನ್ಸ್.!

ಅನರ್ಹ ಬಿಪಿಎಲ್ ಕಾರ್ಡ್ ರದ್ದು, ಕುರಿಗಾಹಿಗಳಿಗೆ ಗನ್‌ ಲೈಸೆನ್ಸ್.!

ಅರ್ಹ ಕಾರ್ಡುದಾರರ ಸಮೀಕ್ಷೆಗೆ ಸರ್ಕಾರ ಆದೇಶ.!

ಬೆಂಗಳೂರು: ಮಂಗಳವಾರ ನಡೆದ ಜಿಲ್ಲಾಧಿಕಾರಿಗಳು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಪ್ರಮುಖ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ಸುದೀರ್ಘ ಸಭೆಯ ನಂತರ ಮಂಗಳವಾರ ಸಂಜೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅನರ್ಹ ಬಿಪಿಎಲ್ ಕಾರ್ಡುಗಳನ್ನು ರದ್ದುಪಡಿಸುವುದು, ಕುರಿಗಾಹಿಗಳಿಗೆ ಗನ್ ಲೈಸೆನ್ಸ್ ನೀಡುವುದು, ಕಾಡಿನೊಳಗೆ ಕುರಿ ಮೇಯಿಸಲು ಅವಕಾಶ ನೀಡುವುದು ಸೇರಿದಂತೆ ಹಲವಾರು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ವಿಪತ್ತು ನಿರ್ವಹಣೆ, ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರು, ನರೇಗಾ, ಹೆದ್ದಾರಿ, ಮೂಲಸೌಕರ್ಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ, ಅನರ್ಹ ಪಡಿತರ ಚೀಟಿಗಳ ರದ್ದು ಸೇರಿದಂತೆ 30 ಇಲಾಖೆಗಳ ಚರ್ಚಿಸಲಾಯಿತು. 68 ವಿವಿಧ ಕಾರ್ಯಕ್ರಮಗಳ ಪ್ರಗತಿಯನ್ನು ಜಿಲ್ಲಾವಾರು ಪರಿಶೀಲಿಸಲಾಯಿತು. ಕಡಿಮೆ ಸಾಧನೆಯಾದ ಜಿಲ್ಲೆಗಳ ಅಧಿಕಾರಿಗಳಿಗೆ ಕೆಲಸಗಳನ್ನು ಚುರುಕುಗೊಳಿಸುವಂತೆ ಸೂಚಿಸಲಾಯಿತು ಎಂದರು.

ರಾಜ್ಯದಲ್ಲಿ 4,37.23,911 ಜನರು ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿದ್ದಾರೆ. ಬಿಪಿಎಲ್ ಅಡಿಯಲ್ಲಿ 1.27 ಕೋಟಿ ಬಿಪಿಎಲ್ ಕುಟುಂಬಗಳಿವೆ. ಹೊಸ ಕಾರ್ಡ್‌ಗಳಿಗೆ 2.95 ಲಕ್ಷ ಅರ್ಜಿ ಬಾಕಿಯಿವೆ. ಈ ಕುರಿತು ಪರಿಶೀಲನೆ ನಡೆಸಿ, ಮೃತ ಸದಸ್ಯರ ಹೆಸರು ತೆಗೆದು ಹಾಕುವ ಪ್ರಕ್ರಿಯೆ ತ್ವರಿತಗೊಳಿಸಬೇಕು. ಒಟ್ಟಾರೆ ಸಾರಾಂಶ ಒಬ್ಬ ಅರ್ಹರೂ ಬಿಟ್ಟು ಹೋಗಬಾರದು. ಅನರ್ಹರು ಸವಲತ್ತು ಪಡೆಯಬಾರದು. ಕುರಿತು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

16 ಗಂಟೆಗಳ ಕಾಲ ನಡೆದ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಮತ್ತು ಮಂಗಳವಾರ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಬರೋಬ್ಬರಿ 16 ಗಂಟೆಗಳ ಸಭೆ ನಡೆಸಿದ್ದಾರೆ.

ಮಂಗಳವಾರ ಬೆಳಗ್ಗೆ 10 ಗಂಟೆಗೆ ಆರಂಭವಾಗಿದ್ದ ಸಭೆಯು ರಾತ್ರಿ 8.15 ಕ್ಕೆ ಮುಗಿದಿತ್ತು. ಈ ಮೂಲಕ ಸತತ 9 ಗಂಟೆಯ ಸಭೆ ನಡೆಸಿದ್ದರು. ಇನ್ನು ಮಂಗಳವಾರ ಬೆಳಗ್ಗೆ 10.30 ಕ್ಕೆ ಆರಂಭವಾದ ಸಭೆಯು ಸಂಜೆ 5.30 ರ ವೇಳೆಗೆ ಮುಗಿದಿದೆ. ಈ ಮೂಲಕ ಸತತ 7 ಗಂಟೆಗಳ ಸಭೆ ನಡೆಸಿದ್ದು ಎರಡೂ ದಿನಗಳಲ್ಲಿ ಒಟ್ಟು 16 ಗಂಟೆಗಳ ಸಭೆ ನಡೆಸಿ ಹಲವಾರು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಪ್ರಮುಖ ಅಂಶಗಳು.

1) ಡೆಂಗ್ಯೂ ನಿಯಂತ್ರಣಕ್ಕೆ ಉನ್ನತ ಮಟ್ಟದ ಕಾರ್ಯಪಡೆ,

1) ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ತಲಾ 10 ಹಾಸಿಗೆ ಡೆಂಗ್ಯೂ, ಸಮೀಕೆ ನಡೆಸಿ ಅನರ್ಹ ಬಿಪಿಎಲ್ ಕಾರ್ಡುಗಳ ಪತ್ತೆ ಮತ್ತು ದ್ದು ಮಾಡಲು ಆದೇಶ.

3)ಕುರಿಗಾಹಿಗಳಿಗೆ ಗನ್ ಲೈಸೆನ್ಸ್ ನೀಡಲು ಸೂಚನೆ

4) ಆರಣ್ಯಗಳಲ್ಲಿ ಕುರಿ ಮೇಯಿಸಲು ಅಡ್ಡಿ ಮಾಡಬಾರದು‌

5) ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ನಿರ್ಧಾರ
ಪ್ರವಾಹ ಪೀಡಿತರಿಗೆ ಅಗತ್ಯ ನೆರವು ನೀಡಿ.

ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಹಿಂದಿನ ಅನುಭವದ ಆಧಾರದಲ್ಲಿ ರಾಜ್ಯದ 27 ಜಿಲ್ಲೆಗಳ 177 ತಾಲ್ಲೂಕುಗಳ 1,247 ಗ್ರಾಮ ಪಂಚಾಯಿತಿಗಳಲ್ಲಿ ಪ್ರವಾಹದ ಅಪಾಯ ಹೊಂದಿರುವ 2,225 ಗ್ರಾಮಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳ 20,38,334 ಜನರು ಪ್ರವಾಹ ಪೀಡಿತರಾಗುವ ಸಾಧ್ಯತೆ ಇದೆ ಎಂದು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ದರಾಗಿರುವಂತೆ ಸೂಚಿಸಲಾಗಿದೆ. ಯಾವುದೇ ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಯಿತು.

ಅವಕಾಶ ವಂಚಿತ ಸಮುದಾಯಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು, ಉತ್ಪಾದನಾ ಚಟುವಟಿಕೆಗಳು ಹೆಚ್ಚಾಗಬೇಕು, ಬರಬೇಕು. ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕು. ಜನರು ಸ್ವಂತ ವೆಚ್ಚದಿಂದ ಆಸ್ಪತ್ರೆಗಳಿಗೆ ಖರ್ಚು ಮಾಡಿ ಬಡತನಕ್ಕೆ ಜಾರಬಾರದು. ಈ ಬಗ್ಗೆ ಗಮನಹರಿಸಬೇಕೆಂದು ಸಿಎಂ ಸೂಚನೆ ನೀಡಿದರು.

ಶಾಲಾ ಕೊಠಡಿ ನಿರ್ಮಾಣಕ್ಕೆ ಅನುಮೋದನೆ: 9,811 ಶಾಲಾ ಕೊಠಡಿಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಇವುಗಳಲ್ಲಿ 1,000 ಪಿ.ಯು. ಕಾಲೇಜುಗಳ ಕೊಠಡಿಗಳು ಸೇರಿವೆ. ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ನಿರ್ದೇಶನ ನೀಡಲಾಗಿದೆ. ಶ್ರದ್ಧೆಯಿಂದ ಮಾಡುವಂತೆ ನೋಡಿಕೊಳ್ಳಬೇಕು. ಅವರಲ್ಲಿ ಬದ್ಧತೆ ಮತ್ತು ಶಿಸ್ತು ಮೈಗೂಡುವಂತೆ ನೋಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!