Wednesday, January 29, 2025
Homeಜಿಲ್ಲೆಶಿಡ್ಲಘಟ್ಟ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ.!

ಶಿಡ್ಲಘಟ್ಟ ಸಬ್ ರಿಜಿಸ್ಟರ್ ಕಛೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ.!

ಪ್ರತಿ ದಸ್ತಾವೇಜು ನೋಂದಣಿಗೆ ಲಂಚ ಲಂಚ. ಹೇಳೋರಿಲ್ಲ. ಕೇಳೋರಿಲ್ಲ.!


‘ಸಂವಿಧಾನ ಶಕ್ತಿ ನ್ಯೂಸ್’ ಚಿಕ್ಕಬಳ್ಳಾಪುರ : ಜಿಲ್ಲೆಯ, ಶಿಡ್ಲಘಟ್ಟ ತಾಲ್ಲೂಕು ಸಬ್ ರಿಜಿಸ್ಟರ್ ಕಛೇರಿಯಲ್ಲಿ ವ್ಯಾಪಕವಾಗಿ ಯಾರ ಭಯವಿಲ್ಲದೆ ದಸ್ತಾವೇಜುಗಳ ನೋಂದಣಿಗಾಗಿ ಲಂಚ ಪಡೆಯುತ್ತಿರುವ ಹಾಗೂ ಭ್ರಷ್ಟಾಚಾರ ನಡೆಯುತ್ತಿರುವುದು ವಿಡಿಯೋ ಬೆಳಕಿಗೆ ಬಂದಿದೆ.

ಹೌದು ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೋಟ್ಯಾಂತರ ರೂಪಾಯಿಗಳು ಖರ್ಚು ಮಾಡಿ ಕಾವೇರಿ 2.0 ತಂತ್ರಾಂಶ ಅನುಷ್ಠಾನಗೊಳಿಸಿದೆ. ಆದರೆ ಆನ್ ಲೈನ್ ಸೇವೆ ಬಂದರೂ ಸಹಾ ಭ್ರಷ್ಟ ಅಧಿಕಾರಿಗಳು ಭ್ರಷ್ಟಾಚಾರ ಮಾಡುವಲ್ಲಿ, ಲಂಚದ ಹಣ ವಸೂಲಿ ಮಾಡುವಲ್ಲಿ ಪಿ.ಎಚ್.ಡಿ ಮಾಡಿದ್ದಾರೆ. ಸರ್ಕಾರ ಭ್ರಷ್ಟಾಚಾರ ಕಡಿವಾಣಕ್ಕೆ ಹಲವು ಹೊಸ ಕ್ರಮಗಳು ಕೈಗೊಂಡಿದ್ದರೆ, ಭ್ರಷ್ಟ ಅಧಿಕಾರಿಗಳು ಮಾತ್ರ ರಂಗೋಲಿ ಕೆಳಗೆ ನುಗ್ಗಿ ಹಣ ಮಾಡುವಲ್ಲಿ ನಿಸ್ಸೀಮರಾಗಿದ್ದಾರೆ. ಇದಕ್ಕೆ ಪೂರಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು, ಸಬ್ ರಿಜಿಸ್ಟರ್ ಕಛೇರಿಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದೆ‌. ದಸ್ತಾವೇಜಿಗೆ ಸೀಲ್ ಹಾಕುವುದರಿಂದ ಹಿಡಿದು ಸಬ್ ರಿಜಿಸ್ಟರ್ ಅಧಿಕಾರಿಯವರೆಗೂ ಇಲ್ಲಿ ಕೈ ಬಿಸಿಯಾಗಬೇಕು. ಎಲ್ಲದಕ್ಕೂ ಇಂತಿಷ್ಟು ಹಣ ನಿಗಧಿ ಮಾಡಿಕೊಂಡಿದ್ದಾರೆ.

ಪ್ರಸ್ತುತ ಶಿಡ್ಲಘಟ್ಟ ಉಪ ನೋಂದಣಿ ಕಛೇರಿಯಲ್ಲಿ ಸಬ್ ರಿಜಿಸ್ಟರ್ ಹುದ್ದೆ ಖಾಲಿಯಿದ್ದು, ಪ್ರಥಮ ದರ್ಜೆ ಸಹಾಯಕಿ ಟಿ.ಕೆ. ಕಮಲಾಕ್ಷಿ ಅವರು ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಬ್ ರಿಜಿಸ್ಟರ್ ಕಛೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಪ್ರತಿ ದಸ್ತಾವೇಜಿಗೂ ಲಂಚದ ಹಣ ಸಂಗ್ರಹ ಮಾಡುತ್ತಿರುವುದು ಜಗದ್ ಜಾಹೀರಾಗಿದೆ. ಇನ್ನೂ ಕಛೇರಿಯಲ್ಲಿ ಇಬ್ಬರು ಸಿಬ್ಬಂದಿ ಹಳೇ ಇಸಿ, ದಸ್ತಾವೇಜು ನಕಲು ಪತ್ರಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಹಣ ಪಡೆಯುತ್ತಿರುವುದು ಕಂಡುಬಂದಿದೆ.

ಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣವಾಕಬೇಕಿದೆ. ಜೊತೆಗೆ ಸರ್ಕಾರ ಅಥವಾ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ…

” ಪತ್ರಿಕೆಯೊಂದಿಗೆ ಜಿಲ್ಲಾ ನೋಂದಣಾಧಿಕಾರಿಗಳು ಮೊಹಮ್ಮದ್ ಅಲೀ ಮಾತನಾಡಿ ವಿಚಾರ ಗಮನಕ್ಕೆ ತಿಳಿದು ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆಂಬ ಭರವಸೆ ನೀಡಿದ್ದಾರೆ.”

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!