ಅಂಬೇಡ್ಕರ್ ನ್ನು ಸೋಲಿಸಿದ್ದು ಜನ, ಮತದಾರರೇ ಹೊರೆತು ಕಾಂಗ್ರೇಸ್ ಅಲ್ಲ.!
ಶಿಡ್ಲಘಟ್ಟ: ಅಂಬೇಡ್ಕರ್ ಅಂತಹ ಮಹಾನ್ ವ್ಯಕ್ತಿಯನ್ನ ಗುರ್ತಿಸಿ ನೆಹರೂ ಮತ್ತು ಗಾಂಧಿಜೀ ಅವರು ಸಂವಿಧಾನ ಬರೆಯುವಂತಹ ಕೆಲಸ ಕೊಟ್ಟಿದ್ದು ಕಾಂಗ್ರೇಸ್, ಚುನಾವಣೆಯಲ್ಲಿ ಸೋತರೂ ಸಹಾ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು ಕಾಂಗ್ರೇಸ್ ಆದರೆ ಹಿಂದೂ ಕೋಡ್ ಬಿಲ್ ಪಾಸ್ ಆಗಲಿಲ್ಲ. ಮಹಿಳೆಯರಿಗೆ ಸಮಾನ ಹಕ್ಕುಗಳು ಸಿಗಿಲಿಲ್ಲವೆಂದು ಅಂಬೇಡ್ಕರ್ ಅವರು ರಾಜೀನಾಮೆ ನೀಡಿದರು. ಹಿಂದೂ ಕೋಡ್ ಬಿಲ್ ಪಾಸ್ ಗೆ ವಿರೋದ ಮಾಡಿದ್ದೆ ಆರ್.ಎಸ್.ಎಸ್. ಇಂದಿನ ಬಿಜೆಪಿಯವರು ಎಂದು ಕೋಲಾರ ಲೋಕಸಭಾ ಕೇತ್ರದ ಕಾಂಗ್ರೇಸ್ ಅಭ್ಯರ್ಥಿ ಕೆ.ವಿ ಗೌತಮ್ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿರುವ ಮಾಜಿ ಶಾಸಕರಾದ ಹಾಗೂ ಹಾಲಿ ಕೆಪಿಸಿಸಿ ಉಪಾಧ್ಯಕ್ಷ ವಿ. ಮುನಿಯಪ್ಪ ಅವರನ್ನ ಬೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋಲಾರ ಲೋಕಸಭಾ ಕ್ಷೇತ್ರದಿಂದ ಈ ಬಾರಿ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಟಿಕೇಟ್ ನೀಡಿದೆ. ನನಗೆ ವಿರೋಧ ಮಾಡುವ ಯಾವುದೇ ಬಣಗಳು ಇಲ್ಲ. ಕಾಂಗ್ರೇಸ್ ಪಕ್ಷದ ಹಿರಿಯರು ನಾಯಕರು, ಮುಖಂಡರು ಎಲ್ಲರೂ ಒಗ್ಗಟಿನಿಂದ ಕೆಲಸ ಮಾಡುತ್ತಾರೆ. ಪುಟ್ಟು ಆಂಜಿನಪ್ಪ ಅವರು ಕಳೆದ ಚುನಾವಣೆಯಲ್ಲಿ ಸುಮಾರು 55 ಸಾವಿರ ಮತಗಳು ಪಡೆದಿದ್ದರು. ಅವರು ಸಹಾ ನಮ್ಮ ಪಕ್ಷಕ್ಕೆ ಸೇರಿರುವುದರಿಂದ ಅವರೆಲ್ಲಾ ಬೆಂಬಲಿಗರು, ಕಾರ್ಯಕರ್ತರು ನಮಗೆ ಮತ ನೀಡುತ್ತಾರೆ. ಇದರಿಂದ ನಮಗೆ ಮತ್ತಷ್ಟು ಬಲ ಬಂತಾಗಿದೆ. ಕೋಮುವಾದಿ ಬಿಜೆಪಿ ಪಕ್ಷವನ್ನು ಸೋಲಿಸುವುದೇ ಕಾಂಗ್ರೇಸ್ ಗುರಿಯಾಗಿದೆ. ನೀರಾವರಿ ಯೋಜನೆಗಳು, ಉದ್ಯೋಗ ಸೃಷ್ಟಿಯಾಗಬೇಕು. ಅಭಿವೃದ್ದಿಗೆ ಹೆಚ್ಚು ಒತ್ತು ನೀಡುವುದೇ ನಮ್ಮ ಮುಂದೆ ಇರುವ ಅಜೆಂಡಾವಾಗಿದೆ ಗೆಲ್ಲುವ ವಿಶ್ವಾಸವಿದೆ ಎಂದರು.
ಹಿಂದೂ ಕೋಡ್ ಬಿಲ್ ಪಾಸ ಆಗದಿದ್ದಕ್ಕೆ ಅಂಬೇಡ್ಕರ್ ಅವರು ಹೊರಗಡೆ ಬಂದು ಆರ್.ಪಿ.ಐ ಪಕ್ಷದಿಂದ ಚುನಾವಣೆಗೆ ನಿಲ್ಲುತ್ತಾರೆ. ಕಾಂಗ್ರೇಸ್ ಸಹಾ ಅಭ್ಯರ್ಥಿಯನ್ನು ಹಾಕಿತ್ತು ಕಾಂಗ್ರೇಸ್ ಗೆ ಜನಪ್ರಿಯತೆ ಇದ್ದದ್ದರಿಂದ ಕಾಂಗ್ರೇಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರು. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಜನ, ಮತದಾರರೇ ಹೊರತು ಕಾಂಗ್ರೇಸ್ ಅಲ್ಲ. ಅಂಬೇಡ್ಕರ್ ಅವರಿಗೆ ಕೊಡಬೇಕಿದ್ದ ಎಲ್ಲಾ ಗೌರವ ಕಾಂಗ್ರೇಸ್ ಕೊಟ್ಟಿದೆ. ಇಡೀ ವಿಶ್ವಕ್ಕೆ ಪರಿಚಯಿಸಿದ್ದೆ ಕಾಂಗ್ರೇಸ್ ಎಂಬುವುದು ಮರೆಯಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ. ಮುನಿಯಪ್ಪ, ಕಾಂಗ್ರೇಸ್ ಮುಖಂಡರಾದ ಪುಟ್ಟು ಆಂಜಿನಪ್ಪ, ಬೆಳ್ಳೂಟಿ ಸಂತೋಷ್, ಕೆ ಮುತ್ತಕದಹಳ್ಳಿ ಶ್ರೀನಿವಾಸ್ ರಾಮಯ್ಯ, ಗುಡಿಹಳ್ಳಿ ಚಂದ್ರು, ಯಣ್ಣೂರು ಸುಭ್ರಮಣಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ