Monday, December 23, 2024
Homeಜಿಲ್ಲೆಕಾಂಗ್ರೇಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ: ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ.

ಕಾಂಗ್ರೇಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ: ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ.

ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿರುವುದನ್ನ ಖಂಡಿಸಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ.

ಶಿಡ್ಲಘಟ್ಟ : ಕಾಂಗ್ರೇಸ್ ಸರ್ಕಾರದ ಆಡಳಿತದಲ್ಲಿ ಅಲ್ಪಸಂಖ್ಯಾತರನ್ನ ಓಲೈಕೆ ಮಾಡಲಾಗುತ್ತಿದೆಯೆಂದು ಆರೋಪಿಸಿ, ಹಿಂದೂಗಳ ದೇವಸ್ಥಾನ ಜಾಗ, ಮತ್ತು ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನ ಖಂಡಿಸಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಬಸ್ ನಿಲ್ದಾದಿಂದ ಆರಂಭವಾದ ಪ್ರತಿಭಟನೆ ಟಿಬಿ ರಸ್ತೆಯ ಮಾರ್ಗವಾಗಿ ಕೋಟೆ ವೃತ್ತದಿಂದ ತಾಲ್ಲೂಕು ಕಛೇರಿಯವರೆಗೆ ತೆರಳಿ ನೂರಾರು ಬಿಜೆಪಿ ಕಾರ್ಯಕರ್ತರು, ಬಿಜೆಪಿ ಮುಖಂಡರು ಕಾಲ್ನಡಿಗೆಯಲ್ಲಿ ತಾಲ್ಲೂಕು ಕಛೇರಿಯವರೆಗೆ ಮೆರವಣಿಗೆ ಸಾಗಿ ಸರ್ಕಾರದ ವಿರುದ್ದ ಘೋಷಣೆಗಳು ತಾಲ್ಲೂಕು ಕಛೇರಿಗೆ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆಯಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ ರಾಜ್ಯದಲ್ಲಿ ಕಾಂಗ್ರೇಸ್ ಆಡಳಿತ ಸರ್ಕಾರ ಅಲ್ಪಸಂಖ್ಯಾತರನ್ನ ಓಲೈಕೆ ಮಾಡುವುದಕ್ಕಾಗಿ ಹಿಂದೂಗಳ ದೇವಸ್ಥಾನ ಜಾಗ ಮತ್ತು ರೈತರ ಜಮೀನುಗಳ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಿದ್ದು, ಇದನ್ನು ಬಿಜೆಪಿ ತೀಕ್ಷ್ಣವಾಗಿ ಖಂಡಿಸುತ್ತದೆ. ಈ ವಿಚಾರ ಮೋದಿಯವರ ಗಮನಕ್ಕೆ ಹೋಗಿದೆ‌. ಹಿಂದೂಗಳಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ಪಾರ್ಲಿಮೆಂಟ್ ನಲ್ಲಿ ಮೋದಿಯವರು ಹೊಸ ಬಿಲ್ ( ಕಾಯಿದೆ) ಜಾರಿಗೆ ತರುವ ಮೂಲಕ ವಕ್ಫ್ ಬೋರ್ಡ್ ಗೆ ಪಾಠ ಕಲಿಸುತ್ತಾರೆ. ಎಂದರು

ರೈತರ ತಾಳ್ಮೆಯನ್ನ ಪರೀಕ್ಷೆ ಮಾಡಬೇಡಿ ಸಿದ್ದರಾಮಯ್ಯ ಅವರಿಗೆ ಪಂಚೆ ಕಿತ್ತುಹಾಕುತ್ತಾರೆ, ಜಮೀರ್ ಅಹಮದ್ ಗೆ ಚಡ್ಡಿ ಕಿತ್ತುಹಾಕುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಪ ಸಂಖ್ಯಾತರನ್ನು ಓಲೈಕೆ ಮಾಡುವುದಕ್ಕಾಗಿ ಹಿಂದೂಗಳ ದೇವಾಲಯಗಳ ಆಸ್ತಿಯನ್ನು ವಕ್ಫ್ ಬೋರ್ಡ್ ಎಂದು ನಮೂದಿಸಿರುವುದು ದೊಡ್ಡ ಅನ್ಯಾಯವಾಗಿದೆ. ತಾಲ್ಲೂಕಿನಲ್ಲಿ ಎಲ್ಲೆಲ್ಲಿ ವಕ್ಫ್ ಆಸ್ತಿಯಿದೆ ಎಂದು ಮಾಹಿತಿ ನೀಡಬೇಕು ಎಂದು ಅಗ್ರಹಿಸಿದರು. ಸರ್ಕಾರ ಕೂಡಲೇ ರೈತರ ಪಹಣಿಗಳಲ್ಲಿ ನಮೂದಿಸಿರುವ ವಕ್ಫ್ ಬೋರ್ಡ್ ಆಸ್ತಿ ಹೆಸರನ್ನು ತೆರವುಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ತಕ್ಕ ಪಾಠಕಲಿಸುವುದಕ್ಕೆ ನಾವು ಸಿದ್ದರಾಗಿದ್ದೇವೆ ಎಂದು ಗುಡುಗಿದರು.

ರಾಜ್ಯಪಾಲರಿಗೆ ಮನವಿ ಸಲ್ಲಿಕೆ : ವಕ್ಫ್ ಆಸ್ತಿ ವಿವಾದದ ಕುರಿತು ರಾಜ್ಯಪಾಲರಿಗೆ ತಹಶೀಲ್ದಾರ್ ಅವರ ಮುಖಾಂತರ ಮನವಿಯನ್ನ ಸಲ್ಲಿಸಲಾಯಿತು.

ಮನವಿಯನ್ನ ಸ್ವೀಕರಿಸಿದ ತಹಶೀಲ್ದಾರ್ ಬಿ.ಎನ್ ಸ್ವಾಮಿ ಅವರು ಮಾತನಾಡಿ ನಾನು ವಿಧಾನಸಭೆ ಚುನಾವಣೆ ವೇಳೆಯಲ್ಲಿ ಬಂದಿದ್ದೇನೆ ನನ್ನ ಅವಧಿಯಲ್ಲಿ ಯಾವುದೇ ವಕ್ಫ್ ಹೆಸರಿಗೆ ಪಹಣಿ ಆಗಿರುವುದಿಲ್ಲ. ಈ ಹಿಂದೆಯೇ ತಾಲ್ಲೂಕಿನ ಬೆಳ್ಳೂಟಿ ಗ್ರಾಮದ ಸರ್ವೆ ನಂಬರ್ 6 ರ ಸ್ಮಶಾನ ಭೂಮಿ ವಕ್ಫ್ ಹೆಸರಿಗೆ ಪಹಣಿ ಬದಲಾವಣೆ ಆಗಿದೆ ಇದನ್ನು ಹೊರತುಪಡಿಸಿ ನಾವು ಯಾವುದೇ ರೈತರಿಗೆ ನೋಟೀಸ್ ಕೊಟ್ಟಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕಂಬದಹಳ್ಳಿ ಸುರೇಂದ್ರಗೌಡ, ತಾತಹಳ್ಳಿ ಕನಕಪ್ರಸಾದ್, ಡಾ ಸತ್ಯನಾರಾಯಣ ರಾವ್, ನರೇಶ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಶ್ರೀರಾಮ ಸೇರಿದಂತೆ ಬಿಜೆಪಿ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!