ಅನೈತಿಕ ಸಂಬಂಧ ಪತಿಯಿಂದಲೇ ಪತ್ನಿಯ ಹತ್ಯೆ : ಪೊಲೀಸರ ಮುಂದೆ ಶರಣಾದ ಆರೋಪಿ
ಚೇಳೂರು : ಗಂಡ ಹೆಂಡತಿ ಜಗಳ ಉಂಡು ಮಲಗೋವರೆ ಎಂಬ ಮಾತಿದೆ ಅದೇ ರೀತಿ ಅನುಮಾನಂ ಪೆದ್ದ ರೋಗಂ ಎಂದು ಹಿರಿಯರು ಹೇಳಿದ್ದಾರೆ. ತನ್ನ ಹೆಂಡತಿಯ ಮೇಲೆ ಅನುಮಾನ ಪಟ್ಟು ಪಾಪಿ ಪತಿ ತನ್ನ ಹೆಂಡತಿಯನ್ನು ಚಾಕುವಿನಿಂದ ತಿವಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿನ್ನಾಗಾನಪಲ್ಲಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲ್ಲೂಕಿನ ಚಿನ್ನಗಾನಪಲ್ಲಿ ನರಸಮ್ಮ (48 ವರ್ಷ) ಕೊಲೆಯಾದ ಮಹಿಳೆ. ಪತಿ ಗಂಗುಲಪ್ಪ ಈ ಕೃತ್ಯ ಎಸಗಿದ್ದು, ಹೆಂಡತಿಯ ಮೇಲೆ ಅನುಮಾನ ಪಟ್ಟು ಅನೈತಿಕ ಸಂಬಂಧ ಇರುವುದಾಗಿ ಅನುಮಾನಿಸಿ ಗಂಡ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಗಂಗುಲಪ್ಪ ಕುಡಿತದ ಚಟಕ್ಕೆ ಬಿದ್ದಿದ್ದು ಇತ್ತೀಚಿಗೆ ಸುಮಾರು ಆರು ತಿಂಗಳಿಂದ ಹೆಂಡತಿಯು ಅನೈತಿಕ ಸಂಬಂಧದ ಶಂಕೆ ಹೊಂದಿದ್ದ ಎನ್ನಲಾಗಿದೆ. ಪ್ರತಿನಿತ್ಯ ಕುಡಿದು ಹೆಂಡತಿಗೆ ಹಿಂಸೆ ನೀಡುತ್ತಿದ್ದ ಎಂಬುದು ಸ್ಥಳೀಯರ ಹಾಗೂ ಮಗ ಬಾಬು (26 ವರ್ಷ ವಯಸ್ಸು) ಅರೋಪಿಸಿದ್ದಾರೆ.
ಶುಕ್ರವಾರ ರಾತ್ರಿ ಶಿವರಾತ್ರಿಯ ಹಬ್ಬದ ಪ್ರಯುಕ್ತ ಊರಿನ ಬೀದಿಗಳಲ್ಲಿ ಜಾಗರಣೆ ಪ್ರಯುಕ್ತ ಸಣ್ಣಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು, ಇದೆ ವೇಳೆ ಸಂಚು ರೂಪಿಸಿದ ಪತಿ ಗಂಗುಲಪ್ಪ ರಾತ್ರಿ ಸರಿ ಸುಮಾರು 12 ಗಂಟೆಯ ವೇಳೆ ಹಸುಗಳಿಗೆ ಮೇವನ್ನು ತರಲು ಹೆಂಡತಿಯನ್ನು ನಂಬಿಸಿ ಜೊತೆಗೆ ಕರೆದುಕೊಂಡು ಹೋಗಿ ಪಾಪಿ ಪತ್ನಿಯನ್ನೆ ಕೊಲೈದು ನೀಚ ಕೃತ್ಯ ವೆಸಗಿದ್ದಾನೆ. ಎನ್ನಲಾಗಿದೆ.
ಮೃತದೇಹವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ರವಾನೆ ಮಾಡಲಾಗಿದೆ. ಆರೋಪಿ ಗಂಗುಲಪ್ಪ ಸ್ವತಃ ತಾನೇ ಖುದ್ದು ಪಾತಪಾಳ್ಯ ಪೊಲೀಸ್ ಠಾಣೆಗೆ ತೆರಳಿ . ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡು ಪೊಲೀಸರಿಗೆ ಶರಣಾಗಿದ್ದಾನೆ. ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.