Monday, December 23, 2024
Homeಜಿಲ್ಲೆಫವತಿ ಖಾತೆ ಅಂದೋಲನ, ಹಾಗೂ ಪಿಂಚಣಿ ಅದಾಲತ್ ಸದುಪಯೋಗ ಪಡೆದುಕೊಳ್ಳಿ : ಗ್ರೇಡ್-2 ತಹಶೀಲ್ದಾರ್ ಪೂರ್ಣಿಮಾ.

ಫವತಿ ಖಾತೆ ಅಂದೋಲನ, ಹಾಗೂ ಪಿಂಚಣಿ ಅದಾಲತ್ ಸದುಪಯೋಗ ಪಡೆದುಕೊಳ್ಳಿ : ಗ್ರೇಡ್-2 ತಹಶೀಲ್ದಾರ್ ಪೂರ್ಣಿಮಾ.

ತಾಲ್ಲೂಕು ಆಡಳಿತದಿಂದ ಬೋದಗೂರಿನಲ್ಲಿ ಫವತಿ ಖಾತೆ ಅಂದೋಲನ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮ.


ಶಿಡ್ಲಘಟ್ಟ: ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ 15 ನವೆಂಬರ್ 2024 ರಂದು ಬೆಳಗ್ಗೆ 10:30 ರಿಂದ ಫವತಿ ಅಂದೋಲನ ಹಾಗೂ ಸಾಮಾಜಿಕ ಭದ್ರತೆ ಮಾಶಾಸನಗಳ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಸರ್ಕಾರದ ಸುತ್ತೊಲೆ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಆಯೋಜಿಸಿದ್ದು, ರೈತರು, ಸಾರ್ವಜನಿಕರು, ಫವತಿ ಖಾತೆ ವರ್ಗಾವಣೆ, ಪಿಂಚಣಿ ಯೋಜನೆ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಕಾರ್ಯಕ್ರಮವನ್ನು ತಾಲ್ಲೂಕಿನ ರೈತರು, ಸಾರ್ವಜನಿಕರು ಸದುಪಯೋಗಪಡೆದುಕೊಳ್ಳಬೇಕು ಎಂದು ಉಪ ತಹಶೀಲ್ದಾರ್ ಪೂರ್ಣಿಮಾ ತಿಳಿಸಿದರು.

ತಾಲ್ಲೂಕು ಆಡಳಿತ ಸೌಧ ಕಛೇರಿಯ ಸಭಾಂಗಣದಲ್ಲಿ ಮಂಗಳವಾರ ಇಂದು ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ಈ ಹಿಂದೆ ಸ್ಥಗಿತವಾಗಿದ್ದ ಕಾರ್ಯಕ್ರಮ ಮತ್ತೆ ಆರಂಭವಾಗುತ್ತಿದೆ. ಪ್ರತಿ ತಿಂಗಳು ಹದಿನೈದು ದಿನಗಳಿಗೊಮ್ಮೆ ಫವತಿ ಅಂದೋಲನ ಹಾಗೂ ಪಿಂಚಣಿ ಅದಲತ್ ನಡೆಯುತ್ತದೆ. ಮೊದಲಿಗೆ ಬೋದಗೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಆಯೋಜನೆ ಮಾಡಲಾಗಿದೆ. ದಾಖಲೆಗಳೊಂದಿಗೆ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಫೌತಿ ಖಾತೆ ವರ್ಗಾವಣೆ ಹಾಗೂ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಪಿಂಚಣಿ ಫಲಾನುಭವಿಗಳೆ ಖುದ್ದು ಬಂದಲ್ಲಿ ಸ್ಥಳದಲ್ಲೆ ಮಂಜೂರಾತಿ ಆದೇಶ ಪತ್ರವನ್ನು ನೀಡಲು ಕ್ರಮವಹಿಸಲಾಗುವುದು ಎಂದರು.

ಆಧಾರ್ ಲಿಂಕ್ ಆಗದೆ ಇರುವ ಸುಮಾರು 300 ಫಲಾನುಭವಿಗಳ ಪಿಂಚಣಿ ಸ್ಥಗಿತವಾಗಿದೆ. ಪಿಂಚಣಿ ಸೌಲಭ್ಯ ಸಿಗದ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಸೌಲಭ್ಯ ಮಾಡಿಕೊಡಲಾಗುವುದು. ತಾಲ್ಲೂಕಿನಲ್ಲಿ ವಿವಿಧ ಸಾಮಾಜಿಕ ಭದ್ರತಾಯೋಜನೆಯಡಿ ಮಾಶಾಸನ ಪ್ರಸ್ತುತ 44,365 ಫಲಾನುಭವಿಗಳು ಪಿಂಚಣಿ ಸೌಲಭ್ಯ ಪಡೆಯುತ್ತಿದ್ದು, ವೃದ್ದಾಪ್ಯ ವೇತನ 8674, ವಿಧವಾ ವೇತನ 8769 , ಅಂಗವಿಕಲ ವೇತನ 4016, ಸಂಧ್ಯಾ ಸುರಕ್ಷಾ ವೇತನ 21829, ಮನಸ್ವಿನಿ ವೇತನ 1063, ಮೈತ್ರಿ ಯೋಜನೆ ವೇತನ 10, ರೈತರ ಆತ್ಮಹತ್ಯೆ ವೇತನ 04, ರಾಷ್ಟ್ರೀಯ ಕುಟುಂಬ ನೆರವು ಯೋಜನೆ 1071 ಫಲಾನುಭವಿಗಳಿದ್ದಾರೆ. ಪಿಂಚಣಿ ಸ್ಥಗಿತವಾಗಿರುವ ಫಲಾನುಭವಿಗಳು ಆಧಾರ್ ಕಾರ್ಡು, ಬ್ಯಾಂಕ್ ಪಾಸ್ ಪುಸ್ತಕ, ದಾಖಲೆಗಳು ಸಲ್ಲಿಸಿದಲ್ಲಿ ಮಂಜೂರಾತಿ ಪತ್ರವನ್ನು ನೀಡಲಾಗುವುದು ಎಂದು ಹೇಳಿದರು.

ಫವತಿ ಖಾತೆ ಬದಲಾವಣೆಗೆ ಮರಣ ಪ್ರಮಾಣ, ಫಾರಂ 19, ಆಧಾರ್ ಕಾರ್ಡು, ವಂಶವೃಕ್ಷ ಸಲ್ಲಿಸಿದರೆ ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಪ್ರಕರಣಗಳು ಹೊರತುಪಡಿಸಿ , ಖಾತೆ ವರ್ಗಾವಣೆಗೆ ಕ್ರಮ ವಹಿಸಲಾಗುವುದು. ಈಗಾಗಲೇ ಗ್ರಾಮ ಆಡಳಿತಾಧಿಕಾರಿಗಳು, ಹಾಗೂ ಗ್ರಾಮಸಹಾಯಕರ ಮೂಲಕ ಗ್ರಾಮಗಳಲ್ಲಿ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ತಾಲ್ಲೂಕಿನ ಯಾವುದೇ ಗ್ರಾಮದ ರೈತರು, ಫಲಾನುಭವಿಗಳು ಈ ಫವತಿ ಅಂದೋಲನ ಹಾಗೂ ಪಿಂಚಣಿ ಅದಾಲತ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿಂಚಣಿ ಶಿರಸ್ತೆದಾರ್ ಎನ್.ಪಿ ರಾಜು, ಬೋದಗೂರು ಗ್ರಾಮ ಆಡಳಿತಾಧಿಕಾರಿ ಸಿದ್ದಪ್ಪ, ದ್ವಿತೀಯ ದರ್ಜೆ ಸಹಾಯಕ ನಾರಾಯಣಸ್ವಾಮಿ, ಸೇರಿದಂತೆ ಇತರರು.

ವರದಿ: ಕೋಟಹಳ್ಳಿ ಅನಿಲ್ ಕುಮಾರ್ 

Social Media Links
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!