Monday, December 23, 2024
Homeಅಪರಾಧಶಿಡ್ಲಘಟ್ಟದಲ್ಲಿ ಲಾಂಗ್ ಸದ್ದು, ಯುವಕನ ಮೇಲೆ ಹಲ್ಲೆ.! ರೌಡಿ ಆಸಾಮಿ ಆರೋಪಿಗಳ ಬಂಧನ.

ಶಿಡ್ಲಘಟ್ಟದಲ್ಲಿ ಲಾಂಗ್ ಸದ್ದು, ಯುವಕನ ಮೇಲೆ ಹಲ್ಲೆ.! ರೌಡಿ ಆಸಾಮಿ ಆರೋಪಿಗಳ ಬಂಧನ.

 

ಶಿಡ್ಲಘಟ್ಟ: ಯುವಕರ ನಡುವೆ ನಡೆದ ಗಲಾಟೆಯಲ್ಲಿ ಲಾಂಗ್ ಸದ್ದು ಕೇಳಿ ಬಂದಿದೆ. ನಗರದ ಕದಿರಿಪಾಳ್ಯ ನಿವಾಸಿ ಮುರಳಿ ಎಂಬ ವ್ಯಕ್ತಿಗೆ ಹಲ್ಲೆ ಮಾಡಿ ದೌರ್ಜನ್ಯ ಮಾಡಿದ್ದಲ್ಲದೆ ಲಾಂಗ್ ನಿಂದ ಹೊಡೆಯಲು ಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಕೆಲವೇ ನಿಮಿಷಗಳಲ್ಲಿ ಆರೋಪಿಗಳನ್ನ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ಟೋಬರ್ 06 ರಂದು ರಾತ್ರಿ 9:30 ರ ಸಮಯದಲ್ಲಿ ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಸುನಿಲ್, ಶಾಮ, ಶ್ರೀಧರ ಎಂಬುವವರು ನನ್ನನ್ನು ಕುರಿತು ಏಕಾಏಕಿ “ಏ ಗಾಂಡು ನನ್ನ ಮಗನೆ” ಬಾರೋ ಇಲ್ಲಿ, ಎಂದು ಕರೆದಿದ್ದು, ಆಗ ನಾನು ಅವರನ್ನು ಕುರಿತು ಯಾಕೇ ಈ ರೀತಿ ನನ್ನನ್ನು ಕರೆಯುತ್ತೀಯಾ ಸ್ವಲ್ಪ ಮರ್ಯಾದೆ ಕೊಟ್ಟು ಮಾತನಾಡಿಸು ಎಂದು ಹೇಳಿದ್ದಕ್ಕೆ ಮೂರು ಜನರು ಸೇರಿ ನನ್ನ ಮೇಲೆ ಗಲಾಟೆ ಮಾಡಿ ನನ್ನನ್ನು ಕೈಗಳಿಂದ ಮೈಮೇಲೆ ಹೊಡೆದು ಕಾಲಿನಿಂದ ಒದ್ದು ಮೂಗೇಟು ಉಂಟು ಮಾಡಿದ್ದು, ಆಗ ನಾನು ಅವರನ್ನು ಕುರಿತು ಯಾಕೇ ಈ ರೀತಿ ನನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಾ ಎಂದು ಕೇಳಿದ್ದಕ್ಕೆ ಸುನಿಲ್ ನಾನು ಈ ಏರಿಯಾದ ರೌಡಿ ನೀನು ನನಗೆ ಮರ್ಯಾದೆ ಕೊಡುವುದಿಲ್ಲ ಎಂದು ಹೇಳಿ ನನ್ನನ್ನು ಸಾಯಿಸುವ ಉದ್ದೇಶದಿಂದ ಅವನ ಬಳಿ ಇದ್ದ ಒಂದು ಲಾಂಗಿನಿಂದ ಹೊಡೆಯಲು ಬಂದಿದ್ದು, ಆಗ ನಾನು ಅವನಿಂದ ತಪ್ಪಿಸಿಕೊಂಡಿದ್ದು. ಆಗ ಸುನಿಲ್ ಈ ನನ್ನ ಮಗನದ್ದು ಜಾಸ್ತಿ ಆಗಿದೆ ಇವನನ್ನು ಸಾಯಿಸಿ ಬಿಡೋಣವೆಂದು ಬೆದರಿಕೆ ಹಾಕಿರುತ್ತಾನೆ. ನಂತರ ಉಳಿದ ಶಾಮ ಮತ್ತು ಶ್ರೀಧರ ರವರು ನನ್ನನ್ನು ಕೈಗಳಿಂದ ತಲೆಗೆ ಭುಜಕ್ಕೆ ಮತ್ತು ಬೆನ್ನಿನ ಮೇಲೆ ಹೊಡೆದಿರುತ್ತಾರೆ. ಆಗ ನಾನು ಕೆಳಗೆ ಬಿದ್ದು ಹೋದಾಗ ನನ್ನ ಮೊಣಕಾಲಿಗೆ ಮತ್ತು ಕೈಗಳಿಗೆ ತರಚಿದ ಗಾಯ ಉಂಟಾಗಿರುತ್ತದೆ. ಮೇಲ್ಕಂಡವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಹಲ್ಲೆಗೊಳಗಾದ ಗಾಯಾಳು ಕದಿರಿಪಾಳ್ಯ‌ ನಿವಾಸಿ ಮುರಳಿ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರಕರಣವನ್ನ ದಾಖಲಿಸಿಕೊಂಡು ನಗರ ಠಾಣೆ ಪಿಎಸ್. ವೇಣುಗೋಪಾಲ್ ಅವರು ಮತ್ತು ಸಿಬ್ಬಂದಿ ಆರೋಪಿಗಳನ್ನ ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಕರಣದ ಆರೋಪಿಗಳಾದ ಎ1- ಸುನಿಲ್ @ ಡ್ಯಾಡಿ ಬಿನ್ ಚಿನ್ನಪ್ಪ, 33 ವರ್ಷ, ಬಲಜಿಗರು, ರೇಷ್ಮೆ ಕೆಲಸ, ವಾಸ ಗಾಂಧೀ ನಗರ ಟೌನ್, ಮತ್ತು ಆತನ ತಮ್ಮನಾದ ಎ2- ಶಾಮಂತಕುಮಾರ ಬಿನ್ ಚಿನ್ನಪ್ಪ 32 ವರ್ಷ, ಬಲಜಿಗರು, ಸೆಂಟ್ರಿಂಗ್ ಕೆಲಸ. ವಾಸ ಗಾಂಧೀ ನಗರ, ಟೌನ್ ಮತ್ತು ಸಹಚರರಾದ ಎ3- ಶ್ರೀಧರ ಬಿನ್ ಆನಂದ, 39 ವರ್ಷ, ರೇಷ್ಮೆ ಕೆಲಸ ವಾಸ : ಗಾಂಧೀ ನಗರ, ಶಿಡ್ಲಘಟ್ಟ ಟೌನ್ ಇವರುಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ಘನ ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆದೆಂದು ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀ, ಕುಶಾಲ್ ಚೌಕ್ಸೆ, ಐ.ಪಿ.ಎಸ್ ರವರ ಸಾರಥ್ಯದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ರಾಜ ಇಮಾಮ್ ಸಾಬ್ ಖಾಸೀಂ ಸಿ, ಚಿಂತಾಮಣಿ ಉಪವಿಭಾಗದ ಡಿವೈ.ಎಸ್.ಪಿ ಶ್ರೀ.ಮುರಳೀಧರ ಹಾಗೂ ಶಿಡ್ಲಘಟ್ಟ ವೃತ್ತದ ಸಿಪಿಐ ಶ್ರೀನಿವಾಸ,ಎಂ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಿಡ್ಲಘಟ್ಟ ಟೌನ್ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ. ವೇಣುಗೋಪಾಲ ಎಂ, ಪಿಎಸ್.ಐ ಪದ್ಮಾವತಮ್ಮ ಮತ್ತು ಸಿಬ್ಬಂದಿಯಾದ ಶ್ರೀ.ವೆಂಕಟರವಣಪ್ಪ ಎ,ಎಸ್,ಐ, ದೇವರಾಜ ಹೆಚ್.ಸಿ 236, ಶ್ರೀ ವಿನೋಧ ಪಿಸಿ – 273, ಶ್ರೀ ಸುನಿಲ್ ಪಿ.ಸಿ – 178, ಶ್ರೀ.ಧರಣೇಶ ಪಿ.ಸಿ – 556, ಶ್ರೀ.ಸಲೀಂ ಪಿಸಿ 292 ಶ್ರೀ ಕಿರಣ್ ಕಲ್ಮಡಿ ಪಿ.ಸಿ – 358 ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರನ್ನು ಶ್ಲಾಘಿಸಿದ್ದಾರೆ.

Social Media Links
RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

error: Content is protected !!