ಶಿಡ್ಲಘಟ್ಟ : ಚಿಂತಾಮಣಿ – ತಳಗವಾರ ಮಾರ್ಗದ 66 ಕೆವಿ ಉನ್ನತೀಕರಣದ ಕಾಮಗಾರಿ ಬೆಸ್ಕಾಂ ಕೈಗೆತ್ತಿಕೊಂಡಿರುವ ನಿಟ್ಟಿನಲ್ಲಿ ತಾಲ್ಲೂಕಿನಲ್ಲಿ ಎರಡು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಪ್ರಭು.ಬಿ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಮಾಹಿತಿ ನೀಡಿದ್ದಾರೆ.
ತಾರೀಖು 06.06.2024 ರಿಂದ 07.06.2024 ರ ವರೆಗೆ 66ಕೆವಿ ಚಿಂತಾಮಣಿ ತಳಗವಾರ ಮಾರ್ಗದ ಉನ್ನತೀಕರಣದ ಕಾಮಗಾರಿ ನಡೆಯುವುದರಿಂದ 66/11 ಕೆವಿ ಚೀಮಂಗಲ, ವೈ ಹುಣಸೇನಹಳ್ಳಿ ವಿದ್ಯುತ್ ಉಪಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಹೆಚ್.ಕ್ರಾಸ್, ಅತ್ತಿಗಾನಹಳ್ಳಿ, ಬಸವಾಪಟ್ಟಣ, ಕನ್ನಮಂಗಲ, ಚಿಕ್ಕದಾಸರಹಳ್ಳಿ, ಚೀಮಂಗಲ, ಚಿಂತಡಪಿ, ಕಾಳನಾಯಕನಹಳ್ಳಿ, ಕರಿಯನಪುರ, ವೈ ಹುಣಸೇನಹಳ್ಳಿ, ಸೀಗೆಹಳ್ಳಿ, ಕುಂದಲಗುರ್ಕಿ, ದೇವರಮಳ್ಳೂರು, ಗೊರಮಡಗು, ಪಿಂಡಿಪಾಪನಹಳ್ಳಿ, ಕಂಗಾನಹಳ್ಳಿ, ಗೊಲ್ಲಹಳ್ಳಿ, ಕೊತ್ತನೂರು, ಕಡಿಶೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ತಾರೀಖು 06.06.2024 ರಿಂದ 07.06.2024 ರ ವರೆಗೆ ಬೆಳಗ್ಗೆ 10.00 ರಿಂದ ಸಂಜೆ 5.00 ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಪತ್ರಿಕಾ ಪ್ರಕಣೆಯ ಮೂಲಕ ಕೋರಿದ್ದಾರೆ.