ಶಿಡ್ಲಘಟ್ಟ : ರಾಜ್ಯದ ರಾಜಧಾನಿ ಬೆಂಗಳೂರು ನಿರ್ಮಾತೃ ಒಕ್ಕಲಿಗರ ದೊರೆ ನಾಡಪ್ರಭು ಕೆಂಪೇಗೌಡರ 516 ನೇ ಜಯಂತಿ ಆಚರಣೆಗೆ ನಾಡಿನ ಎಲ್ಲಡೆ ಸಕಲ ಸಿದ್ದತೆಗಳು ನಡೆಯುತ್ತಿವೆ. ಜೂನ್ 27 ರಂದು ಆಚರಿಸುವ ಕೆಂಪೇಗೌಡರ ಜಯಂತಿಗೆ ಕ್ಷಣಗಣನೆಗೆ ಆರಂಭವಾಗಿದೆ. ತಾಲ್ಲೂಕಿನ ಒಕ್ಕಲಿಗ ಸಮುದಾಯದ ನಾಯಕರು, ಮುಖಂಡರು, ಕುಲಬಾಂದವರು, ಒಮ್ಮತದಿಂದ ಈ ಬಾರಿ ಸರಳ ಆಚರಣೆಗೆ ನಿರ್ಧರಿಸಿದ್ದು, ಸರಳ ಆಚರಣೆಯಾದರೂ ಅರ್ಥಪೂರ್ಣವಾಗಿ ಕೆಂಪೇಗೌಡರ ಜನ್ಮ ದಿನ ಆಚರಿಸಲು ಸಜ್ಜಾಗಿ ಮಾದರಿಯಾಗಿದ್ದಾರೆ.
ನಾಳೆ ಗುರುವಾರ ಬೆಳಗ್ಗೆ 9:30 ಕ್ಕೆ ಶಿಡ್ಲಘಟ್ಟ ನಗರ ಚಿಂತಾಮಣಿ – ಶಿಡ್ಲಘಟ್ಟ ರಸ್ತೆ ಮಾರ್ಗದಲ್ಲಿರುವ ಕೆಂಪೇಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ಸಮಯ 10:00 ಕ್ಕೆ ಇದ್ಲೂಡು ರಸ್ತೆ ಪಟ್ರಹಳ್ಳಿ ಬೈಲಾಂಜನೇಯ ಸ್ವಾಮಿ ದೇವಾಲಯದ ಬಳಿ ಸುಮಾರು 2-00 ಎಕರೆ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಾದ ನಂತರ ಸಮಯ ಬೆಳಗ್ಗೆ 11:00 ಕ್ಕೆ ತಾಲ್ಲೂಕು ಆಡಳಿತ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ತಾಲ್ಲೂಕಿನ ಒಕ್ಕಲಿಗ ಸಮುದಾಯದ ಕುಲಬಾಂದವರು , ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಾರ್ವಜನಿಕರು, ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಾಲ್ಲೂಕು ಕೆಂಪೇಗೌಡರ ಆಚರಣಾ ಸಮಿತಿ ವತಿಯಿಂದ ಹಾಗೂ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ಬಿ. ನಾರಾಯಣಸ್ವಾಮಿ ಅವರು ಮಾಹಿತಿ ವಿನಿಮಯ ಮಾಡುವ ಮೂಲಕ ಸರ್ವರಿಗೂ ಸ್ವಾಗತ ಕೋರಿದ್ದಾರೆ.
ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ