ಕ.ಸಾ.ಪ.ನೂತನ ತಾಲ್ಲೂಕು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿಗೆ ಶಾಸಕರಿಂದ ಅಭಿನಂದನೆ.
ಶಿಡ್ಲಘಟ್ಟ : ಕನ್ನಡ ನಾಡು ನುಡಿ ಭಾಷೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು. ಕನ್ನಡ ಉಳಿಸಿ ಬೆಳೆಸುವ ಜವಬ್ದಾರಿ ನಾವೆಲ್ಲರೂ ತೆಗೆದುಕೊಳ್ಳಬೇಕು. ಅತ್ಯತ್ತಮ ಕನ್ನಡ ಭಾಷೆಗೆ ನನ್ನ ಅವಧಿಯಲ್ಲಿ ಹೆಚ್ಚು ಒತ್ತು ನೀಡುವ ಕೆಲಸ ಮಾಡುತ್ತೇನೆ. ಕನ್ನಡದ ಭವನಕ್ಕಾಗಿ ಜಾಗ ಮಂಜೂರಾಗಿ ಭವನ ನಿರ್ಮಾಣವಾಗುವವರೆಗೂ ತಾತ್ಕಾಲಿಕವಾಗಿ ಕನ್ನಡದ ಚಟುವಟಿಕೆಗಳಿಗೆ ಕ.ಸಾ.ಪ ಬೇಡಿಕೆಯಂತೆ ಒಂದು ಕೊಠಡಿಯನ್ನ ಕೊಡಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಬಿ.ಎನ್ ರವಿಕುಮಾರ್ ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ನೂತನ ಅಧ್ಯಕ್ಷರಾದ ಪಟೇಲ್ ನಾರಾಯಣಸ್ವಾಮಿ ಮತ್ತು ಅವರ ತಂಡ ಇಂದು ತಾಲ್ಲೂಕಿನ ಮೇಲೂರು ಗ್ರಾಮದ ಕ್ಷೇತ್ರದ ಶಾಸಕರ ಸ್ವಗೃಹ ಕಛೇರಿಯಲ್ಲಿ ಬೇಟಿ ಮಾಡಿದ ಸಂದರ್ಭದಲ್ಲಿ ನೂತನ ಅಧ್ಯಕ್ಷರಿಗೆ ಶಾಸಕರು ಸಿಹಿ ತಿನಿಸಿ ಸನ್ಮಾನಿಸುವ ಮೂಲಕ ಅಭಿನಂಧಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಬೇಡಿಕೆಯಂತೆ ಕನ್ನಡ ಭವನಕ್ಕೆ ಜಾಗ ಕೊಡುವ ಕೆಲಸ ಮಾಡಲಾಗುವುದು ಅಲ್ಲಿಯವರೆಗೆ ತಾತ್ಕಾಲಿಕವಾಗಿ ಕನ್ನಡ ಕೆಲಸ ಕಾರ್ಯಗಳಿಗೆ ಒಂದು ಕೊಠಡಿಯನ್ನ ಕೊಡಿಸುವ ಭರವಸೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೆಚ್ಚು ಕನ್ನಡದ ಕಾರ್ಯಕ್ರಮಗಳು ಹೆಚ್ಚು ನಡೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ನೂತನ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ಸೇರಿದಂತೆ ಪದಾಧಿಕಾರಿಗಳಿಂದ ಶಾಸಕ ಬಿ.ಎನ್ ರವಿಕುಮಾರ್ ಅವರಿಗೆ ಗೌರವ ಪೂರ್ವಕವಾಗಿ ಶಾಲು ಹೊದಿಸಿ ಹಾರ ಹಾಕಿ ಸಿಹಿಯನ್ನು ತಿನಿಸುವ ಮೂಲಕ ಆತ್ಮೀಯವಾಗಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ಜೆಡಿಎಸ್ ಮುಖಂಡ ಹಾಗೂ ಶಾಸಕರ ಆಪ್ತರಾದ ತಾದೂರು ರಘು, ನಗರಸಭೆ ಸದಸ್ಯ ರಾಘವೇಂದ್ರ, ಗುತ್ತಿಗೆದಾರ ಮಂಜುನಾಥ್, ಕಸಾಪ ಜಿಲ್ಲಾ ಜಂಟಿ ಕಾರ್ಯದರ್ಶಿ ಟಿ.ವಿ ಚಂದ್ರಶೇಖರ್, ಪದಾಧಿಕಾರಿ ಮುನಿನಾರಾಯಣಪ್ಪ, ಸಮಾಜ ಸೇವಕ ಹುಜುಗೂರು ಬಚ್ಚೇಗೌಡ, ಕಸಾಪ ಮಾಜಿ ತಾಲ್ಲೂಕು ಅಧ್ಯಕ್ಷ ಕೃನಾ ಶ್ರೀನಿವಾಸ್, , ಕಸಾಪ ಮಾಜಿ ಕಾರ್ಯದರ್ಶಿ ಡಿ.ಎಸ್ ಸತ್ಯನಾರಾಯಣರಾವ್, ಟಿ.ಟಿ ನರಸಿಂಹಪ್ಪ, ಅಂಬಾರಿ ಮಂಜುನಾಥ್, ಶಿಕ್ಷಕ ತಿರುಮಲೇಶ್, ಅಶೋಕ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಕೋಟಹಳ್ಳಿ ಅನಿಲ್ ಕುಮಾರ್ ಕೆ.ಎ