ಅಪರಾಧ ಚಟುವಟಿಕೆಗಳು, ತಪ್ಪು ಮಾಡಿದರೆ ಯಾರೇ ಆಗಲೀ ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.!
ಶಿಡ್ಲಘಟ್ಟ : ಜುಲೈ 1 ರಿಂದ ಮೂರು ಅಪರಾಧ ಹೊಸ ಕಾನೂನುಗಳು ಜಾರಿಗೆ ಬರಲಿವೆ. ಅಪರಾಧ ಪ್ರಕರಣಗಳು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಹೊಸ ಕಾನೂನುಗಳ ಕುರಿತು ಕಾನೂನು ತಜ್ಞರು ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಾಗರೀಕರಿಗೆ ಭಾರತೀಯ ನ್ಯಾಯ ಸಂಹಿತೆ ಕಾನೂನುಗಳು ಅರಿವು ಮೂಡಿಸಬೇಕು ಎಂದು ವಕೀಲರಾದ ಹೆಚ್.ಎನ್ ಕೃಷ್ಣಮೂರ್ತಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೊಸ ಕಾನೂಗಳ ಬಗ್ಗೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಕೆಳಹಂತದ ಅಧಿಕಾರಿಗಳಿಗೆ ಹೆಚ್ಚು ಹೆಚ್ಚು ತರಬೇತಿ ಕಾರ್ಯಗಾರಗಳ ಮೂಲಕ ಕಾನೂನು ತರಬೇತಿ ನೀಡಬೇಕು. ಬ್ರಿಟಿಷ್ ಕಾಲದ ಇಂಡಿಯನ್ ಪೀನಲ್ ಕೋಡ್ ಬದಲಾಗಿ ಭಾರತೀಯ ನ್ಯಾಯ ಸಂಹಿತೆ ಹೊಸ ಕಾನೂನುಗಳು ಜಾರಿಗೆ ಬರಲಿವೆ ಎಂದರು.
ಉದಾಹರಣೆಗೆ ಹಿಂದೆ ಅಪಘಾತ ಪ್ರಕರಣ 304A ಅಡಿಯಲ್ಲಿ ಪ್ರಕರಣ ದಾಖಲಾದರೆ ಜಾಮೀನು ಸಿಗುತ್ತಿತ್ತು ಜೊತೆಗೆ ಶಿಕ್ಷೆಯ ಪ್ರಮಾಣ ಎರಡು ವರ್ಷಗಳ ವಿಧಿಸಬಹುದಾಗಿತ್ತು. ಪ್ರಸ್ತುತ ಈಗ ಜಾಮೀನು ರಹಿತ ಅಪರಾಧವಾಗುತ್ತದೆ. ಶಿಕ್ಷೆಯ ಪ್ರಮಾಣ 10 ವರ್ಷಕ್ಕೆ ಹೆಚ್ಚಿಸಲಾಗಿದೆ. ಇನ್ನು ಆನ್ ಲೈನ್ ಮೂಲಕವೇ ದೂರು ದಾಖಲಿಸಲು ಅವಕಾಶವಿದೆ. ಜೊತೆಗೆ ಆನ್ ಲೈನ್ ಮಾದ್ಯಮದ ಮೂಲಕವೇ ಸಮನ್ಸ್ ಜಾರಿಯಾಗಲಿದೆ.
ಭಾರತೀಯ ನ್ಯಾಯ ಸಂಹಿತೆ – 2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ – 2023 , ಭಾರತೀಯ ಸಾಕ್ಷ್ಯ ಅಧಿನಿಯಮ -2023 ಮೂರು ಹೊಸ ಕಾಯ್ದೆಗಳು ಜಾರಿಗೆ ಬರಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸೈಬರ್ ಪ್ರಕರಣಗಳು ನಡೆಯುತ್ತಿದ್ದು ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದೆ. ಸಾಮಾಜಿಕ ಜಾಲತಾಣದಲ್ಲಿ ಹಾಕುವ ಕಾನೂನು ಬಾಹಿರ ಅಪರಾಧ ಚಟುವಟಿಕೆಗಳು ಮಾಡಿದರೆ, ಸೈಬರ್ ಕ್ರೈಂ ಆರೋಪದಡಿ ಅಪರಾಧವಾಗುತ್ತದೆ. ಹೆಚ್ಚಿನ ಪ್ರಮಾಣದ ಶಿಕ್ಷೆಗೆ ಗುರಿಯಾಗಲಿದ್ದಾರೆ. ಸಾಮಾಜಿಕ ಜಾಲತಾಣಗಳ ನಡೆಯುವ ಆನ್ ಲೈನ್ ವಂಚನೆಗಳ ಕುರಿತು ಸಹಾ ಜನರಿಗೆ ಅರಿವು ಮೂಡೊಸಬೇಕಾಗುತ್ತದೆ. ಕಠಿಣವಾದ ಕಾನೂನುಗಳು ಜಾರಿಗೆ ಬಂದಿರುವುದರಿಂದ ಈ ಕುರಿತು ಗ್ರಾಮೀಣ ಭಾಗದ ಜನರಿಗೆ ಮಾಹಿತಿ ಇರುವುದಿಲ್ಲ. ಕಾನೂನಿನ ಅರಿವು ಇಲ್ಲದೆ ಮಾಡುವ ಅಪರಾಧಗಳಿಗೆ ಬದುಕುಗಳು ಸಂಕಷ್ಟದಲ್ಲಿ ಸಿಲುಕುತ್ತದೆ. ಜೊತೆಗೆ ಸಮಾಜದಲ್ಲಿ ಅಪರಾಧ ಪ್ರಕರಣಗಳು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಕಾನೂನು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಸಬೇಕು. ಪತ್ರಿಕೆ ಮುದ್ರಣ ಮಾದ್ಯಮ, ದೃಶ್ಯ ಮಾದ್ಯಮ, ಸಾಮಾಜಿಕ ಜಾಲತಾಣಗಳು ಸೇರಿದಂತೆ ಸಾರ್ವಜನಿಕರ ಸಂಪರ್ಕ ಸಭೆಗಳು ಪೊಲೀಸ್ ಇಲಾಖೆಯಿಂದ ಅರಿವು ಮೂಡಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಎಲ್ಲರೂ ಸಾಧ್ಯವಾದರೆ ಸಮಾಜ ಮುಖಿ ಉತ್ತಮ ಕೆಲಸಗಳು ಮಾಡಬೇಕು. ಅಪರಾಧ ಚಟುವಟಿಕೆಗಳು ತಪ್ಪು ಮಾಡಿದರೆ ಯಾರೇ ಆಗಲೀ ಕಾನೂನಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಕಾನೂನುಗಳು ಮಾರ್ಪಾಡು ಆಗಿವೆ ನಾಗರೀಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಚೌಕಟ್ಟಿನಲ್ಲೆ ಬದುಕಬೇಕು ಹಾಗಾಗಿ ಕಾನೂನಿನ ಬಗ್ಗೆ ಅರವಿ ಇರಬೇಕು ಎಂದು ಕಿವಿ ಮಾತು ಹೇಳಿದ್ದಾರೆ.
ವರದಿ: ಕೋಟಹಳ್ಳಿ ಅನಿಲ್ ಕುಮಾರ್ ಕೆ .ಎ