ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅವರನ್ನು ನಟಿ ರಕ್ಷಿತಾ ದಂಪತಿ ಜೈಲಿನಲ್ಲಿ ಶನಿವಾರ ಭೇಟಿ ಮಾಡಿದರು. ಇಂತಹ ಪ್ರಕರಣ ನಡೆಯಬಾರದಿತ್ತು ಎಂದು ರಕ್ಷಿತಾ ದಂಪತಿ ಬೇಸರ ಹೊರಹಾಕಿದರು.
ದರ್ಶನ್ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಕ್ಷಿತಾ, ಈ ಪ್ರಕರಣ ನಡೆದಿರುವುದು ಅತ್ಯಂತ ದುರದೃಷ್ಟಕರ. ಈ ಪ್ರಕರಣದ ಬಗ್ಗೆ ಬೇಜಾರಾಗಿದೆ ಎಂದರು.
ನಟ, ನಿರ್ದೇಶಕ ಪ್ರೇಮ್ ಮಾತನಾಡಿ, ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಈ ಸಂದರ್ಭದಲ್ಲಿ ಪ್ರಕರಣದ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ ಎಂದರು. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಜೈಲಿನಲ್ಲಿ ದರ್ಶನ್ ಜತೆ ನಡೆದ ಮಾತುಕತೆ ವಿವರ ನೀಡಲು ನಿರಾಕರಿಸಿದರು. ಪವಿತ್ರಾಗೌಡ ವಕೀಲ ನಾರಾಯಣಸ್ವಾಮಿ ಮಾತನಾಡಿ, ಜಾಮೀನು ಅರ್ಜಿ ಯಾವಾಗ ಸಲ್ಲಿಸಬೇಕೆಂಬ ಬಗ್ಗೆ ಕಾಯುತ್ತಿದ್ದೇವೆ. ಅದರ ಬಗ್ಗೆಯೇ ಚರ್ಚೆ ನಡೆಸಲು ಭೇಟಿ ಮಾಡಿದ್ದೆ. ಅವರಿಗೆ ಪ್ರಕರಣದ ಬಗ್ಗೆ ಏನೂ ತಿಳಿದಿಲ್ಲ ಎಂದರು. ಪವಿತ್ರಾ ಗೌಡ ಯಾವಾಗಲೂ ತಪ್ಪು ಮಾಡಿರಲಿಲ್ಲ, ಈ ರೀತಿಯಾದಾಗ ನೋವಾಗುತ್ತೆ. ತಪ್ಪು ಮಾಡಿರುವವರಿಗಾದರೆ ಅದರ ಅರಿವಿರುತ್ತದೆ. ನಾನು
ಏನೂ ಮಾಡಿಲ್ಲ, ನನಗೆ ಯಾಕೆ ಇಂತ ಪರಿಸ್ಥಿತಿ ಎಂದು ಶಾಕ್‌ನಲ್ಲಿದ್ದಾರೆ. ಜುಲೈ 4ರ ಬಳಿಕ ಜಾಮೀನು ಅರ್ಜಿ ಬಗ್ಗೆ ಯೋಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.