ಚೇಳೂರು : ಮಂಗಳವಾರ ಮದ್ಯಾಹ್ನ ಸಮಯದಲ್ಲಿ ಕುರಿಗಾಹಿಗಳಿಗೆ ಮೃತದೇಹ ತೇಲುತ್ತಿರುವುದು ಕಂಡು ಬಂದಿದ್ದು . ಆ ಬಳಿಕ ಊರಿರವರು ಸ್ಥಳಕ್ಕೆ ಆಗಮಿಸಿದ್ದು,ಮೃತರ ಗುರುತು ಪತ್ತೆ ಮಾಡಲಾಯಿತು.
ಮೃತರನ್ನು ಚೇಳೂರು ಖಾಸಗಿ ಆರ್ ಎಂ ಪಿ ವೈದ್ಯರಾದ ಶ್ರೀನಿವಾಸ ಎಂಬುವರ ತಾಯಿ ಸುಬ್ಬಮ್ಮ (53) ಎಂದು ಗುರುತಿಸಲಾಗಿದೆ. ಸಾವಿಗೆ ಕಾರಣ ಮೃತ ಸುಬ್ಬಮ್ಮ ರವರಿಗೆ ಸುಮಾರು ಮೂರು ತಿಂಗಳಿಂದ ಮೈ ಕೈ ತುರಿಕೆ ಜಾಸ್ತಿ ಇದ್ದು ಇದರಿಂದ ಆವಾಗಾವಾಗ ರಾತ್ರಿ ವೇಳೆ ಎದ್ದು ಮೈ ಕೈ ತುರಿಕೆಯ ಕಾಟಕ್ಕೆ ತಾಳಲಾರದೆ ಆಳುತ್ತಿದ್ದರು. ಮಂಗಳವಾರ ಎಂದಿನಂತೆ ಮಗ ಶ್ರೀನಿವಾಸ್ ಹಾಗೂ ಸೊಸೆ ಖಾಸಗಿ ಕ್ಲಿನಿಕ್ ನಡೆಸುತ್ತಿದ್ದು ಬೆಳಗ್ಗೆ ಆಸ್ಪತ್ರೆಗೆ ಹೊರಟಿರುತ್ತಾರೆ.
ಇದೆ ವೇಳೆ ತಾಯಿ ಸಬ್ಬಮ್ಮ ರವರಿಗೆ ಮೈ ಕೈ ತುರಿಕೆಯಿಂದ ಜೀವನದ ಮೇಲೆ ಜಿಗುಪ್ಸೆಗೊಂಡು ಶೇರ್ ಖಾನ್ ಕೋಟೆ ಗ್ರಾಮದಿಂದ ಪೆಮ್ಮಯ್ಯಗಾರಿಪಲ್ಲಿ ಗ್ರಾಮಕ್ಕೆ ತೆರಳುವ ದಾರಿ ಮದ್ಯದಲ್ಲಿ ಇರುವ ಮಣ್ಣಿನ ಬಾವಿಗೆ ಬಿದ್ದು ಮೃತ ಪಟ್ಟಿರುತ್ತಾರೆ ಎಂದು ಮಗ ಶ್ರೀನಿವಾಸ್ ತಿಳಿಸಿರುತ್ತಾರೆ.
ಈ ಕುರಿತು ಚೇಳೂರು ಪೊಲೀಸರು ಸ್ಥಳಕ್ಕೆ ಬಂದು ತನಿಖೆ ನಡೆಸಿ.ಮೃತರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಎಂದು ಕಳುಹಿಸುತ್ತಾರೆ.ಈ ಕುರಿತು ಚೇಳೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.