ಬಿಜೆಪಿ ನಾಯಕರಿಗೆ ಶಾಲಾ ಮಕ್ಕಳ ಕೈಯಲ್ಲಿ ಸ್ವಾಗತ ಮಾಡಿದ್ದಾರೆಂದು ಪ್ರತಿಭಟನೆಗೆ ಮುಂದಾದ ಕಾಂಗ್ರೇಸ್ ಮುಖಂಡ : ಕುಂದಲಗುರ್ಕಿ ಮುನೀಂದ್ರ.
ಶಿಡ್ಲಘಟ್ಟ : ಸರ್ಕಾರಿ ಶಾಲೆಗೆ ಬಿಜೆಪಿ ನಾಯಕರು ಮತಯಾಚನೆ ಮಾಡಲು ಬಂದಂತಹ ಸಂದರ್ಭದಲ್ಲಿ ಮಕ್ಕಳ ಕೈಯಲ್ಲಿ ಸ್ವಾಗತ ಮಾಡಿ ಬರಮಾಡಿಕೊಂಡಿದ್ದಾರೆಂದು ಆರೋಪಿಸಿ ಕಾಂಗ್ರೇಸ್ ಮುಖಂಡ ಕುಂದಲಗುರ್ಕಿ ಮುನೀಂದ್ರ ಪ್ರತಿಭಟನೆ ಮುಂದಾದ ಘಟನೆ ಜರುಗಿತು. ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರ ನಡುವೆ ಮಾತಿನ ಚಕಮಕಿ ನಡೆದು ಹೈ ಡ್ರಾಮವೇ ನಡೆಯಿತು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಬಳಿ ಕುಂದಲಗುರ್ಕಿಮುನೀಂದ್ರ ಮತ್ತು ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರ ನಡುವೆ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಅವರ ಸಮ್ಮುಖದಲ್ಲೆ ಮಕ್ಕಳ ಕೈಯಲ್ಲಿ ರಾಜಕೀಯ ನಾಯಕರಿಗೆ ಯಾಕೆ ಸ್ವಾಗತ ಮಾಡಬೇಕು ತಮಗೆ ಜವಬ್ದಾರಿಯಿಲ್ಲವೇ? ತಮ್ಮ ಶಾಲೆಯಲ್ಲಿ ದೈಹಿಕ ಶಿಕ್ಷಕರಿಲ್ಲವೇ? ರಾಜಕೀಯ ನಾಯಕರಿಗೆ ಸ್ವಾಗತ ಕೋರಿರುವುದು ಸರಿಯಿದೆಯಾ? ಎಂದು ಹೀಗೆ ಕೆಲಕಾಲ ಮಾತಿನ ಜಟಾಪಟಿ ನಡೆಯಿತು.
ಘಟನೆ ಹಿನ್ನೆಲೆ : ವಿಧಾನ ಪರಿಷತ್ ಎನ್ ಡಿಎ ಮೈತ್ರಿ ಅಭ್ಯರ್ಥಿ ಡಾ.ವೈ.ಎ ನಾರಾಯಣಸ್ವಾಮಿ ಪರವಾಗಿ ನಿನ್ನೆ ಸ್ಥಳೀಯ ಬಿಜೆಪಿ ನಾಯಕರು ಪ್ರಚಾರ ಕೈಗೊಂಡು ಸರ್ಕಾರಿ ಶಾಲಾ- ಕಾಲೇಜುಗಳಿಗೆ ಬೇಟಿ ಶಿಕ್ಷಕರ ಬಳಿ ಮತಯಾಚನೆ ಮಾಡುವ ಸಂದರ್ಭದಲ್ಲಿ ಬಿಜೆಪಿ ನಾಯಕರಿಗೆ ಸರ್ಕಾರಿ ಶಾಲೆಯ ಮಕ್ಕಳ ಮುಖಾಂತರ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆಂದು ಆರೋಪಿ ಶಿಕ್ಷಕರ ನಡೆಯನ್ನ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಮದ್ಯ ಪ್ರವೇಶ ಮಾಡಿದ ಕಾಂಗ್ರೇಸ್ ಮುಖಂಡ ಮಧುಸೂದನ್ ಅವರು ಆಗಿರುವ ಘಟನೆಯನ್ನು ಒಪ್ಪಿಕೊಂಡು ಪುನಃ ಇಂತಹ ಕೆಲಸ ಮಾಡದಂತೆ ಎಚ್ಚರಿವಹಿಸಬೇಕೆಂದು ತಿಳಿಹೇಳಿ ಘಟನೆ ವಿಕೋಪಕ್ಕೆ ಹೋಗದಂತೆ ತಿಳಿಗೊಳಿಸಿದರು.
ಇನ್ನೂ ಕಾಂಗ್ರೇಸ್ ಮುಖಂಡ ಕುಂದಲಗುರ್ಕಿ ಮುನೀಂದ್ರ ಮಾತನಾಡಿ ಶಾಲೆಯ ಮಕ್ಕಳ ಕೈಯಲ್ಲಿ ಸ್ವಾಗತ ಮಾಡಿರುವುದು ಖಂಡಿಸಿ ಪ್ರತಿಭಟನೆ ಮಾಡಲು ಬಂದಿದ್ದೇವೆ. ಶಿಕ್ಷಕರು ತಪ್ಪೊಪ್ಪಿಕೊಂಡಿರುವ ನಿಟ್ಟಿನಲ್ಲಿ ಪ್ರತಿಭಟನೆ ಕೈ ಬಿಟ್ಟಿದ್ದೇವೆಂದು ತಿಳಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ಸೈಯಿದಾ ಇಶ್ರತ್ ಅವರು ಮಾತನಾಡಿ ಶಾಲೆ ಪ್ರಾರಂಭವಾಗುತ್ತಿರುವುದರಿಂದ ಮಕ್ಕಳಿಗೆ ಸ್ವಾಗತ ಮಾಡಬೇಕೆಂದು ಸರ್ಕಾರದ ಆದೇಶ ಇರುವ ನಿಟ್ಟಿನಲ್ಲಿ ನಾವು ಮಕ್ಕಳನ್ನು ಸ್ವಾಗತ ಮಾಡಲು ಸಿದ್ದತೆಗಳು ಮಾಡಿಕೊಂಡಿರುತ್ತೇವೆ. ಮಕ್ಕಳನ್ನು ನಿಲ್ಲಿಸಿಕೊಂಡು ಸ್ವಾಗತ ಹೇಳುವ ಸಂದರ್ಭದಲ್ಲಿ ಅದೇ ಸಮಯಕ್ಕೆ ಬಿಜೆಪಿ ಪಕ್ಷದ ಮುಖಂಡರು ಆಗಮಿಸಿರುತ್ತಾರೆ. ನಾವು ಅವರಿಗೆ ಪ್ರತ್ಯೇಕವಾಗಿ ಸ್ವಾಗತ ಹೇಳಿರುವುದಿಲ್ಲ. ಆಕಸ್ಮಿಕವಾಗಿ ಆಗಿದೆಯಷ್ಟೆ ಇದರಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ. ರಾಜಕೀಯಕ್ಕೂ ನಮಗೂ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದರು.
ಲಿಖಿತವಾಗಿ ದೂರು ಕೊಟ್ಟರೆ ಕ್ರಮ : ಘಟನೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ಘಟನೆಗೆ ಸಂಬಂಧಿಸಿದಂತೆ ದೂರು ಕೊಟ್ಟರೆ ಕ್ರಮ ಕೈಗೊಳ್ಳುತ್ತೆವೆಂದು ಹೇಳುವ ಮೂಲಕ ಸರಳವಾಗಿ ಜಾರಿಕೊಂಡರು.