ಶಾಸಕ ಬಿ.ಎನ್ ರವಿಕುಮಾರ್, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಚಾಲನೆ.
ಶಿಡ್ಲಘಟ್ಟ : ವಿಶ್ವ ಹಿಂದೂ ಪರಿಷತ್ ಭಜರಂಗ ಧಳದಿಂದ ಹಮ್ಮಿಕೊಂಡಿದ್ದ ಮರ್ಯಾದ ಪುರುಷ ಶ್ರೀರಾಮಚಂದ್ರನ ಮೆರವಣಿಗೆ ಶೋಭಾಯಾತ್ರೆ ಕಾರ್ಯಕ್ರಮ ಭಕ್ತಿ – ಭಾವ ಸಂಭ್ರಮ, ಸಡಗರದಿಂದ ಅದ್ದೂರಿಯಾ ನಡೆಯಿತು.
ತಾಲ್ಲೂಕಿನ ಹನುಮಂತಪುರ ಗೇಟ್ ಬಳಿಯಿರುವ ಶ್ರೀ ಆಂಜನೇಯಸ್ವಾಮಿ ಮೂರ್ತಿಗೆ ಪೂಜೆ ಸಲ್ಲಿಸಿ ಶಾಸಕ ಬಿ.ಎನ್ ರವಿಕುಮಾರ್ , ಬಿಜೆಪಿ ಮುಖಂಡರಾದ ಸೀಕಲ್ ರಾಮಚಂದ್ರಗೌಡ ಅವರು ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.
ಹನುಮಂತಪುರ ಗೇಟ್ ಬಳಿಯಿಂದ ಆರಂಭವಾದ ಶೋಭ ಯಾತ್ರೆ ದಿಬ್ಬೂರಹಳ್ಳಿ ರಸ್ತೆಯ ಮಾರ್ಗವಾಗಿ ಬಸ್ ನಿಲ್ದಾಣದವರೆಗೆ ಜೈ ಶ್ರೀರಾಮ್, ಜೈ ಶ್ರೀರಾಮ್ ಘೋಷಣೆಗಳು ಕೂಗುತ್ತಾ ಹಿಂದೂ ಕಾರ್ಯಕರ್ತರು ಹನುಮನ ಧ್ವಜಗಳು ಕೈಯಲ್ಲಿ ಹಿಡಿದು ಹಾರಿಸುವ ಮೂಲಕ ತಮಟೆ, ಡೊಳ್ಳು ಕುಣಿತ, ವೀರಗಾಸೆ, ವಿವಿಧ ಕಲಾತಂಡಗಳೊಂದಿಗೆ ಸರ್ಕಾರಿ ಬಸ್ ನಿಲ್ದಾಣದವರೆಗೆ ಮೆರವಣಿಗೆ ಸಾಗೀತು.ಶೋಭಾಯಾತ್ರೆಯಲ್ಲಿ ಮುಸ್ಲಿಂ ಸಮುದಾಯದ ಪತ್ರಬರಹಗಾರ ಅಂಜದ್ ಭಾಗವಹಿಸಿದ್ದು ವಿಶೇಷವಾಗಿತ್ತು.ಶೋಭಾಯಾತ್ರೆ ಮೆರವಣಿಗೆಯ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಜಾಗ್ರತವಾಗಿ ಪೊಲೀಸ್ ಇಲಾಖೆಯಿಂದ ಡಿವೈಎಸ್ಪಿ ಪಿ. ಮುರಳೀಧರ್ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಶ್ರೀರಾಮಚಂದ್ರಮೂರ್ತಿ ರಥದ ಮೆರವಣಿಗೆಯ ಮುಂದೆ ಪೊಲೀಸ್ ಡಿ.ಆರ್.ಎ ವಾಹನ, ಪೊಲೀಸ್ ಜೀಪ್ ಗಳು ಪೊಲೀಸರು ಬಿಗಿ ಬಂದೊಬಸ್ತ್ ನೊಂದಿಗೆ ಸಾಗಿಸಿದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯಶಸ್ವಿಯಾಗಿ ಶೋಭಾಯಾತ್ರೆ ಕಾರ್ಯಕ್ರಮ ನಡೆಯಿತು.